ಇಂದು ಬೆಳಗ್ಗೆ 7 ರಿಂದ 7.30 ರ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕಡೆಗಳಲ್ಲಿ ಲಘು ಭೂಕಂಪ

ಚಿಕ್ಕಬಳ್ಳಾಪುರ: ಇಂದು ಬೆಳಗ್ಗೆ 7 ರಿಂದ 7.30 ರ ಸಮಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೆಲವು ಕಡೆಗಳಲ್ಲಿ  ಲಘು ಭೂಕಂಪವಾಗಿರುವ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಇಂದು ಎರಡು ಬಾರಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 2.9 ರಿಂದ 3 ತೀವ್ರತೆ ದಾಖಲಾಗಿದೆ. ಜಿಲ್ಲೆಯ ಮಂಡಿಕಲ್, ಭೋಗಪರ್ತಿ ಸೇರಿದಂತೆ ಸುತ್ತಮುತ್ತಲಿನ‌ ಗ್ರಾಮಗಳ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ಬೆಳಗ್ಗೆ ಸುಮಾರು 7 ರಿಂದ 14 ನಿಮಿಷದ ಸಮಯದಲ್ಲಿ ಭೂಮಿ ಕಂಪಿಸಿರುವ  ಬಗ್ಗೆ ದಾಖಲಾಗಿದೆ. ಈ ಲಘು ಭೂಕಂಪದ ಕುರಿತು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ ವರದಿ ನೀಡಿದೆ. ಯಾವುದೇ ಆಸ್ತಿಪಾಸ್ತಿ,ಪ್ರಾಣ ಹಾನಿಯಾಗಿಲ್ಲ.ಲಘು ಭೂಕಂಪನವನ್ನು ರಾಜ್ಯ ನೈಸರ್ಗಿಕ ವಿಪತ್ತು ನಿಗಾ ಕೇಂದ್ರ ದೃಢೀಕರಿಸಿದೆ.

Leave a Comment

Your email address will not be published. Required fields are marked *

Translate »
Scroll to Top