LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
National News

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

ಪಣಜಿ: ಹಿಂದಿ ಹಾಗೂ ಮರಾಠಿ ಚಿತ್ರರಂಗದ ಬಹುಮುಖ ಪ್ರತಿಭೆ, ಸಹಜ ಹಾಗೂ ಪ್ರಭಾವಶಾಲಿ ಅಭಿನಯಕ್ಕೆ ಹೆಸರಾಗಿದ್ದ ಹಿರಿಯ ನಟ ನಾನಾ ಪಾಟೇಕರ್ (76) ಅವರು ಗುರುವಾರ ಮುಂಜಾನೆ ಗೋವಾದ ಡೊನಾ ಪೌಲಾದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು.

ಪಣಜಿ ಸಮೀಪದ ಡೊನಾ ಪೌಲಾದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಪಾಟೇಕರ್ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಸುಮಾರು 45 ನಿಮಿಷಗಳ ಕಾಲ ಸಿಪಿಆರ್ ಚಿಕಿತ್ಸೆ ನೀಡಿದರೂ ಅವರನ್ನು ಬದುಕಿಸಲು ಸಾಧ್ಯವಾಗಲಿಲ್ಲ. ಬೆಳಗಿನ ಜಾವ 5.10ಕ್ಕೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದರು ಎಂದು ಹಿರಿಯ ವೈದ್ಯ ಡಾ. ಶೇಖರ್ ಸಾಲ್ಕರ್ ತಿಳಿಸಿದ್ದಾರೆ.

ಮುಂಜಾನೆ ಸ್ನೇಹಿತರಿಗೆ ಸಂದೇಶ

ಪಾಟೇಕರ್ ಅವರು ಮುಂಜಾನೆ ಸುಮಾರು 3.30ಕ್ಕೆ ತಮಗೆ ಆರೋಗ್ಯ ಸರಿಯಿಲ್ಲ ಎಂದು ಸ್ನೇಹಿತರೊಬ್ಬರಿಗೆ ಸಂದೇಶ ಕಳುಹಿಸಿದ್ದರು. ಬೆಳಗಿನ ಜಾವ 4ರ ಸುಮಾರಿಗೆ ಸ್ನೇಹಿತರು ಸಂದೇಶ ಗಮನಿಸಿ ಕೂಡಲೇ ಅವರ ನಿವಾಸಕ್ಕೆ ಧಾವಿಸಿದ್ದರು.

ಪಾಟೇಕರ್ ಅವರು ಕೇರ್‌ಟೇಕರ್‌ನೊಂದಿಗೆ ವಾಸಿಸುತ್ತಿದ್ದರು. ಕೇರ್‌ಟೇಕರ್ ಆಸ್ಪತ್ರೆಗೆ ಮಾಹಿತಿ ನೀಡಿದ ಬಳಿಕ ನಿವಾಸಕ್ಕೆ ಆಂಬ್ಯುಲೆನ್ಸ್ ಕಳುಹಿಸಲಾಗಿತ್ತು. ಆಂಬ್ಯುಲೆನ್ಸ್‌ನಲ್ಲೇ ಪ್ರಾಥಮಿಕ ಚಿಕಿತ್ಸೆಯನ್ನು ಆರಂಭಿಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಅವರ ನಿವಾಸ ಆಸ್ಪತ್ರೆಯಿಂದ ಸುಮಾರು ಐದು ನಿಮಿಷಗಳ ದೂರದಲ್ಲಿತ್ತು.

ಪಾಟೇಕರ್ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿರುವ ಶಂಕೆ ವ್ಯಕ್ತವಾಗಿದ್ದು, ನಿಖರ ಸಾವಿನ ಕಾರಣವನ್ನು ಖಚಿತಪಡಿಸಲು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ. ಈ ಸಂಬಂಧ ಮೆಡಿಕೋ-ಲೀಗಲ್ ಪ್ರಕರಣ ದಾಖಲಿಸಲಾಗಿದೆ. ಪಾರ್ಥಿವ ಶರೀರವನ್ನು ಬಾಂಬೋಲಿಂನಲ್ಲಿರುವ ಗೋವಾ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ಕಳುಹಿಸಲಾಗಿದೆ.

ಐದು ದಶಕಗಳ ಸಿನಿಪಯಣ

1978ರಲ್ಲಿ ಬಿಡುಗಡೆಯಾದ ‘ಗಮನ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ನಾನಾ ಪಾಟೇಕರ್, ಬಳಿಕ ಹಿಂದಿ ಹಾಗೂ ಮರಾಠಿ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ‘ಪರಿಂಧಾ’, ‘ಪ್ರಹಾರ್’, ‘ಅಂಗಾರ್’, ‘ಕ್ರಾಂತಿವೀರ್’, ‘ತಿರಂಗಾ’, ‘ಖಾಮೋಶಿ’ ಹಾಗೂ ‘ಅಬ್ ತಕ್ ಛಪ್ಪನ್’ ಸೇರಿದಂತೆ ಹಲವು ಚಿತ್ರಗಳಲ್ಲಿನ ಅಭಿನಯ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತ್ತು.

ಗಂಭೀರ ಪಾತ್ರಗಳಷ್ಟೇ ಅಲ್ಲದೆ ಹಾಸ್ಯ ಹಾಗೂ ವಾಣಿಜ್ಯ ಚಿತ್ರಗಳಲ್ಲೂ ತಮ್ಮ ವಿಭಿನ್ನ ಅಭಿನಯದ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ಇತ್ತೀಚಿನ ವರ್ಷಗಳಲ್ಲೂ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದ ಅವರು ‘ಹೌಸ್‌ಫುಲ್ 5’, ವಿಶಾಲ್ ಭಾರದ್ವಾಜ್ ನಿರ್ದೇಶನದ ‘ಒ'ರೋಮಿಯೋ’ ಹಾಗೂ ‘ಸುಬೇದಾರ್’ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದ ನಾನಾ ಪಾಟೇಕರ್ ಅವರಿಗೆ ಪದ್ಮಶ್ರೀ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದವು. ಅವರ ನಿಧನದ ಸುದ್ದಿ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅಂಜನಾದ್ರಿ ಶ್ರೀ ಆಂಜನೇಯ ದೇವಸ್ಥಾನ ರಾಜ್ಯ ಸರ್ಕಾರದ ಅಧೀನದ ಆದೇಶಕ್ಕೆ ಹೈಕೋರ್ಟ್ ತಡೆಮೈಕ್ರೋಫೈನಾನ್ಸ್ ಸಂಸ್ಥೆಗಳು ರೈತರಿಗೆ ಕಿರುಕುಳ ನೀಡಿದರೆ ಎಫ್‍ಐಆರ್ ದಾಖಲಿಸಲು ಸೂಚನೆ : ಡಿಸಿಎಂ ಹಲ್ಲೆ ಆರೋಪಕ್ಕೆ ವಿಡಿಯೊದಲ್ಲಿಲ್ಲ ಸಾಕ್ಷ್ಯ: ಎಸ್‍ಪಿ ಸ್ಪಷ್ಟನೆಎಸ್‍ಐಆರ್ ಅನ್ನು ಟೂಲ್‍ಕಿಟ್ ಮಾಡಿಕೊಂಡ ಕಾಂಗ್ರೆಸ್: ಶ್ರೀರಾಮುಲು ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲಬಳ್ಳಾರಿಯಲ್ಲಿ ಎಫ್‌ಐಆರ್‌–ಎಸ್‌ಐಆರ್‌ ಹಗ್ಗಜಗ್ಗಾಟ: ಬಿಜೆಪಿ ಪ್ರತಿಭಟನೆ ವೇಳೆ ಜಿಲ್ಲಾಧ್ಯಕ್ಷರಿಗೆ ಗಾಯದ ಆರೋಪಜನಮನ ಸೆಳೆದ ‘ಪಂಚಮವೇದ ಪ್ರೇಮದ ನಾದ’ಬಳ್ಳಾರಿ: ‘ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ' ನೋಂದಣಿ ಶಿಬಿರ‘ಸೇವಾಜ್ಯೋತಿ’ಗೆ ಬಿಜೆಪಿ ರಣಕಹಳೆ ಯಶಸ್ವಿಗೆ ಶಾಸಕ ಜನಾರ್ದನ್‍ರೆಡ್ಡಿ ಕರೆಜನರ ಮನೆ ಬಾಗಿಲಿಗೆ ಸೇವೆ ಒದಗಿಸುವುದು ಸರ್ಕಾರದ ಆಶಯ : ಎಸ್ ಮಧು ಬಂಗಾರಪ್ಪ