ಚಿಕ್ಕಬಳ್ಳಾಪುರ

ಶಿಡ್ಲಘಟ್ಟಕ್ಕೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ

ಶಿಡ್ಲಘಟ್ಟ, ಮಾ,7 : ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟಕ್ಕೆ ಸೋಮವಾರ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ಅದ್ದೂರಿ ಸ್ವಾಗತ. ಶಾಸಕ ವಿ. ಮುನಿಯಪ್ಪ, ಮಾಜಿ ಶಾಸಕ ನಾಗರಾಜ್ ಮತ್ತಿತರರು ಹಾಜರಿದ್ದರು.

ಎಚ್ಎಎಲ್ ದೇವರಾಜ್ ವಿರುದ್ಧ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಿಕನ್ ವಿಜಯ ಗರಂ

ಶಿಡ್ಲಘಟ್ಟ,ಫೆ,23: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಣ್ಣನವರು ಇನ್ನು ಯಾರಿಗೂ ಮುಂದಿನ ಚುನಾವಣೆಗೆ ಟಿಕೆಟ್ ಕನ್ಫರ್ಮ್ ಮಾಡಿಲ್ಲ ಎಂದು ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಿಕ್ಕನ್ ವಿಜಯ ತಿಳಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಾಜ ಸೇವೆಯ ಹೆಸರು ಹೇಳಿಕೊಂಡು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಎಚ್ಎಎಲ್ ದೇವರಾಜ್ ಅವರು ಶಾಸಕರು ಆಯೋಜಿಸಿದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು ಜನರನ್ನು ನಂಬಿಸಿ ಮುಂದಿನ ಚುನಾವಣೆಗೆ ನಾನೇ ಆಕಾಂಕ್ಷಿ ಎಂದು ಹಿಂಬದಿಯಿಂದ ಕೆಲ ರೈತರ ಬಳಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ …

ಎಚ್ಎಎಲ್ ದೇವರಾಜ್ ವಿರುದ್ಧ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಿಕನ್ ವಿಜಯ ಗರಂ Read More »

ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಕ್ಕಳೊಂದಿಗೆ ಕರಾಟೆ ಪ್ರದರ್ಶನ

ಚಿಕ್ಕಬಳ್ಳಾಪುರ,9 :ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಕಿರುಕುಳ ಪ್ರಕರಣಗಳನ್ನು ಶೂನ್ಯಗೊಳಿಸುವ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಆತ್ಮರಕ್ಷಣೆಗಾಗಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಜ್ಯ ಸರ್ಕಾರ ರೂಪಿಸಿರುವ “ಓಬವ್ವ ಆತ್ಮ ರಕ್ಷಣಾ ಕಲೆಯ ಕೌಶಲ್ಯಗಳ ತರಬೇತಿ” ಕಾರ್ಯಕ್ರಮಕ್ಕೆ ಇಂದು ಪೌರಾಡಳಿತ, ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವ ಎಂಟಿಬಿ ನಾಗರಾಜು ಚಾಲನೆ ನೀಡಿದರು. ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನಂದಿ ರಂಗಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ …

ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರಿಂದ ಮಕ್ಕಳೊಂದಿಗೆ ಕರಾಟೆ ಪ್ರದರ್ಶನ Read More »

ಕವಿ ಕೆ.ಎಸ್.ನಿಸಾರ್ ಅಹಮದ್ ಪುತ್ಥಳಿ ಅನಾವರಣ

ಚಿಕ್ಕಬಳ್ಳಾಪುರ,7 :ತಾಲ್ಲೂಕಿನ ಮೊಟ್ಲೂರು ಗ್ರಾಮದಲ್ಲಿ ಇಂದು ನಿತ್ಯೋತ್ಸವ ಕವಿ ಪದ್ಮಶ್ರೀ ಪುರಸ್ಕೃತ ನಾಡೋಜ ಕೆ.ಎಸ್. ನಿಸಾರ್ ಅಹಮದ್ ಅವರ ಪುತ್ಥಳಿ ಅನಾವರಣ ಹಾಗೂ ನಿಸಾರ್ ಇನ್ಸಿಟ್ಯೂಟ್ ಆಫ್ ಎಜುಕೇಶನ್ ಟ್ರಸ್ಟ್ ಗೆ ಪೌರಾಡಳಿತ ಮತ್ತು ಸಣ್ಣ ಕೈಗಾರಿಕಾ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವ ಎಂಟಿಬಿ ನಾಗರಾಜು, ಕಂದಾಯ ಸಚಿವ ಆರ್.ಅಶೋಕ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಯು.ಟಿ.ಖಾದರ್, ಖ್ಯಾತ ಕವಿ ಬಿ.ಆರ್. ಲಕ್ಷ್ಮಣ …

ಕವಿ ಕೆ.ಎಸ್.ನಿಸಾರ್ ಅಹಮದ್ ಪುತ್ಥಳಿ ಅನಾವರಣ Read More »

ಡಾ. ಕೆ. ಸುಧಾಕರ್ ಅವರಿಂದ ಜಿಲ್ಲಾ ಆಸ್ಪತ್ರೆಗೆ ಭೇಟಿ

ಚಿಕ್ಕಬಳ್ಳಾಪುರ,5 : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ರವರು ಶನಿವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಡಯಲೀಸಿಸ್ ಘಟಕ, ಪ್ರಸೂತಿ ವಿಭಾಗ, ಮಕ್ಕಳ ಚಿಕಿತ್ಸಾ ವಿಭಾಗ ಹಾಗೂ ಪ್ರಯೋಗಾಲಯಕ್ಕೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ವೈದ್ಯಕೀಯ ಚಿಕಿತ್ಸೆಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಆನಂದರೆಡ್ಡಿ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ. ರುದ್ರಮೂರ್ತಿ, ನಿವಾಸಿ ವೈದ್ಯಧಿಕಾರಿ ಡಾ.ರಮೇಶ್, …

ಡಾ. ಕೆ. ಸುಧಾಕರ್ ಅವರಿಂದ ಜಿಲ್ಲಾ ಆಸ್ಪತ್ರೆಗೆ ಭೇಟಿ Read More »

ಜಾತಿ ನಿಂದನೆಯ ಮುಖ್ಯ ಆರೋಪಿಯನ್ನು ಬಂಧಿಸಿ

ಶಿಡ್ಲಘಟ್ಟ : ಎಬಿಡಿ ಗ್ರೂಪ್ ರಾಜೀವ್ ಗೌಡರ ಸಮಾಜ ಸೇವೆಯನ್ನ ನಾವು ಗೌರವಿಸುತ್ತೇನೆ, ಜಾತಿಗೆ ದಕ್ಕೆ ಬರುವಂತ ಸನ್ನಿವೇಶ ಬಂದಲ್ಲಿ ಅವರ ಸೇವೆ ನಮಗೆ ಬೇಡ ಎಂದು ಮಾದಿಗ ದಂಡೋರ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ದೇವರಾಜ್ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಪಾದಯಾತ್ರೆ ದಿನದಂದು ಕ್ಷೇತ್ರದ ಜನರನ್ನು ಬಸ್ ಗಳಲ್ಲಿ ಕರೆದುಕೊಂಡು ಹೊರಟ ಸಂದರ್ಭದಲ್ಲಿ ಬ್ಯಾನರ್ ವಿಚಾರಕ್ಕೆ ಎಬಿಡಿ ಗ್ರೂಪ್ ರಾಜೀವ್ ಗೌಡರ ಪೇಸ್ ಬುಕ್ ನಲ್ಲಿ ಜಾತಿಯ ಬಗ್ಗೆ ಅವಹೇಳನ …

ಜಾತಿ ನಿಂದನೆಯ ಮುಖ್ಯ ಆರೋಪಿಯನ್ನು ಬಂಧಿಸಿ Read More »

ವಿಜೃಂಭಣೆಯಿಂದ ಆಚರಿಸಿದ ಸಂಕ್ರಾಂತಿ

ಚಿಕ್ಕಬಳ್ಳಾಪುರ,ಜನವರಿ,16 : ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಹಾಗೂ ಚಿಕ್ಕತೇಹಳ್ಳಿ ಗ್ರಾಮಗಳಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.ರೈತರು ಧನಕರುಗಳನ್ನು ತಮ್ಮದೇ ಆದ ಶೈಲಿಯಲ್ಲಿ ಶೃಂಗಾರ ಮಾಡಿ ಊರಿನ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಇನ್ನು ಇದರ ಜೊತೆಗೆ ಅಣ್ಣಮ್ಮ ತಮಟೆ ಕಲಾ ತಂಡದಿಂದ ನಾಸಿಕ್ ಡ್ರಮ್ಸ್ ನಿಂದ ನೃತ್ಯವನ್ನು ಏರ್ಪಡಿಸಲಾಗಿತ್ತು. ಹಬ್ಬಗಳ ಹಿಂದೆಯೂ ಒಂದೊಂದು ರೀತಿಯ ವೈಶಿಷ್ಟ್ಯವಿದೆ.ಸಾಮಾನ್ಯವಾಗಿ ನಾವು ಆಚರಿಸುವ ಎಲ್ಲ ಹಬ್ಬಗಳು ಕೃಷಿಯನ್ನು ಅವಲಂಬಿಸಿ ಹುಟ್ಟಿಕೊಂಡವುಗಳಾಗಿವೆ. ಅದರಲ್ಲೂ ಸಂಕ್ರಾಂತಿಯಂತು ಧಾನ್ಯಲಕ್ಷ್ಮಿ …

ವಿಜೃಂಭಣೆಯಿಂದ ಆಚರಿಸಿದ ಸಂಕ್ರಾಂತಿ Read More »

ಮೇಕೆದಾಟು ಪಾದಯಾತ್ರೆಗೆ ಕೈಜೋಡಿಸಿದ- ರಾಜೀವ್ ಗೌಡ

ಶಿಡ್ಲಘಟ್ಟ,,ಜ,10 :‘ಜನತೆಗೆ ಮೂಲಸೌಕರ್ಯಗಳಲ್ಲಿ ಬಹುಮುಖ್ಯವಾಗಿ ಬೇಕಾಗಿರುವ ನೀರಾವರಿ ಯೋಜನೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ, ಮೇಕೆದಾಟು ಯೋಜನೆಯಿಂದ ನೀರು ತರಲಿಕ್ಕಾಗಿ ಪಾದಯಾತ್ರೆಯನ್ನು ಹಮ್ಮಿಕೊಂಡಿದೆ’ ಮೇಕೆದಾಟು ಪಾದಯಾತ್ರೆಯಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ಎಂದು ಎಬಿಡಿ ಗ್ರೂಪ್ ನ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಹೇಳಿದರು. ಶಿಡ್ಲಘಟ್ಟ ನಗರದ ಕನಕ ನಗರದಲ್ಲಿರುವ ಎಬಿಡಿ ಗ್ರೂಪ್ ಕಚೇರಿಯಲ್ಲಿ ಆಯೋಜಿಸಿದ್ದ ತಾಲ್ಲೂಕಿನ ಕಾಂಗ್ರೆಸ್ ನಾಯಕರ ಜೊತೆ ನಮ್ಮ ನೀರು ನಮ್ಮ ಹಕ್ಕು ಮೇಕೆದಾಟಿಗೆ ಪಾದಯಾತ್ರೆ’ ಕುರಿತು ಅವರು ಮಾತನಾಡಿದರು. ಮೇಕೆದಾಟು ಯೋಜನೆಯಿಂದ …

ಮೇಕೆದಾಟು ಪಾದಯಾತ್ರೆಗೆ ಕೈಜೋಡಿಸಿದ- ರಾಜೀವ್ ಗೌಡ Read More »

ಇಂದು ಬೆಳಗ್ಗೆ 7 ರಿಂದ 7.30 ರ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕಡೆಗಳಲ್ಲಿ ಲಘು ಭೂಕಂಪ

ಚಿಕ್ಕಬಳ್ಳಾಪುರ: ಇಂದು ಬೆಳಗ್ಗೆ 7 ರಿಂದ 7.30 ರ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕಡೆಗಳಲ್ಲಿ  ಲಘು ಭೂಕಂಪವಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಇಂದು ಎರಡು ಬಾರಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.9 ರಿಂದ 3 ತೀವ್ರತೆ ದಾಖಲಾಗಿದೆ. ಜಿಲ್ಲೆಯ ಮಂಡಿಕಲ್, ಭೋಗಪರ್ತಿ ಸೇರಿದಂತೆ ಸುತ್ತಮುತ್ತಲಿನ‌ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಬೆಳಗ್ಗೆ ಸುಮಾರು 7 ರಿಂದ 14 ನಿಮಿಷದ ಸಮಯದಲ್ಲಿ ಭೂಮಿ ಕಂಪಿಸಿರುವ  ಬಗ್ಗೆ ದಾಖಲಾಗಿದೆ. ಈ ಲಘು ಭೂಕಂಪದ ಕುರಿತು ಕರ್ನಾಟಕ ರಾಜ್ಯ …

ಇಂದು ಬೆಳಗ್ಗೆ 7 ರಿಂದ 7.30 ರ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕಡೆಗಳಲ್ಲಿ ಲಘು ಭೂಕಂಪ Read More »

ಕಾರ್ಮಿಕರು ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ: ರಾಜೀವ್ ಗೌಡ

ಶಿಡ್ಲಘಟ್ಟ: ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಮೂಲ ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಬಿಡಿ ಗ್ರೂಪ್ ಚೇರ್ಮನ್ ರಾಜೀವ್ ಗೌಡ ತಿಳಿಸಿದರು. ನಗರದ ಮಾರಮ್ಮ ವೃತ್ತ ಬಳಿ ತಾಲ್ಲೂಕು ಮರಕೆಲಸಕಾರ್ಮಿಕರ ಕಛೇರಿ ಉದ್ಘಾಟನೆ ಹಾಗೂ ಹಳೆಯ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸರ್ಕಾರದಿಂದ ಸಾಕಷ್ಟು ಮೂಲ ಸೌಲಭ್ಯಗಳನ್ನು ನೀಡುತ್ತಿದೆ.ತಾಲೂಕಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಷ್ಟೋ ಕಾರ್ಮಿಕರು ಇದರ ಲಾಭವನ್ನು ಪಡೆಯುತ್ತಿದ್ದಾರೆ ಎಲ್ಲಾ ಕಾರ್ಮಿಕರು ಸದುಪಯೋಗ …

ಕಾರ್ಮಿಕರು ಸರ್ಕಾರಿ ಸೌಲಭ್ಯ ಬಳಸಿಕೊಳ್ಳಿ: ರಾಜೀವ್ ಗೌಡ Read More »

Translate »
Scroll to Top