mariyammanahalli

ಆರೋಗ್ಯದ ವಿಚಾರ ಬಂದಾಗ ಬಡವ, ಶ್ರೀಮಂತ ಎಂಬುವುದಿಲ್ಲ

ಮರಿಯಮ್ಮನ ಹಳ್ಳಿ ,ಮಾ,15 :  ಗ್ರಾಮೀಣ ಪ್ರದೇಶದಲ್ಲಿ ವೈಧ್ಯಕೀಯ ಸೇವೆ ಬಲಪಡಿಸುವ ನಿಟ್ಟಿನಲ್ಲಿ ಈ ಸಂಚಾರಿ ಆರೋಗ್ಯ ಘಟಕ ಆರಂಭಿಸಲಾಗುತ್ತಿದೆ ಎಂದು ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವಿಮಲ್ ಸಿಂಗ್  ನುಡಿದರು. ಅವರು ಮಂಗಳವಾರ ಬಿ.ಎಂ.ಎಂ.ಇಸ್ಪಾತ್ ಕಂಪನಿಯಲ್ಲಿ ಸಾರ್ವಜನಿಕ ಸೇವೆಗಾಗಿ ಆಯೋಜಿಸಲಾಗಿದ್ದ ಸಂಚಾರಿ ಆರೋಗ್ಯ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಮತ್ತು ತೀರಾ ಹಿಂದುಳಿದ ಪ್ರದೇಶದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಬಿ.ಎಂ.ಎಂ. ಹಾಗೂ ಜೆ.ಎಸ್.ಡಬ್ಲೂ ಫೌಂಡೇಶನ್ ನಿಂದ ಈ ಸೇವೆ ಆರಂಭಿಸಲಾಗಿದೆ ಇದನ್ನು ಹೆಲ್ಪೇಜ್ …

ಆರೋಗ್ಯದ ವಿಚಾರ ಬಂದಾಗ ಬಡವ, ಶ್ರೀಮಂತ ಎಂಬುವುದಿಲ್ಲ Read More »

ಮದ್ಯಪಾನ ಸೇವಿಸಿ ಬಣ್ಣದಲ್ಲಿ ಭಾಗವಹಿಸಬಾರದು

ಮರಿಯಮ್ಮನಹಳ್ಳಿ ,ಮಾ,15 : ಹಬ್ಬಗಳ ಆಚರಣೆಗೆ ಎಲ್ಲರ ಸಹಕಾರ ಅಗತ್ಯ. ಕೋವಿಡ್ ಹೋಗಿದೆ ಎಂದು ಯಾರೂ ಮೈಮರೆಯದೇ ಜಾಗರೂಕತೆಯಿಂದ ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ಹೋಳಿ ಹಬ್ಬವನ್ನು ಆಚರಿಸಬೇಕು ಎಂದು  ಹಗರಿಬೊಮ್ಮನಹಳ್ಳಿ ಸಿಪಿಐ.ಟಿ.ಮಂಜಣ್ಣ ಹೇಳಿದರು. ಅವರು ಸೋಮವಾರ ಸಂಜೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ಹೋಳಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು,  ಮದ್ಯಪಾನ ಸೇವಿಸಿ ಬಣ್ಣದಲ್ಲಿ ಭಾಗವಹಿಸುವುದನ್ನು ತಡೆಯಬೇಕು. ಏನೇ ತೊಂದರೆ ಆದರೂ ಇಲಾಖೆಯ ಗಮನಕ್ಕೆ ತರಬೇಕು. ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಹೋಳಿ ಹಬ್ಬದ ಆಚರಣೆ ಶಾಂತಿಯುತವಾಗಿರಬೇಕು. ಮೋಜು ಮಸ್ತಿ ಅಬ್ಬರದಲ್ಲಿ …

ಮದ್ಯಪಾನ ಸೇವಿಸಿ ಬಣ್ಣದಲ್ಲಿ ಭಾಗವಹಿಸಬಾರದು Read More »

ಧರ್ಮಸ್ಥಳ ಸಂಘದಿಂದ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ

ಮರಿಯಮ್ಮನಹಳ್ಳಿ:.ಮಾ.14 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಇವರ ಆರ್ಥಿಕ ಸಹಕಾರದೊಂದಿಗೆ ಗ್ರಾಮ ಪಂಚಾಯತ್ ಹಾಗೂ ಕೆರೆ ಅಭಿವೃದ್ಧಿ ಸಮಿತಿ ಡಣಾಪುರ ಅವರ ಸಹಭಾಗಿತ್ವದಲ್ಲಿ  ನಮ್ಮೂರು ನಮ್ಮ ಕೆರೆ ಯೋಜನೆ ಅಡಿಯಲ್ಲಿ ಪಟ್ಟಣ ಸಮೀಪದ ಡಣಾಪುರ ಕೆರೆ(ಗೋಕಟ್ಟೆ)ಯನ್ನು ಹೂಳೆತ್ತವು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಡಣಾಪುರ ಗ್ರಾ.ಪಂ.ಅಧ್ಯಕ್ಷೆ ಉಮಾದೇವಿ ಸಿಡಿ ಯಲ್ಲಪ್ಪ, ಕಾರ್ಯದರ್ಶಿ ಎನ್ ಮಂಜುನಾಥ,  ಹನುಮಂತಪ್ಪ, ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾಯೋಜನಾಧಿಕಾರಿ ಚಿದಾನಂದ, ತಾಲೂಕು ಯೋಜನಾಧಿಕಾರಿ ರಾಘವೇಂದ್ರ, ವಲಯ ಒಕ್ಕೂಟದ ಮೇಲ್ವಿಚಾರಕಿ ಅಂಜಲಿ, ಪ್ರತಿನಿಧಿ ಉಮಾದೇವಿ ಇತರರು ಇದ್ದರು. 

ಮನುಷ್ಯನ ಜೀವ ಎಷ್ಟು ಮುಖ್ಯವೋ ಪ್ರಾಣಿ, ಪಕ್ಷಿಗಳ ಜೀವ ಕೂಡ ಅಷ್ಟೇ ಮುಖ್ಯ

ಮರಿಯಮ್ಮನಹಳ್ಳಿ ,ಮಾ,14 : ಬಿಸಲಿನ ಬೇಗೆಯಿಂದ ಎಲ್ಲ ಜೀವಿಗಳು ತತ್ತರಿಸುತ್ತಿವೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿ ಪಕ್ಷಿಗಳು ನೀರು, ಆಹಾರಕ್ಕಾಗಿ ಕಷ್ಟ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಪ್ರಾಣಿ, ಪಕ್ಷಿಗಳ ಸಂಕಷ್ಟ ಅರಿತು ಅವುಗಳನ್ನು ರಕ್ಷಣೆ ಮಾಡಲು ಪಟ್ಟಣದ ಪೊಲೀಸ್ ಠಾಣೆಯ ಪಿ.ಎಸ್.ಐ.ಗಳಾದ ಹನುಮಂತಪ್ಪ ತಳವಾರ್ ಹಾಗೂ ಮೀನಾಕ್ಷಿ ರವರು ಮುಂದಾಗಿದ್ದಾರೆ. ನಂತರ ಪಿ.ಎಸ್.ಐ.ಹನುಮಂತಪ್ಪ ತಳವಾರ್ ಮಾತನಾಡಿ, ಮನುಷ್ಯನ ಜೀವ ಎಷ್ಟು ಮುಖ್ಯವೋ ಪ್ರಾಣಿ, ಪಕ್ಷಿಗಳ ಜೀವ ಕೂಡ ಅಷ್ಟೇ ಮುಖ್ಯ. ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಜಲಮೂಲಗಳು ಬತ್ತುತ್ತಿವೆ. ಕುಡಿಯುವ ನೀರಿಗೂ ತತ್ವಾರ ಶುರುವಾಗಿದೆ. ನೀರಿಗಾಗಿ …

ಮನುಷ್ಯನ ಜೀವ ಎಷ್ಟು ಮುಖ್ಯವೋ ಪ್ರಾಣಿ, ಪಕ್ಷಿಗಳ ಜೀವ ಕೂಡ ಅಷ್ಟೇ ಮುಖ್ಯ Read More »

ಎಸ್ಡಿಎಂಸಿ ಅಧ್ಯಕ್ಷೆಯಾಗಿ ಸುಧಾ, ಉಪಾಧ್ಯಕ್ಷರಾಗಿ ರಾಜಾಸಾಬ್ ಆಯ್ಕೆ

ಮರಿಯಮ್ಮನಹಳ್ಳಿ ,ಮಾ,10 : ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಎಸ್‍ಡಿಎಂಸಿ ರಚನೆಯನ್ನು ಪೋಷಕರ ಸಭೆಯಲ್ಲಿ 18 ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಎಸ್ಡಿಎಂಸಿ ಅಧ್ಯಕ್ಷರಾಗಿ ಸುಧಾ ತಳವಾರ ಹಾಗೂ ಉಪಾಧ್ಯಕ್ಷರಾಗಿ ರಾಜಾಸಾಬ್ ಅವರನ್ನು ಗುರುವಾರ ಆಯ್ಕೆ ಮಾಡಲಾಯಿತು. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‍ಡಿಎಂಸಿಯು ಒಟ್ಟು 18 ಜನ ಸದಸ್ಯರನ್ನು ಹೊಂದಿದೆ. ಸಭೆಯಲ್ಲಿ ಮುಖ್ಯಗುರು ಭರಮಪ್ಪ, ಸಿಆರ್‍ಪಿ ಕರಿಬಸಪ್ಪ, ಶಿಕ್ಷಕರಾದ ನೀಲಮ್ಮ, ರಾಜಕುಮಾರ, ಹನುಮಂತಪ್ಪ, ಅಶೋಕ, ಪ.ಪಂ.ಸದಸ್ಯರಾದ ಮರಡಿ ಸುರೇಶ, ಸುಷ್ಮಾ, …

ಎಸ್ಡಿಎಂಸಿ ಅಧ್ಯಕ್ಷೆಯಾಗಿ ಸುಧಾ, ಉಪಾಧ್ಯಕ್ಷರಾಗಿ ರಾಜಾಸಾಬ್ ಆಯ್ಕೆ Read More »

ಕೈಗಾರಿಕೆಗಳು ಸುರಕ್ಷಿತವಾದ ವಾತಾವರಣವನ್ನು ಒದಗಿಸಬೇಕು

ಮರಿಯಮ್ಮನಹಳ್ಳಿ ,ಮಾ,9 :  ಕೈಗಾರಿಕಾ ಚಟುವಟಿಕೆಗಳಲ್ಲಿ ಸುರಕ್ಷತೆಯ ಮಾನದಂಡಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಯೊಬ್ಬ ಕಾರ್ಮಿಕರು ಗಮನಹರಿಸಬೇಕೆಂದು ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಮುಖ್ಯಕಾರ್ಯನಿರ್ವಾಹಕಾಧಿಕಾರಿ ವಿಮಲ್ ಸಿಂಗ್ ನುಡಿದರು. ಅವರು ಮಂಗಳವಾರ ಬಿ.ಎಂ.ಎಂ.ಇಸ್ಪಾತ್ ಕಂಪನಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಆರೋಗ್ಯ, ಪರಿಸರದ ಮತ್ತು ಸುರಕ್ಷತೆಯ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಪ್ರತಿವರ್ಷ ಈ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದ ಅವರು ಕೈಗಾರಿಕೆಗಳಲ್ಲಿ, ಉದ್ದಿಮೆಗಳಲ್ಲಿ, ಉತ್ತಮ ಗುಣ ಮಟ್ಟದ ವಸ್ತುಗಳನ್ನು ತಯಾರಿಸುವುದರ …

ಕೈಗಾರಿಕೆಗಳು ಸುರಕ್ಷಿತವಾದ ವಾತಾವರಣವನ್ನು ಒದಗಿಸಬೇಕು Read More »

ವಿದ್ಯಾರ್ಥಿಗಳು ಬಾಲ್ಯದಿಂದಲೇ ಧೈರ್ಯ,ಸಾಹಾಸ, ಸಾಧನೆಯ ಹಾದಿಯಲ್ಲಿ ಸಾಗಿ

ಮರಿಯಮ್ಮನಹಳ್ಳಿ : ಮಹಿಳೆ ಪ್ರಸ್ತುತ ಸಮಾಜದಲ್ಲಿ ಎಲ್ಲಾ ಆಯಾಮಗಳಲ್ಲಿ ಪ್ರಬುದ್ಧತೆ ಪಡೆದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಪಟ್ಟಣದ ಅಪರಾಧ ವಿಭಾಗದ ಪಿ.ಎಸ್.ಐ ಮೀನಾಕ್ಷಿ ರವರು ಹೇಳಿದರು. ಅವರು ಬುಧವಾರ ಮರಿಯಮ್ಮನಹಳ್ಳಿ ಸಮೀಪದ ಪೋತಲಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯವನ್ನು  ಉಧ್ಘಾಟಿಸಿ ಮಾತನಾಡಿದರು, ವಿದ್ಯಾರ್ಥಿಗಳು ಬಾಲ್ಯದಿಂದಲೇ ಧೈರ್ಯ,ಸಾಹಾಸ, ಸಾಧನೆಯ ಹಾದಿಯಲ್ಲಿ ಸಾಗಿ ತಮಗೆ ಬಂದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಪ್ರಖ್ಯಾತಿ ಹೊಂದಬೇಕು. ವಿದ್ಯಾರ್ಥಿನಿಯರು ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, …

ವಿದ್ಯಾರ್ಥಿಗಳು ಬಾಲ್ಯದಿಂದಲೇ ಧೈರ್ಯ,ಸಾಹಾಸ, ಸಾಧನೆಯ ಹಾದಿಯಲ್ಲಿ ಸಾಗಿ Read More »

ವೈಜ್ಞಾನಿಕ ಚಿಂತನೆ ಬಾಲ್ಯದಿಂದಲೇ ರೂಢಿಯಾಗಲಿ

ಮರಿಯಮ್ಮನಹಳ್ಳಿ,ಮಾ,4 : ಪಟ್ಟಣ ಸಮೀಪದ ಪೋತಲಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮದಲ್ಲಿ ಟಿಜಿಟಿ ಶಿಕ್ಷಕರಾದ ಕೆ.ಅಶೋಕ್ ಕುಮಾರ್ ಮಾತನಾಡಿ, ವೈಜ್ಞಾನಿಕ ಚಿಂತನೆ ಎಂಬುದು ಬಾಲ್ಯದಿಂದಲೇ ರೂಢಿ ಅಥವಾ ಅಭ್ಯಾಸದಂತೆ ಅಳವಡಿಸಿಕೊಳ್ಳಬೇಕು ಹಾಗೂ  ವೈಜ್ಞಾನಿಕತೆ ಚಿಂತನೆಯಿಂದ ಮಾನವ ತಾಂತ್ರಿಕ ಲಕ್ಷಣಗಳನ್ನು ಹೊಂದಿ ಆಧುನಿಕ ಜಗತ್ತಿಗೆ ಹೊಂದಿಕೊಳ್ಳುವ ಮತ್ತು ಭವಿಷ್ಯದ ಪೀಳಿಗೆಗೆ ಹೊಸತನ ಮೂಡಿಸಲು ಸಾಧ್ಯವಾಗುತ್ತದೆ. ಮೂಢನಂಬಿಕೆ ಇಂದಿಗೂ ದೇಶದ ಒಂದು ಸಮಸ್ಯೆಯಾಗಿದ್ದು ಅದನ್ನು ಹೊಗಲಾಡಿಸಲು ಪ್ರಯತ್ನಿಸಿ ಹಾಗೂ ಸರ್ ಸಿ.ವಿ …

ವೈಜ್ಞಾನಿಕ ಚಿಂತನೆ ಬಾಲ್ಯದಿಂದಲೇ ರೂಢಿಯಾಗಲಿ Read More »

ವಿಜಯನಗರ ವನ್ನು ಸಮಗ್ರ ಅಭಿವೃದ್ಧಿಗೊಳಿಸಲು 120 ಕಿಮೀ ವೇಗದಲ್ಲಿ ಕಾರ್ಯ

ವಿಜಯನಗರ – ಹೊಸಪೇಟೆ ಮಾರ್ಚ್ : ನೂತನ ಜಿಲ್ಲೆ ವಿಜಯನಗರ ವನ್ನು ಸಮಗ್ರ ಅಭಿವೃದ್ಧಿಗೊಳಿಸಲು 120 ಕಿಮೀ ವೇಗದಲ್ಲಿ ಕಾರ್ಯ ನಿರ್ವಹಿಸುವ ಅಗತ್ಯವಿದೆ ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಹೇಳಿದರು. ವಿಜಯನಗರ ಜಿಲ್ಲೆಯಲ್ಲಿ ಜಿಲ್ಲೆಯ ಉಸ್ತುವಾರಿ ಸಚಿವರಾಗಿ ನೇಮಕರಾದ ನಂತರ ನಡೆಸಿದ ಮೊದಲ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು. ನೂತನ ಜಿಲ್ಲೆ ಯ ಅಭಿವೃದ್ಧಿಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು …

ವಿಜಯನಗರ ವನ್ನು ಸಮಗ್ರ ಅಭಿವೃದ್ಧಿಗೊಳಿಸಲು 120 ಕಿಮೀ ವೇಗದಲ್ಲಿ ಕಾರ್ಯ Read More »

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ

ಮರಿಯಮ್ಮನಹಳ್ಳಿ ,ಮಾರ್ಚ್,1 : ಹಗರಿ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್.ಭೀಮನಾಯ್ಕ ಮರಿಯಮ್ಮನಹಳ್ಳಿಯ ವಿವಿಧ ವಾರ್ಡಗಳಲ್ಲಿ ಹಾಗೂ ಹಂಪಿನಕಟ್ಟೆ ಮತ್ತು ವ್ಯಾಸನಕೆರೆ ಗ್ರಾಮದಲ್ಲಿ ಅಂದಾಜು ರೂ. 294.7 ಲಕ್ಷ . ವೆಚ್ಚದ ಸಿ.ಸಿ.ರಸ್ತೆ ಕಾಮಗಾರಿಗಳಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕೊಠಡಿ ಮತ್ತು ಗ್ರಂಥಾಲಯವನ್ನು ರೂ. 74 ಲಕ್ಷ .ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು ಉದ್ಘಾಟಿಸಲಾಯಿತು.  ಪಟ್ಟಣದ 8,9,10 ನೇ ವಾರ್ಡಗಳಲ್ಲಿ ರೂ. 50 ಲಕ್ಷ , 5,6 ನೇ ವಾರ್ಡಗಳಲ್ಲಿ ರೂ. 25 ಲಕ್ಷ, …

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ Read More »

Translate »
Scroll to Top