ಚಿಕ್ಕಬಳ್ಳಾಪುರ,ಜನವರಿ,16 : ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸರಹಳ್ಳಿ ಹಾಗೂ ಚಿಕ್ಕತೇಹಳ್ಳಿ ಗ್ರಾಮಗಳಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.ರೈತರು ಧನಕರುಗಳನ್ನು ತಮ್ಮದೇ ಆದ ಶೈಲಿಯಲ್ಲಿ ಶೃಂಗಾರ ಮಾಡಿ ಊರಿನ ಬೀದಿ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಇನ್ನು ಇದರ ಜೊತೆಗೆ ಅಣ್ಣಮ್ಮ ತಮಟೆ ಕಲಾ ತಂಡದಿಂದ ನಾಸಿಕ್ ಡ್ರಮ್ಸ್ ನಿಂದ ನೃತ್ಯವನ್ನು ಏರ್ಪಡಿಸಲಾಗಿತ್ತು.

ಹಬ್ಬಗಳ ಹಿಂದೆಯೂ ಒಂದೊಂದು ರೀತಿಯ ವೈಶಿಷ್ಟ್ಯವಿದೆ.ಸಾಮಾನ್ಯವಾಗಿ ನಾವು ಆಚರಿಸುವ ಎಲ್ಲ ಹಬ್ಬಗಳು ಕೃಷಿಯನ್ನು ಅವಲಂಬಿಸಿ ಹುಟ್ಟಿಕೊಂಡವುಗಳಾಗಿವೆ. ಅದರಲ್ಲೂ ಸಂಕ್ರಾಂತಿಯಂತು ಧಾನ್ಯಲಕ್ಷ್ಮಿ ಮನೆಗೆ ತುಂಬಿದ ಸಂಭ್ರಮದಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ. ಕಾಲ ಬದಲಾದಂತೆ ಸಂಪ್ರದಾಯದತ್ತವಾಗಿ ಬಂದ ಹಬ್ಬಗಳ ಆಚರಣೆಯಲ್ಲಿ ಬದಲಾವಣೆಗಳಾಗಿವೆ. ಸದಾ ಹಣವನ್ನು ನೋಡುವವರು ತಾವು ಮಾಡಿದ ಸಂಪಾದನೆಯಲ್ಲಿ ಒಂದಷ್ಟು ಹಣವನ್ನು ಖರ್ಚುಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದರಿಂದ ತಮಗೆ ಬೇಕಾದ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಬಣ್ಣಬಣ್ಣಗಳಿಂದ ಕಂಗೊಳಿಸುತ್ತಿದ್ದ ಧನಕರುಗಳ ನೋಡಲು ಪಕ್ಕದ ಊರುಗಳಿಂದ ಜನರು ಬಂದಿದ್ದರು.ಇನ್ನು ಊರಿನ ಯುವಕರು, ಹಿರಿಯರೆಲ್ಲರೂ ಕಲಾ ತಂಡದ ಜೊತೆ ಸೇರಿ ಕುಣಿದು ಕುಪ್ಪಳಿಸಿದರು.
