LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News | State News

ಬಳ್ಳಾರಿ: ‘ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ' ನೋಂದಣಿ ಶಿಬಿರ


ಬಳ್ಳಾರಿ:ಬಳ್ಳಾರಿ ಗ್ರಾಮೀಣ ಜೆಸ್ಕಾಂ ಉಪ-ವಿಭಾಗ ವ್ಯಾಪ್ತಿಯಲ್ಲಿ ಅಕ್ಟೋಬರ್ 5, 6 ಮತ್ತು 7 ರಂದು ನಡೆಯಲಿರುವ ‘ಸೇವಾ ಸೇತು' ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಪಿ.ಎಂ. ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ” ಕುರಿತು ಸಾರ್ವಜನಿಕರಿಗೆ ಮಾಹಿತಿ ಹಾಗೂ ಸ್ಥಳದಲ್ಲೇ ನೋಂದಣಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜೆಸ್ಕಾಂ ಗ್ರಾಮೀಣ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನಬಾಬು ತಿಳಿಸಿದ್ದಾರೆ.
*ನೋಂದಣಿಗೆ ಅಗತ್ಯವಿರುವ ದಾಖಲೆಗಳು:*
ಇತ್ತೀಚಿನ ವಿದ್ಯುತ್ ಬಿಲ್, ಆಧಾರ್ ಕಾರ್ಡ್ ಪ್ರತಿ, ಆಧಾರ್ ಲಿಂಕ್ ಆಗಿರುವ ಬ್ಯಾಂಕ್ ಪಾಸ್‌ಬುಕ್ ಪ್ರತಿ ಅಥವಾ ರದ್ದುಪಡಿಸಿದ ಚೆಕ್, ಆಧಾರ್ ಮತ್ತು ವಿದ್ಯುತ್ ಸಂಪರ್ಕಕ್ಕೆ ನೋಂದಣಿಯಾಗಿರುವ ಮೊಬೈಲ್ ಸಂಖ್ಯೆ, ಮನೆಯ ಮೇಲ್ಛಾವಣಿಯ ಹಕ್ಕಿನ ದಾಖಲೆ / ಕಂದಾಯ ರಶೀದಿಗಳು.
*ಸಂಪರ್ಕಿಸಬೇಕಾದ ಅಧಿಕಾರಿಗಳು ಮತ್ತು ದೂರವಾಣಿ ಸಂಖ್ಯೆಗಳು:*
ಮೋಹನಬಾಬು (ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು)-9448482161
ಮಂಜುನಾಥ (ಘಟಕ-1)-9449597337
ಮಂಜುನಾಥ ಚೌದರಿ (ಘಟಕ-2)-9449597338
ಚಿಟ್ಟಿ ಚಂದ್ರಶೇಖರ (ಘಟಕ-3)-9449597351
ದಿಲೀಪ್ (ಘಟಕ-ಪಿ.ಡಿ.ಹಳ್ಳಿ)-9449597352
ರಾಜಶೇಖರ್ (ಘಟಕ-ಮೋಕಾ)-9449597346
ಕಾರ್ಯಕ್ರಮದಲ್ಲಿ ಮನೆಗಳ ಮೇಲ್ಛಾವಣಿ ಸೌರ ವಿದ್ಯುತ್ ಘಟಕ (ಸೋಲಾರ್ ರೂಫ್‌ಟಾಪ್) ಅಳವಡಿಕೆಗೆ ಸ್ಥಳದಲ್ಲೇ ಮಾರ್ಗದರ್ಶನ ಮತ್ತು ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಡೆಯಲಿದೆ. ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರದ ಅನುದಾನ ಪಡೆದು ಸೋಲಾರ್ ಘಟಕ ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಬಿಲ್ ಉಳಿತಾಯ ಮಾಡಿಕೊಳ್ಳಬೇಕೆಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಳ್ಳಾರಿಯಲ್ಲಿ ಎಫ್‌ಐಆರ್‌–ಎಸ್‌ಐಆರ್‌ ಹಗ್ಗಜಗ್ಗಾಟ: ಬಿಜೆಪಿ ಪ್ರತಿಭಟನೆ ವೇಳೆ ಜಿಲ್ಲಾಧ್ಯಕ್ಷರಿಗೆ ಗಾಯದ ಆರೋಪಜನಮನ ಸೆಳೆದ ‘ಪಂಚಮವೇದ ಪ್ರೇಮದ ನಾದ’ಬಳ್ಳಾರಿ: ‘ಪಿ.ಎಂ. ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ' ನೋಂದಣಿ ಶಿಬಿರ‘ಸೇವಾಜ್ಯೋತಿ’ಗೆ ಬಿಜೆಪಿ ರಣಕಹಳೆ ಯಶಸ್ವಿಗೆ ಶಾಸಕ ಜನಾರ್ದನ್‍ರೆಡ್ಡಿ ಕರೆಜನರ ಮನೆ ಬಾಗಿಲಿಗೆ ಸೇವೆ ಒದಗಿಸುವುದು ಸರ್ಕಾರದ ಆಶಯ : ಎಸ್ ಮಧು ಬಂಗಾರಪ್ಪಬರದ ನಡುವೆ ರೈತರ ಸಂಕಷ್ಟದ ಅನಾವರಣ 72 ಸಾವಿರ ಉದ್ಯೋಗಕ್ಕೆ ಹಸಿರು ನಿಶಾನೆ!ಫಾರ್ಮ್-7 ಅಡಿಯಲ್ಲಿ 91,278 ಆಕ್ಷೇಪಣೆ ಸ್ವೀಕಾರ; ಒಂದೇ ಒಂದು ದೂರು ಆಧರಿಸಿ ಎಫ್‌ಐಆರ್ ದಾಖಲಾಗಿಲ್ಲಎನ್‌ಡಿಎ ಅಭ್ಯರ್ಥಿ ನಮೋಶಿ ಗೆಲುವು ಖಚಿತ ಬಿಜೆಪಿ-ಜೆಡಿಎಸ್ ಮುಖಂಡರ ವಿಶ್ವಾಸಮೈಸೂರು ದಸರಾ ಉದ್ಘಾಟಿಸಲು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಶ್ರೀಗಳಿಗೆ ಆಹ್ವಾನ