vijayanagara

ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಪ್ರಗತಿ ಪರಿಶೀಲನಾ ಸಭೆ

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಕಾರ್ಯದರ್ಶಿಗಳಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ರೈತರ ಬದುಕು ಮತ್ತು ಬವಣೆಗಳ ಬಗ್ಗೆ ಚೆಲ್ಲಾಟ ಆಡಿದರೆ ಹುಷಾರ್ : ಸಿಎಂ ಎಚ್ಚರಿಕೆ

ವಿಜಯನಗರ : ರೈತರಿಗೆ ಬೀಜ ಗೊಬ್ಬರದ ಕೊರತೆ ಆಗಬಾರದು. ಆದರೆ ನಿಮ್ಮನ್ನೇ ಹೊಣೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ಕುಡಿಯುವ ನೀರಿನ ವಿಚಾರದಲ್ಲಿ ಹೈಡ್ರಾಮ

ಹೊಸಪೇಟೆ: ಹೊಸಪೇಟೆಯ ಚಿತ್ತವಾಡ್ಗಿಯ ಶುದ್ಧ ಕುಡಿವ ನೀರಿನ ಘಟಕದ ಬಳಿ ಹೈಡ್ರಾಮ, ಕುಡಿವ ನೀರಿನ ಟ್ಯಾಂಕರ್ ಗಳಿಗೆ ನೀರು ಸರಬರಾಜು ವಿಚಾರದಲ್ಲಿ ಗಲಾಟೆ, ಮಾಜಿ ಸಚಿವ ಆನಂದ್ ಸಿಂಗ್ ಗೆ ಸಂಬಂಧಿಸಿದ ಟ್ರಾಕ್ಟರ್ಗಳಿಗೆ ನೀರು ತುಂಬೋ ವಿಚಾರದಲ್ಲಿ ಗಲಾಟೆ ಸಂಭವಿಸಿದೆ.

ಯೋಗ, ಆಹಾರ, ಜೀವನಕ್ರಮದಿಂದ ಮಧುಮೇಹ ದೂರ : ಡಾ.ಎಸ್.ಬಿ.ಹಂದ್ರಾಳರಿಂದ ವಿಶೇಷ ಯೋಗ ಶಿಬಿರ

ಹೊಸಪೇಟೆ: ಮಧುಮೇಹ ಎಂಬುದು ರೋಗ ಅಲ್ಲ, ಅದು ಅಶಿಸ್ತು ಜೀವನಕ್ರಮದ ಪ್ರತಿಬಿಂಬವಷ್ಟೇ. ಯೋಗ, ಸರಿಯಾದ ಆಹಾರ ಮತ್ತು ಶಿಸ್ತುಬದ್ಧ ಜೀವನ ಕ್ರಮದಿಂದ ನಮ್ಮನ್ನು ಮಧುಮೇಹ ಬಾಧಿಸದಂತೆ ಮಾಡಬಹುದು ಎಂದು ವೈದ್ಯರೂ ಆಗಿರುವ ಪತಂಜಲಿ ಯೋಗ ಸಮಿತಿಯ ಗದಗ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಡಾ.ಎಸ್.ಬಿ.ಹಂದ್ರಾಳ ಹೇಳಿದರು.

ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಹೇಳಿಕೆ

ಹೊಸಪೇಟೆ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣನರನ್ನು ಉಚ್ಚಾಟನೆ ಮಾಡಿದ್ದು ಅವರ ಪಕ್ಷದ ಆಂತರಿಕ ವಿಚಾರ ಅವರು ವಿದೇಶಕ್ಕೆ ಹಾರಿದ್ದಾರೆ ಅನ್ನೋದನ್ನ ನಾನು ಮಾಧ್ಯಮದಲ್ಲೇ ನೋಡಿ ತಿಳ್ಕೊಂಡಿದ್ದು ಬಿಜೆಪಿಯವರಿಗೆ ಯಾರು ಯಾವ ದೇಶಕ್ಕೆ ಹೋಗ್ತಾರೆ ಅನ್ಮೋದು ಗೊತ್ತಾಗ್ತದೆ ನಮ್ಮ ಪ್ರಿಯಾಂಕಾ ಗಾಂಧಿ ಹೋಗಿದ್ದೇಲ್ಲಾ ಹೇಳ್ತಾರೆ, ಆದ್ರೆ ಪ್ರಜ್ವಲ್ ರೇವಣ್ಣ ಹೋಗಿದ್ದು, ಬಿಜೆಪಿಗೆ ಗೊತ್ತಾಗೋಲ್ವಾ-?

ವಿಜಯನಗರ ಜಿಲ್ಲೆಯ ವಿವಿಧ ಹುದ್ದೆಗಳಿಗೆ ನೇಮಕ

ಹೊಸಪೇಟೆ : ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವಿಜಯನಗರ ಕ್ಷೇತ್ರದ ಶಾಸಕ HR ಗವಿಯಪ್ಪ ಅವರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಹೊಸಪೇಟೆಯ ಹುಡಾ ಅಧ್ಯಕ್ಷರಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಎನ್.ಎಫ್. ಇಮಾಮ್ ನಿಯಾಜಿ ನೇಮಕ ವಾಗಿದ್ದಾರೆ.

ವಿಜಯನಗರ ಜಿಲ್ಲಾ ಪೊಲೀಸರಿಂದ 10 ಕಿಮಿ ಮ್ಯಾರಾಥಾನ್

ಹೊಸಪೇಟೆ : ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಹಂಪಿಯ ವಿಜಯ ವಿಠ್ಠಲ ದೇಗುಲದಿಂದ 10 ಕಿಮೀ ಮ್ಯಾರಾಥಾನ್ ಆಯೋಜಿಸಿದ್ದು, ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿಎಲ್ ಚಾಲನೆ ನೀಡಿದ್ದು, IRB ಕಮಾಂಡೆಂಟ್ ರಾಮಕೃಷ್ಣ ಸಾಥ್ ನೀಡಿದರು.

ತುಂಗಭದ್ರಾ ನದಿ ನೀರು ಮತ್ತು ಮಣ್ಣಿನಲ್ಲಿ ಅಲ್ಯುಮಿನಿಯಂ ಲೋಹ ಪತ್ತೆ ಆತಂಕಕಾರಿ ವಿಷಯ : ವೈ.ಎಂ. ಸತೀಶ್

ಬೆಂಗಳೂರು : ಕರ್ನಾಟದಕ ಎಲ್ಲಾ ನದಿಗಳ ಎರೆಡೂ ದಡಗಳ 3, 5 ಅಥವಾ 10 ಕಿಲೋ ಮೀಟರ್ ವ್ಯಾಪ್ತಿಯನ್ನು `ಪರಿಸರ ಸೂಕ್ಷ್ಮ ಪ್ರದೇಶ’ ಎಂದು ಘೋಷಣೆ ಮಾಡಿ ನದಿ ನೀರಿನ ಮತ್ತು ಮಣ್ಣಿನ ಶುದ್ಧತೆಯನ್ನು ಕಾಪಾಡಲು ಸರ್ಕಾರ ಪ್ರಥಮ ಆದ್ಯತೆ ನೀಡಬೇಕು ಎಂದು ಬಳ್ಳಾರಿ – ವಿಜಯನಗರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯ ವೈ.ಎಂ. ಸತೀಶ್ ಅವರು ಆಗ್ರಹಿಸಿದ್ದಾರೆ.

ಸ್ಮರಣಾರ್ಥ  ಮೂರು ದಿನಗಳ ಫುಟ್ಬಾಲ್ ಪಂದ್ಯಾವಳಿ

ವಿಜಯನಗರ ಯುನೈಟೆಡ್ ಕ್ರೀಡಾ ಮತ್ತು ಸಾಂಸ್ಕತಿಕ ಸಂಸ್ಥೆಯಿಂದ ಪುನೀತ್ ರಾಜ್ಕು್ಮಾರ್ ಸ್ಮರಣಾರ್ಥ ಮೂರು ದಿನಗಳ ಫುಟ್ಬಾಲ್ ಪಂದ್ಯಾವಳಿ

ಅಯೋಧ್ಯೆಯಲ್ಲಿ ಯಶಸ್ವಿ ಬಯಲಾಟ ಪ್ರದರ್ಶನ ನಡೆಸಿ ವಿಜಯನಗರಕ್ಕೆ ಆಗಮಿಸಿದ ತಂಡ

ಹೊಸಪೇಟೆ : ಅಯೋಧ್ಯೆಯಲ್ಲಿ ಯಶಸ್ವಿಯಾಗಿ ಬಯಲಾಟ ಪ್ರದರ್ಶನ ನಡೆಸಿದ ಸಂಪೂರ್ಣ ರಾಮಾಯಣ ಬಯಲಾಟ ತಂಡ ತಮ್ಮ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿಕೊಂಡು ವಿಜಯನಗರಕ್ಕೆ ವಾಪಸ್ ಆಗಮಿಸಿದೆ .

Translate »
Scroll to Top