ವಿಜಯನಗರ ಜಿಲ್ಲಾ ಪೊಲೀಸರಿಂದ 10 ಕಿಮಿ ಮ್ಯಾರಾಥಾನ್

ಹೊಸಪೇಟೆ : ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಹಂಪಿಯ ವಿಜಯ ವಿಠ್ಠಲ ದೇಗುಲದಿಂದ 10 ಕಿಮೀ ಮ್ಯಾರಾಥಾನ್  ಆಯೋಜಿಸಿದ್ದು, ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿಎಲ್ ಚಾಲನೆ ನೀಡಿದ್ದು, IRB ಕಮಾಂಡೆಂಟ್ ರಾಮಕೃಷ್ಣ ಸಾಥ್  ನೀಡಿದರು.

 

ಹಂಪಿಯ ವಿಜಯ ವಿಠ್ಠಲ ದೇಗುಲದ ಗೋಪುರದಿಂದ ಪ್ರಾರಂಭವಾದ ಮ್ಯಾರಾಥಾನ್ ತಳವಾರಘಟ್ಟ ಗೇಟ್, ಶ್ರೀರಾಮನಗರ, ಕಮಲಾಪುರ ಮಾರ್ಗವಾಗಿ ಅಕ್ಕ ತಂಗಿಯರ ಗುಡ್ಡ, ಕೃಷ್ಣ ದೇವಾಲಯ, ಹೇಮಕೂಟ ಮೂಲಕ ಸಾಗಿ ಎದುರು ಬಸವಣ್ಣ ವೇದಿಕೆಗೆ ಮುಕ್ತಾಯವಾಯಿತು.

ಹೊಸೂರಿನ  ಮಧು ಮೋಹನ್ ಎಂಬ ವಿದ್ಯಾರ್ಥಿ 8.45 ನಿಮಿಷಗಳಲ್ಲಿ  10 ಕಿಮೀ ಮ್ಯಾರಾಥಾನ್ ಓಟ ಓಡಿ ಮೊದಲ ಬಹುಮಾನ ಪಡೆದಿದ್ದಾನೆ. ಈತ ಹೊಸಪೇಟೆಯ ಶಂಕರ್ ಆನಂದ್ ಸಿಂಗ್ ಕಾಲೇಜ್ ನ BA 3 Seem ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾನೆ.

 

ಹೊಸಪೇಟೆಯ ಗೌಳೇರಹಟ್ಟಿಯ ವಿನಯ್  ಎರಡನೇ ಸ್ಥಾನ ಪಡೆದಿದ್ದಾರೆ . ವಿಜಯನಗರ ಕಾಲೇಜ್ ನ BA ಮೊದಲ ವರ್ಷದ ವಿದ್ಯಾರ್ಥಿ ವಿಕಲ ಚೇತನ ಶೇಕ್ಷಾವಲಿ ಮೂರನೇ ಸ್ಥಾನ ಪಡೆದಿದ್ದಾನೆ 

ಈ ಸಂದರ್ಭದಲ್ಲಿ ಎಎಸ್ಪಿ ಸಲೀಂಪಾಷ, ಡಿವೈಎಸ್ಪಿ ಶರಣಬಸವೇಶ್ವರ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯ PI ಲಖನ್‌ ಮಸಗುಪ್ಪಿ,  ಗ್ರಾಮೀಣ ಠಾಣೆಯ ಪಿಐ ಗುರುರಾಜ್ ಕಟ್ಟಿಮನಿ, ಚಿತ್ತವಾಡ್ಗಿ ಪಿಐ ಅಶ್ವಥ್ ನಾರಾಯಣ, ಸಿಪಿಐ ಯಾತನೂರು, ಟಿಬಿ ಡ್ಯಾಂ ಪಿಐ  ಶ್ರೀಕಾಂತ್, ಸಂಚಾರಿ ಪಿಐ  ಮಲ್ಲನಗೌಡ ನಾಯ್ಕರ್, ಹಂಪಿ ಪಿಎಸ್ಐ ಶಿವಕುಮಾರ್ ನಾಯ್ಕ್, ಕಮಲಾಪುರ ಪಿಎಸ್ಐ ಹನುಮಂತಪ್ಪ ತಳವಾರ ಇತರರಿದ್ದರು

Facebook
Twitter
LinkedIn
WhatsApp
Email
Print
Telegram

Leave a Comment

Your email address will not be published. Required fields are marked *

Translate »
Scroll to Top