ವಿದ್ಯಾರ್ಥಿಗಳು ಬಾಲ್ಯದಿಂದಲೇ ಧೈರ್ಯ,ಸಾಹಾಸ, ಸಾಧನೆಯ ಹಾದಿಯಲ್ಲಿ ಸಾಗಿ

ಮರಿಯಮ್ಮನಹಳ್ಳಿ : ಮಹಿಳೆ ಪ್ರಸ್ತುತ ಸಮಾಜದಲ್ಲಿ ಎಲ್ಲಾ ಆಯಾಮಗಳಲ್ಲಿ ಪ್ರಬುದ್ಧತೆ ಪಡೆದು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆ ಮಾಡಬೇಕು ಎಂದು ಪಟ್ಟಣದ ಅಪರಾಧ ವಿಭಾಗದ ಪಿ.ಎಸ್.ಐ ಮೀನಾಕ್ಷಿ ರವರು ಹೇಳಿದರು. ಅವರು ಬುಧವಾರ ಮರಿಯಮ್ಮನಹಳ್ಳಿ ಸಮೀಪದ ಪೋತಲಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯವನ್ನು  ಉಧ್ಘಾಟಿಸಿ ಮಾತನಾಡಿದರು,

ವಿದ್ಯಾರ್ಥಿಗಳು ಬಾಲ್ಯದಿಂದಲೇ ಧೈರ್ಯ,ಸಾಹಾಸ, ಸಾಧನೆಯ ಹಾದಿಯಲ್ಲಿ ಸಾಗಿ ತಮಗೆ ಬಂದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಪ್ರಖ್ಯಾತಿ ಹೊಂದಬೇಕು. ವಿದ್ಯಾರ್ಥಿನಿಯರು ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಹಲ್ಲೆ, ಅತ್ಯಾಚಾರ, ಪ್ರಕರಣಗಳನ್ನು ತಡೆಯಲು ಸ್ಥಳೀಯ ಪೋಲೀಸರ‌ ಸಹಾಯ ಪಡೆಯಬೇಕು. ವಿದ್ಯಾರ್ಥಿನಿಯರು ವಿಶೇಷವಾಗಿ ತಮ್ಮ ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ವಹಿಸಬೇಕು ಯಾವುದೇ ಆಕರ್ಷಣೆಗೆ ಒಳಗಾಗದೇ ಉನ್ನತ ಹುದ್ದೆ ಪಡೆಯಲು ಪ್ರಯತ್ನ ಮಾಡಬೇಕು ಮತ್ತು ದೇಶ ವಿದೇಶಗಳ ಹಲವಾರು ಮಾದರಿ ಮಹಿಳೆಯರ ಯಶೋಗಾಥೆಗಳನ್ನು ಅಧ್ಯಯನ ಮಾಡಿ ಯಶಸ್ವಿಯಾಗಲು ಮಾರ್ಗಗಳನ್ನು ಶೋಧಿಸಬೇಕು ಹಾಗೂ ಸ್ವತಂತ್ರ, ಸ್ವಾವಲಂಬಿ ಜೀವನ ನಡೆಸಲು ಮುಂದಾಗಬೇಕು ಎಂದು ಸಲಹೆ ಮಾಡಿದರು.  

ಶಾಲೆಯ ಮುಖ್ಯಗುರುಗಳಾದ ಎಂ ಬಸವರಾಜ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಸಂಧರ್ಭದಲ್ಲಿ ಮಹಿಳಾ ದಿನಾಚರಣೆ ಕುರಿತು ಶಾಲೆಯ ವಿದ್ಯಾರ್ಥಿನಿಯರಾದ ವಿ.ಲಲಿತಾ.ವೈ.ನಾಗವೇಣಿ, ವಿ.ದಿವ್ಯಾ, ವಿ.ಪವಿತ್ರ, ಹೆಚ್.ಮಾನಸ , ತೇಜಸ್ವಿನಿ, ಪೂರ್ಣಿಮಾ , ನೇತ್ರ, ನಿರ್ಮಲಾ, ಲಕ್ಷ್ಮಿ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲೆಯ ಹಿರಿಯ ಶಿಕ್ಷಕ ಬಿ.ಎ. ಜನಾರ್ಧನ ಸ್ವಾಮಿ, ಶಿಕ್ಷಕಿಯರಾದ ಎಂ.ರಾಜಾಬಿ, ಎಂ.ತುಳಸಮ್ಮ, ಶೃತಿ ಅಂಗನವಾಡಿ ಕಾರ್ಯಕರ್ತೆಯರಾದ ರಾಮಾಂಜಲಿ, ಜಂಬಕ್ಕ,  ವಿ.ರೇಖಾ, ಮಂಜುಳ , ಶಿಕ್ಷಕರಾದ ಕೆ.ಅಶೋಕ್ ಕುಮಾರ್ , ಎಂ.ರಾಮಮೂರ್ತಿ , ಕೊಟ್ರೇಶ್, ಬಿ.ಪರಶುರಾಮ ಉಪಸ್ಥಿತರಿದ್ದರು.  ಇದೇ ಸಂಧರ್ಭದಲ್ಲಿ ಮಹಿಳಾ ಶಿಕ್ಷಕಿಯರಿಗೆ, ಅಡುಗೆ ಸಿಬ್ಬಂದಿಯವರಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಶಾಲೆಯ ಮುಖ್ಯ ಗುರುಗಳು ಹಾಗೂ ಸಹಶಿಕ್ಷಕರು ಮತ್ತು ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಅರಿಶಿನ ಕುಂಕುಮ ಉಡಿ ತುಂಬುವ ಮೂಲಕ ಮಹಿಳಾ ದಿನಾಚರಣೆಗೆ  ಗೌರವ ಸಮರ್ಪಣೆ ಮಾಡಿದರು 

Leave a Comment

Your email address will not be published. Required fields are marked *

Translate »
Scroll to Top