ಶಿಡ್ಲಘಟ್ಟ: ಕಾರ್ಮಿಕರಿಗಾಗಿ ಸರ್ಕಾರ ಹಲವಾರು ಮೂಲ ಸೌಲಭ್ಯಗಳನ್ನು ನೀಡುತ್ತಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಎಬಿಡಿ ಗ್ರೂಪ್ ಚೇರ್ಮನ್ ರಾಜೀವ್ ಗೌಡ ತಿಳಿಸಿದರು. ನಗರದ ಮಾರಮ್ಮ ವೃತ್ತ ಬಳಿ ತಾಲ್ಲೂಕು ಮರಕೆಲಸಕಾರ್ಮಿಕರ ಕಛೇರಿ ಉದ್ಘಾಟನೆ ಹಾಗೂ ಹಳೆಯ ಪದಾಧಿಕಾರಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ಸರ್ಕಾರದಿಂದ ಸಾಕಷ್ಟು ಮೂಲ ಸೌಲಭ್ಯಗಳನ್ನು ನೀಡುತ್ತಿದೆ.ತಾಲೂಕಾದ್ಯಂತ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಎಷ್ಟೋ ಕಾರ್ಮಿಕರು ಇದರ ಲಾಭವನ್ನು ಪಡೆಯುತ್ತಿದ್ದಾರೆ ಎಲ್ಲಾ ಕಾರ್ಮಿಕರು ಸದುಪಯೋಗ ಪಡೆದುಕೊಳ್ಳಿ ಎಂದರು.

ಸಂಘದ ಅಧ್ಯಕ್ಷ ಪ್ರದೀಪ್ (ದೀಪು) ಮಾತನಾಡಿ ಮರ ಕೆಲಸ ಕಾರ್ಮಿಕರ ವರ್ಗಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಸಂಘ ಕಾರ್ಯ ಚಟುವಟಿಕೆ ನಡೆಸಬೇಕಿದೆ. ಸರ್ಕಾರ ಸೌಲಭ್ಯಗಳ ಬಗ್ಗೆ ಕಾರ್ಮಿಕರಲ್ಲಿ ಅರಿವು ಮೂಡಿಸಿ ಸೌಲತ್ತುಗಳನ್ನು ಒದಗಿಸಿಕೊಡುವ ಮಹತ್ತರ ಜವಾಬ್ದಾರಿ ಸಂಘದ ಮೇಲಿದೆ ಎಂದರು. ಜಿಲ್ಲಾ ಕಾರ್ಮಿಕ ಅಧಿಕಾರಿ ವರಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಕಾರ್ಮಿಕರಿಗೆ ಶುಭ ಹಾರೈಸಿದರು.

ಜಿಲ್ಲಾಧ್ಯಕ್ಷರಾದ ವೆಂಕಟೇಶ್,ಖಜಾಂಚಿ ರಾಮು, ತಾಲೂಕು ಪ್ರಧಾನ ಕಾರ್ಯದರ್ಶಿ ಬಾಬು, ಪ್ರಭಾಕರ, ಹರಿನಾಥ್, ಯೂಸುಪ್, ಮುಜಾಹಿದ್ ಪಾಷಾ, ಗಜೇಂದ್ರ ಚಾರಿ,ಬಾಲಗಂಗಾಧರ್,ರಾಮಾಂಜನೇಯ ರಮೇಶ್,ಶಂಕ್ರಪ್ಪ,ಪ್ರಕಾಶ್,ಹರೀಶ್ ಖಾದರ್ ಪಾಷಾ, ಯಾಸಿನ್ ಪಾಷಾ, ಕೆ ಮಂಜುನಾಥ್, ಹಾಗೂ ತಾಲ್ಲೂಕಿನ ಎಲ್ಲಾ ಮರಕೆಲಸಕಾರ್ಮಿಕರು ಹಾಜರಿದ್ದರು.
ವರದಿ ಮಾನಸ್