ಬಳ್ಳಾರಿ: ನಗರದ ಡಾ. ಜೋಳದ ರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಅಭಿನಯ ಕಲಾಕೇಂದ್ರದ ವತಿಯಿಂದ ಭಾನುವಾರ ಆಯೋಜಿಸಿದ್ದ ‘ಪಂಚಮ ವೇದ ಪ್ರೇಮದ ನಾದ’ ಕನ್ನಡ ಕರೋಕೆ ಗಾಯನ ಕಾರ್ಯಕ್ರಮ ಪ್ರೇಕ್ಷಕರನ್ನು ಸಂಗೀತ ಮಾಧುರ್ಯದಲ್ಲಿ ತೇಲಿಸಿತು. ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯ ಕವಿ ಹುಯಿಲಗೋಳ ನಾರಾಯಣರಾಯರ ಜನ್ಮದಿನಾಚರಣೆ ಅಂಗವಾಗಿ ಕಾರ್ಯಕ್ರಮ ಹಮ್ಮಿಕೊ ಳ್ಳಲಾಗಿತ್ತು. ಆರಂಭದಲ್ಲಿ ಚಿನ್ಮಯಿ ಮತ್ತು ಶ್ರೀಮಯಿ ಸಹೋದರಿಯರು ಪ್ರಸ್ತುತಪಡಿಸಿದ ಶಾಸ್ತ್ರೀಯ ನೃತ್ಯ ಗಮನ ಸೆಳೆಯಿತು. ಹಿರಿಯ ನಾಟಕಕಾರ ಹಾಗೂ ರಂಗನಿರ್ದೇಶಕ ಕೆ. ಜಗದೀಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಹುಯಿಲ ಗೋಳ ನಾರಾಯಣರಾಯರ ಸಾಹಿತ್ಯ ಸೇವೆಯನ್ನು ಸ್ಮರಿಸಿದರು. ‘ಉದಯ ವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆ ಕರ್ನಾಟಕ ಏಕೀಕರಣದ ಸಂದ ರ್ಭದಲ್ಲಿ ಕನ್ನಡಿಗರಲ್ಲಿ ನಾಡು-ನುಡಿಯ ಅಭಿಮಾನವನ್ನು ಜಾಗೃತಗೊಳಿಸಿದ ಪ್ರಮುಖ ಗೀತೆಗಳಲ್ಲಿ ಒಂದಾಗಿದೆ. 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಸಂದರ್ಭದಲ್ಲಿ ಈ ಗೀತೆ ಜನಪ್ರಿಯತೆ ಪಡೆದಿದ್ದು, ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಹಾಡಿದ್ದರು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ, ವಿಜಯನಗರ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳ 20 ಗಾಯಕರು ಕನ್ನಡ ಭಾವಗೀತೆ, ಭಕ್ತಿಗೀತೆ, ಜಾನಪದ ಗೀತೆ ಹಾಗೂ ಚಲನಚಿತ್ರ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿದರು.ಸಿದ್ದಾರ್ಥ ಸಾಲೀಮಠ, ವಿನಯಕುಮಾರ್, ಲಕ್ಷ್ಮಿ, ಗೋಪಯ್ಯ ಕಾವಲಿ, ಶಿಲ್ಪ, ರಾಮಲಿ, ಎಚ್. ಭಾಗ್ಯಲಕ್ಷ್ಮಿ, ಗೀತಾಂಜಲಿ ಬಂಡಾರಿ, ಜಿ.ಎಂ. ನಾಗಲಿಂಗಸ್ವಾಮಿ, ಡಿ. ಬಸವರಾಜ, ಎ.ಕೆ. ಹುಲುಗಪ್ಪ, ಸೋಮಶೇಖರ ಕಲ್ಡಹಳ್ಳಿ, ಚಂದನ ಆರ್.ಬಿ., ಆರ್. ನಾಗರಾಜ, ಡಾ. ಶ್ರೀಲೇಖ, ವೆಂಕಟೇಶ್ ಆಚಾರ್, ಸಿ. ಮಾಕರ್ಂಡೇಯ, ಬಿ.ಎಚ್. ತಿಪ್ಪೇಸ್ವಾಮಿ, ಜೆ.ಎಚ್. ಭಾಗ್ಯಮ್ಮ ಹಾಗೂ ರಾಜು ಇಸ್ರಾಣಿ ಅವರ ಗಾಯನ ಗಮನ ಸೆಳೆಯಿತು.ಎಚ್. ಎಂ. ಮಲ್ಲಿಕಾರ್ಜುನಸ್ವಾಮಿ, ಕುಡಿ ತಿನಿ ಪ್ರಕಾಶ್, ಕೊಳಗಲ್ಲು ಜಗದೀಶ ಯ್ಯ, ಕೋಳೂರು ಜಗದೀಶಗೌಡ, ಉತ್ತನೂರು ರಾಮಣ್ಣ ಮಾರೇಶ ಸಹಕರಿಸಿದರು.