ಎಚ್ಎಎಲ್ ದೇವರಾಜ್ ವಿರುದ್ಧ ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಿಕನ್ ವಿಜಯ ಗರಂ

ಶಿಡ್ಲಘಟ್ಟ,ಫೆ,23: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅಣ್ಣನವರು ಇನ್ನು ಯಾರಿಗೂ ಮುಂದಿನ ಚುನಾವಣೆಗೆ ಟಿಕೆಟ್ ಕನ್ಫರ್ಮ್ ಮಾಡಿಲ್ಲ ಎಂದು ಯುವ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಚಿಕ್ಕನ್ ವಿಜಯ ತಿಳಿಸಿದ್ದಾರೆ. ಶಿಡ್ಲಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಮಾಜ ಸೇವೆಯ ಹೆಸರು ಹೇಳಿಕೊಂಡು ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಎಚ್ಎಎಲ್ ದೇವರಾಜ್ ಅವರು ಶಾಸಕರು ಆಯೋಜಿಸಿದ ಕಾರ್ಯಕ್ರಮದಲ್ಲಿ ವೇದಿಕೆ ಹಂಚಿಕೊಂಡು ಜನರನ್ನು ನಂಬಿಸಿ ಮುಂದಿನ ಚುನಾವಣೆಗೆ ನಾನೇ ಆಕಾಂಕ್ಷಿ ಎಂದು ಹಿಂಬದಿಯಿಂದ ಕೆಲ ರೈತರ ಬಳಿ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾರೆ ಎಚ್ಎಲ್ ದೇವರಾಜ್ ವಿರುದ್ಧ ಗರಂ ಆಗಿದ್ದಾರೆ. ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯಲ್ಲಿ ಭಾಗವಹಿಸಲು ಕ್ಷೇತ್ರದಲ್ಲಿ ಡಿಕೆಶಿ ಅಣ್ಣನವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.ತಾಲ್ಲೂಕು ಖಾಲಿ ಇರುವ ಕ್ಷೇತ್ರ ಅಲ್ಲ,ಹಾಲಿ ಶಾಸಕರು ಇರುವ ಕ್ಷೇತ್ರ.ಇಲ್ಲಿನ ಸಮಾಜ ಸೇವಕರು ಅವರಿಗೆ  ಇಷ್ಟಬಂದ ರೀತಿಯಲ್ಲಿ ಹೇಳಿ ಕೊಳ್ಳುತ್ತಿದ್ದಾರೆ. ಎಂದರು.

ಕಾಂಗ್ರೆಸ್ ಸೇರ್ಪಡೆಯಾಗಿ ಎಚ್ಎಎಲ್ ದೇವರಾಜ್ ಮೂರು ತಿಂಗಳು ಆಗಿದೆ ಪಕ್ಷಕ್ಕೆ ಸೇರ್ಪಡೆಯಾಗಿ ಆಗಲೇ ಒಬ್ಬ ರೈತನ ಬಳಿ ಹೇಳ್ತಾರಂತೆ ಡಿಕೆ ಶಿವಕುಮಾರ್ ನನಗೆ ಟಿಕೆಟ್ ಅಂತ ಹೇಳಿದ್ದಾರೆ ಎಂದು ಅವರಿಗೆ ಐವತ್ತು ಸಾವಿರ ರೂಪಾಯಿಯ ವಾಚ್ ಗಳು ಮತ್ತು ಸೀರೆ ಮತ್ತೊಂದು ಕೊಡ್ತೀನಿ ಎಂದು ಹೇಳಿಕೊಂಡಿದ್ದಾರೆ. ಶಾಸಕರ ಜೊತೆ ಹಾಗೂ ಪ್ರಚಾರಗಳಲ್ಲಿ ಹೇಳ್ತಾರೆ ನಮ್ಮ ಮುಂದಿನ ನಾಯಕರು ಮುನಿಯಪ್ಪ ನೇ ಅಂತಾರೆ,ಆದ್ರೆ ಅವರ ಪಿ ಎ ಬಂದು ಕಾರ್ಯಕ್ರಮದಲ್ಲಿ ವಿಸಿಟಿಂಗ್ ಕಾರ್ಡ್ ಕೊಟ್ಟು ಮುಂದಿನ ಚುನಾವಣೆಗೆ ಆಕಾಂಕ್ಷಿ ನಮ್ಮ ದೇವರಾಜಣ್ಣ ಅಂತಲೇ ಹೇಳಿಕೊಂಡು ಬರ್ತಿದ್ದಾರೆ. ಇನ್ನು ಡಿ.ಕೆ.ಶಿವಕುಮಾರ್ ಗೆ ಇವರ ನಾಮದೇಯನೇ ಗೊತ್ತಿಲ್ಲ ಎಂದು ನನಗೆ ತಿಳಿಸಿದ್ದಾರೆ.ಸುಮ್ನೆ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಗ್ರಾಮ ಪಂಚಾಯತಿ ಬಿಜೆಪಿ ಬೆಂಬಲಿತನಾಗಿ ಸದಸ್ಯರಾಗಿದ್ದವರು ಅವರ ಕ್ಷೇತ್ರವನ್ನು ಅಭಿವೃದ್ಧಿ ಮಾಡದೇ ಬೇರೆ ಕ್ಷೇತ್ರದಲ್ಲಿ ಬಂದು ಏನು ಅಭಿವೃದ್ಧಿ ಮಾಡ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Leave a Comment

Your email address will not be published. Required fields are marked *

Translate »
Scroll to Top