ಮದ್ಯಪಾನ ಸೇವಿಸಿ ಬಣ್ಣದಲ್ಲಿ ಭಾಗವಹಿಸಬಾರದು

ಮರಿಯಮ್ಮನಹಳ್ಳಿ ,ಮಾ,15 : ಹಬ್ಬಗಳ ಆಚರಣೆಗೆ ಎಲ್ಲರ ಸಹಕಾರ ಅಗತ್ಯ. ಕೋವಿಡ್ ಹೋಗಿದೆ ಎಂದು ಯಾರೂ ಮೈಮರೆಯದೇ ಜಾಗರೂಕತೆಯಿಂದ ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ಹೋಳಿ ಹಬ್ಬವನ್ನು ಆಚರಿಸಬೇಕು ಎಂದು  ಹಗರಿಬೊಮ್ಮನಹಳ್ಳಿ ಸಿಪಿಐ.ಟಿ.ಮಂಜಣ್ಣ ಹೇಳಿದರು. ಅವರು ಸೋಮವಾರ ಸಂಜೆ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯ ಆವರಣದಲ್ಲಿ ಹೋಳಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು,  ಮದ್ಯಪಾನ ಸೇವಿಸಿ ಬಣ್ಣದಲ್ಲಿ ಭಾಗವಹಿಸುವುದನ್ನು ತಡೆಯಬೇಕು. ಏನೇ ತೊಂದರೆ ಆದರೂ ಇಲಾಖೆಯ ಗಮನಕ್ಕೆ ತರಬೇಕು. ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಯಾರೂ ಮುಂದಾಗಬಾರದು. ಹೋಳಿ ಹಬ್ಬದ ಆಚರಣೆ ಶಾಂತಿಯುತವಾಗಿರಬೇಕು. ಮೋಜು ಮಸ್ತಿ ಅಬ್ಬರದಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಬಾರದು. ಯಾರು ಬಲಾತ್ಕಾರವಾಗಿ, ಹಿಂಸಾತ್ಮವಾಗಿ ಬಣ್ಣ ಎರಚಬಾರದು. 

ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ನಾಗರಿಕರು ಯುವಕರು ಒತ್ತಾಯದಿಂದ ಬಣ್ಣ ಹಾಕುವುದು ಕೈಬಿಡಬೇಕು. ಶಾಂತ ರೀತಿಯಿಂದ ಹೋಳಿ ಹಬ್ಬವನ್ನು ಆಚರಿಸಬೇಕೆಂದು ಮನವರಿಕೆ ಮಾಡಿದರು. ನಂತರ ಪಟ್ಟಣದ ಪಿ.ಎಸ್.ಐ.ಹನುಮಂತಪ್ಪ ತಳವಾರ್ ಮಾತನಾಡಿ, ಯುವಕರು ಬಣ್ಣ ಆಡುವಾಗ ಯಾವುದೇ ಅಹಿತರಕರ ಘಟನೆಗಳು ನಡೆಯದಂತೆ ಬಣ್ಣದ ಹಬ್ಬವನ್ನು ಆಚರಿಸಬೇಕು. ಪೇಂಟ್, ಕೋಳಿ ಮೊಟ್ಟೆ, ಕರಿ ಎಣ್ಣೆಯಂತ ಚರ್ಮಕ್ಕೆ ಬಾದೆಬರುವ ಬಣ್ಣಗಳನ್ನು ಬಳಸದೆ ಹೋಳಿಯನ್ನು ಸಂಭ್ರಮಿಸಿ. ಒತ್ತಾಯ ಪೂರ್ವಕವಾಗಿ ಬಣ್ಣ ಎರಚಬಾರದು. ವಾಹನಗಳನ್ನು ನಿಲ್ಲಿಸಿ ಜನರಿಂದ ಹಣ ನೀಡುವಂತೆ ಒತ್ತಾಯಿಸಬಾರದು. ಕಾರಣಕ್ಕೂ ಹಬ್ಬದಲ್ಲಿ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ತಳವಾರ ಹುಲುಗಪ್ಪ, ಸೋಮಪ್ಪ ಉಪ್ಪಾರ, ಕುಮಾರ್, ವೆಂಕಟೇಶ, ಭರಮ್ಮಪ್ಪ, ದಾಸ, ತುಳುಜನಾಯ್ಕ, ಮರಡಿ ಬಸವರಾಜ, ರುದ್ರನಾಯ್ಕ, ಖಾಜ ಸಾಬ್, ಫಕೃಸಾಬ್, ರೆಡ್ಡಿ ಮಾಬು, ಸಿಡಿ.ಯಲ್ಲಪ್ಪ, ಮುಕುಂದ, ರಹಿಮಾನ್, ಪಟ್ಟಣ ಪಂಚಾಯತಿ ಸದಸ್ಯರಾದ ಕೆ.ಮಂಜುನಾಥ, ಎಲ್.ವಸಂತ್, ಸುರೇಶ್, ಡಣಾನಾಯಕನಕೆರೆ ಪಂಚಾಯತಿ ಉಪಾಧ್ಯಕ್ಷ ವೆಂಕಟೇಶ್ ಉಪ್ಪಾರ, ಕಂದಾಯ ನಿರೀಕ್ಷಕ ಅಂದಾನ ಗೌಡ, ಪ.ಪಂ.ಸಿಬ್ಬಂದಿ  ಮತ್ತು ಪೊಲೀಸ್ ಸಿಬ್ಬಂದಿ ಇತರರಿದ್ದರು.

Leave a Comment

Your email address will not be published. Required fields are marked *

Translate »
Scroll to Top