LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
National News

ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದು

ಬೆಂಗಳೂರು: ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಯ ಕೊನೆಯ ಹಂತದಲ್ಲಿ ತೆರಿಗೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚಕರು ಹೊಸ ಬಲೆ ಬೀಸಿದ್ದಾರೆ. ಸರ್ಕಾರಿ ಲಾಂಛನ, ಅಧಿಕೃತ ನೋಟಿಸ್ ಹಾಗೂ ಆದಾಯ ತೆರಿಗೆ ಇಲಾಖೆಯ ದಾಖಲೆಗಳಂತೆಯೇ ಕಾಣುವ ನಕಲಿ PDF ಮತ್ತು ZIP ಫೈಲ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿ, ಬ್ಯಾಂಕ್ ಖಾತೆಯ ಮಾಹಿತಿ, ಒಟಿಪಿ ಹಾಗೂ ಪಾಸ್‌ವರ್ಡ್ ಕದಿಯುವ ವಂಚನೆ ಹೆಚ್ಚಾಗಿದೆ.

ಸೈಬರ್ ಭದ್ರತಾ ತಜ್ಞರು, "ಒಂದು ತಪ್ಪು ಕ್ಲಿಕ್ ನಿಮ್ಮ ಬ್ಯಾಂಕ್ ಖಾತೆಯನ್ನು ಖಾಲಿ ಮಾಡಬಹುದು" ಎಂದು ಗಂಭೀರ ಎಚ್ಚರಿಕೆ ನೀಡಿದ್ದಾರೆ.

ಹೇಗೆ ನಡೆಯುತ್ತಿದೆ ಈ ವಂಚನೆ?

ವAಚಕರು ‘ITR.zip’ ಅಥವಾ ಅದೇ ರೀತಿಯ ಹೆಸರಿನ ಫೈಲ್‌ಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸುತ್ತಿದ್ದಾರೆ. ಜೊತೆಗೆ,

"ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 271(1)(ಛಿ) ಅಡಿಯಲ್ಲಿ ನಿಮ್ಮ ಖಾತೆಯಲ್ಲಿ ವ್ಯತ್ಯಾಸ ಪತ್ತೆಯಾಗಿದೆ. 72 ಗಂಟೆಯೊಳಗೆ ಉತ್ತರಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂಬ ಸಂದೇಶದ ಮೂಲಕ ಜನರಲ್ಲಿ ಆತಂಕ ಸೃಷ್ಟಿಸುತ್ತಿದ್ದಾರೆ.

ಕುತೂಹಲದಿಂದ ಅಥವಾ ಭಯದಿಂದ ಫೈಲ್ ತೆರೆದರೆ, ಮೊಬೈಲ್‌ನಲ್ಲಿ ಅಪಾಯಕಾರಿ ಮಾಲ್‌ವೇರ್ ಇನ್‌ಸ್ಟಾಲ್ ಆಗುತ್ತದೆ. ನಂತರ ಅದು ಬ್ಯಾಂಕಿAಗ್ OTP, SMS, ಪಾಸ್‌ವರ್ಡ್ ಸೇರಿದಂತೆ ಸೂಕ್ಷ್ಮ ಮಾಹಿತಿಯನ್ನು ಸೈಬರ್ ವಂಚಕರಿಗೆ ರವಾನಿಸುತ್ತದೆ.

ನಕಲಿ ವೆಬ್‌ಸೈಟ್ ಮೂಲಕ ಮತ್ತೊಂದು ಬಲೆ

ವಂಚಕರು ಆದಾಯ ತೆರಿಗೆ ಇಲಾಖೆಯ ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ನಂತೆಯೇ ಕಾಣುವ ನಕಲಿ ವೆಬ್‌ಸೈಟ್‌ಗಳನ್ನು ಸೃಷ್ಟಿಸಿ, ಅಲ್ಲಿ PAN, Aadhaar, ಬ್ಯಾಂಕ್ ಖಾತೆ ವಿವರಗಳು ಹಾಗೂ ಲಾಗಿನ್ ಮಾಹಿತಿಯನ್ನು ನಮೂದಿಸುವಂತೆ ಮಾಡುತ್ತಿದ್ದಾರೆ. ಒಮ್ಮೆ ಮಾಹಿತಿ ನೀಡಿದರೆ, ಬ್ಯಾಂಕ್ ಖಾತೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.

ತಜ್ಞರ ಎಚ್ಚರಿಕೆ – ಈ ನಾಲ್ಕು ನಿಯಮ ಮರೆಯಬೇಡಿ

ವಾಟ್ಸಾಪ್‌ನಲ್ಲಿ ಬಂದ ಆದಾಯ ತೆರಿಗೆ ನೋಟಿಸ್‌ಗಳನ್ನು ನಂಬಬೇಡಿ.
ಆದಾಯ ತೆರಿಗೆ ಇಲಾಖೆ ಅಧಿಕೃತ ನೋಟಿಸ್‌ಗಳನ್ನು ವಾಟ್ಸಾಪ್ ಮೂಲಕ ಕಳುಹಿಸುವುದಿಲ್ಲ.

ನೇರವಾಗಿ ಅಧಿಕೃತ ಇ-ಫೈಲಿಂಗ್ ಪೋರ್ಟಲ್‌ಗೆ ಲಾಗಿನ್ ಮಾಡಿ.
ಯಾವುದೇ ನೋಟಿಸ್ ಬಗ್ಗೆ ಅನುಮಾನವಿದ್ದರೆ, ಸ್ವತಃ ಅಧಿಕೃತ ಪೋರ್ಟಲ್‌ನಲ್ಲಿ DIN (Document Identification Number) ಪರಿಶೀಲಿಸಿ.

ZIP, APK ಅಥವಾ ಅನುಮಾನಾಸ್ಪದ ಫೈಲ್‌ಗಳನ್ನು ಡೌನ್‌ಲೋಡ್ ಮಾಡಬೇಡಿ.
ಅಪರಿಚಿತ ಲಿಂಕ್ ಅಥವಾ ಫೈಲ್ ತೆರೆಯುವುದು ನಿಮ್ಮ ಮೊಬೈಲ್‌ಗೆ ಮಾಲ್‌ವೇರ್ ಪ್ರವೇಶಿಸುವ ಪ್ರಮುಖ ಕಾರಣ.

ವಂಚನೆಗೆ ಒಳಗಾದರೆ ತಕ್ಷಣ 1930ಕ್ಕೆ ಕರೆ ಮಾಡಿ.
ಸೈಬರ್ ವಂಚನೆ ನಡೆದ ತಕ್ಷಣ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ಅಥವಾ ಸಂಬAಧಿತ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿ.

ಸೈಬರ್ ತಜ್ಞರಿಂದ ತುರ್ತು ಎಚ್ಚರಿಕೆ

ಸೈಬರ್ ಭದ್ರತಾ ಸಂಸ್ಥೆ ಕ್ಲೌಡ್‌ಸೆಕ್ ಈ ವಂಚನೆ ಕುರಿತು ಎಚ್ಚರಿಕೆ ನೀಡಿದ್ದು, "ವಾಟ್ಸಾಪ್‌ನಲ್ಲಿ ಬರುವ ಆದಾಯ ತೆರಿಗೆ ನೋಟಿಸ್ ಅಥವಾ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ನಂಬಬೇಡಿ. ಅಧಿಕೃತ ಮಾಹಿತಿಯನ್ನು ಯಾವಾಗಲೂ ಆದಾಯ ತೆರಿಗೆ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲೇ ಪರಿಶೀಲಿಸಿ" ಎಂದು ಸಲಹೆ ನೀಡಿದೆ.

"ವಾಟ್ಸಾಪ್‌ನಲ್ಲಿ ಬಂದ 'Income Tax Notice' ' ಕಂಡರೆ ಹೆದರಬೇಡಿ... ಕ್ಲಿಕ್ ಮಾಡುವ ಮೊದಲು ಪರಿಶೀಲಿಸಿ. ಒಂದು ಕ್ಲಿಕ್ ನಿಮ್ಮ ಹಣವನ್ನೇ ಕಳೆದುಕೊಳ್ಳುವಂತೆ ಮಾಡಬಹುದು!"

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಯುದ್ಧ ಆರಂಭವಾಗಿದೆ, ರಣರಂಗದಲ್ಲಿ ಗೆಲುವು ನಮ್ಮದೇ : ಬಿ.ವೈ.ವಿಜಯೇಂದ್ರಭಾರತದ್ದು ಆಕ್ರಮಣದ ಇತಿಹಾಸವಲ್ಲ, ಜ್ಞಾನ ಹಂಚಿದ ಪರಂಪರೆ: ಮೋಹನ್ ಭಾಗವತ್ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವಕ್ಕೆ ಶ್ರೀಗಳಿಂದ ಅದ್ದೂರಿ ಚಾಲನೆದಿಢೀರ್ ದೆಹಲಿಗೆ ತೆರಳಿದ ನಾಗೇಂದ್ರ; ಹೈಕಮಾಂಡ್ ಅಂಗಳದಲ್ಲಿ ರಾಜೀನಾಮೆ ಭವಿಷ್ಯ!ಹಂಪಿ ಬಳಿ ಐದು ದಶಕಗಳ ಬಳಿಕ ಹುಲಿ ಪ್ರತ್ಯಕ್ಷ!43.80 ಲಕ್ಷ ಮತದಾರರಿಗೆ ಶೀಘ್ರದಲ್ಲೇ ಚುನಾವಣಾ ಆಯೋಗದ ನೋಟಿಸ್! ಅರ್ಧದಷ್ಟು ಭರ್ತಿಯಾದ ತುಂಗಭದ್ರಾ ಜಲಾಶಯ! 1 ಲಕ್ಷ ಕ್ಯುಸೆಕ್‌ಗೂ ಅಧಿಕ ಒಳಹರಿವುತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!