ಕೈಗಾರಿಕೆಗಳು ಸುರಕ್ಷಿತವಾದ ವಾತಾವರಣವನ್ನು ಒದಗಿಸಬೇಕು

ಮರಿಯಮ್ಮನಹಳ್ಳಿ ,ಮಾ,9 :  ಕೈಗಾರಿಕಾ ಚಟುವಟಿಕೆಗಳಲ್ಲಿ ಸುರಕ್ಷತೆಯ ಮಾನದಂಡಗಳನ್ನು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸುವ ಮೂಲಕ ಪ್ರತಿಯೊಬ್ಬ ಕಾರ್ಮಿಕರು ಗಮನಹರಿಸಬೇಕೆಂದು ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಮುಖ್ಯಕಾರ್ಯನಿರ್ವಾಹಕಾಧಿಕಾರಿ ವಿಮಲ್ ಸಿಂಗ್ ನುಡಿದರು. ಅವರು ಮಂಗಳವಾರ ಬಿ.ಎಂ.ಎಂ.ಇಸ್ಪಾತ್ ಕಂಪನಿಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸುರಕ್ಷತಾ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಆರೋಗ್ಯ, ಪರಿಸರದ ಮತ್ತು ಸುರಕ್ಷತೆಯ ಬಗ್ಗೆ ಕಾರ್ಮಿಕರಲ್ಲಿ ಜಾಗೃತಿ ಮೂಡಿಸುವ ಸದುದ್ದೇಶದಿಂದ ಪ್ರತಿವರ್ಷ ಈ ಸುರಕ್ಷತಾ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದು ತಿಳಿಸಿದ ಅವರು ಕೈಗಾರಿಕೆಗಳಲ್ಲಿ, ಉದ್ದಿಮೆಗಳಲ್ಲಿ, ಉತ್ತಮ ಗುಣ ಮಟ್ಟದ ವಸ್ತುಗಳನ್ನು ತಯಾರಿಸುವುದರ ಜೊತೆ ಅವುಗಳನ್ನು ಸುರಕ್ಷತೆಯಿಂದ ತಯಾರಿಸುವುದೇ ಈ ಸುರಕ್ಷತಾ ದಿನಾಚರಣೆಯ ಉದ್ದೇಶವಾಗಿದೆ. ಕೈಗಾರಿಕೆಗೆ ಸಂಬಂಧಿಸಿದ ಕಾಯ್ದೆಗಳನ್ನು ಪರಿಪೂರ್ಣವಾಗಿ ಜಾರಿಗೆ ತರುವುದರ ಜೊತೆ ಕೈಗಾರಿಕೆಗಳು ಸುರಕ್ಷಿತವಾದ ವಾತಾವರಣವನ್ನು  ಒದಗಿಸಬೇಕು,ಈ ನಿಟ್ಟಿನಲ್ಲಿ ಕೈಗಾರಿಕೆಯಲ್ಲಿ ತೊಡಗಿರುವ ಪ್ರತಿಯೊಬ್ಬ ಕಾರ್ಮಿಕನಿಗೂ ತರಬೇತಿ ಮೂಲಕ ತಿಳುವಳಿಕೆ ನೀಡುವುದರ ಜೊತೆ ಕಾರ್ಮಿಕರಿಗೆ, ಮೇಲ್ವಚಾರಕರಿಗೆ ಸುರಕ್ಷತಾ ತರಬೇತಿ ಕಾರ್ಯಕ್ರಮ,ತುರ್ತು ಯೋಜನೆಗಳ ತಯಾರಿ, ನಿರ್ವಹಣೆ, ವೈದ್ಯಕೀಯ ನೆರವು, ಸಂಬಂಧಪಟ್ಟ ವಿಷಯಗಳ ಬಗ್ಗೆ ಕಾರ್ಯಗಾರಗಳು,ತುರ್ತು ಯೋಜನೆಗಳ ಅಣಕು ಪ್ರದರ್ಶನ, ಕೈಗಾರಿಕೆಗಳಲ್ಲಿ ನಿರಂತರವಾಗಿ ನಡೆಯುತ್ತಿವೆ ಎಂದ ಅವರು ಉತ್ಪಾದನಾ ಸಾಮರ್ಥ್ಯದಲ್ಲಿ ಗಮನಾರ್ಹ ಹೆಚ್ಚಳಕ್ಕಿಂತ ಸುರಕ್ಷತೆಯಿಂದ ಕಾರ್ಯನಿರ್ವಹಿಸುವುದಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದರು. ನಂತರ

 ಬಿ.ಎಂ.ಎಂ.ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ಮುಖ್ಯ ಹಣಕಾಸು ಅಧಿಕಾರಿ ವಿ.ವಿ.ವಿ.ರಾಜು,ಮಾತನಾಡಿ ಸಾರ್ವಜನಿಕರಲ್ಲಿ ರಾಷ್ಟ್ರೀಯ ಸಂಪನ್ಮೂಲಗಳ ಸುರಕ್ಷತೆ,ಕೈಗಾರೀಕರಣದ ಮಹತ್ವ, ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವುದೇ ಈ ಸುರಕ್ಷತಾ ದಿನಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದ ಅವರು ಉತ್ಪಾದನಾ ಘಟಕಗಳಲ್ಲಿ ಕೈಗೊಂಡ ಸುರಕ್ಷತಾ ನಿಯಮಗಳ ನಿರ್ಲಕ್ಷವೇ ಅಪಘಾತಗಳು ಸಂಭವಿಸಲು ಬಹುಮುಖ್ಯ ಕಾರಣವಾಗುತ್ತವೆ ಆದ್ದರಿಂದ ಪ್ರತಿಯೊಬ್ಬರೂ ಸುರಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ತಮ್ಮ ಅಮೂಲ್ಯ ಜೀವನ ಉಳಿಸಿಕೊಳ್ಳಬೇಕೆಂದರು. ಈ ಸಂದರ್ಭದಲ್ಲಿ ಬಿ.ಎಂ.ಎಂ.ಕಂಪನಿಯ ಉಪಾಧ್ಯಕ್ಷರಾದ ಮನೀಶ್.ಡಿ.ವರ್ಣೇಕರ್ ,  ಬಿ.ಎಂ.ಎಂ.ಇಸ್ಪಾತ್ ಕಂಪನಿಯ ಹಣಕಾಸು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ರಾಜೇಂದ್ರ ಮುಂದ್ರಾ, ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಮುಖ್ಯಸ್ಥರಾದ ಗಣೇಶ್ ಹೆಗಡೆ ಸುರಕ್ಷತಾ ವಿಭಾಗದ ಮುಖ್ಯಸ್ಥರಾದ ಡಾ.ಶಿವನ ಗೌಡ, ಸುರಕ್ಷತಾ ವಿಭಾಗದ ಡಾ.ಶಿವನ ಗೌಡ, ಮಾರುತಿ ಪ್ರಸಾದ್, ಕಂಪನಿಯ ವಿವಿಧ ವಿಭಾಗಗಳ ಮುಖ್ಯಸ್ಥರು, ಸುರಕ್ಷತಾ ವಿಭಾಗದ, ಸಿಬ್ಬಂಧಿ ಆಡಳಿತ ವಿಭಾಗದ ಸಿಬ್ಬಂದಿ, ಹಾಗೂ ಉದ್ಯೋಗಿಗಳು ಹಾಜರಿದ್ದರು.   

ಕಾರ್ಯಕ್ರಮಕ್ಕೂ ಮುನ್ನ ಕಂಪನಿಯ ಸಿ.ಇ.ಒ.ವಿಮಲ್ ಸಿಂಗ್ ಜಾಥಾ ಕಾರ್ಯಕ್ರಮಕ್ಕೆ ಹಸಿರುನಿಶಾನೆ ನೀಡಿ,ಪ್ರಮಾಣ ವಚನ ಭೋದಿಸಿದರು.ಈ ಸಂದರ್ಭದಲ್ಲಿ ಉದ್ಯೋಗಿಗಳು ಸುರಕ್ಷತಾ ಘೋಷಣೆಗಳನ್ನು ಕೂಗುತ್ತಾ ಪ್ರಭಾತ್ ಪೇರಿ ನಡೆಸಿದರು.ನಂತರ ವೇದಿಕೆಯಲ್ಲಿ ವಿವಿಧ ಸುರಕ್ಷತಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವೇದಿಕೆಯ ಗಣ್ಯರು ವಿತರಿಸಿದರು.ಸುರಕ್ಷತಾ ದಿನಾಚರಣೆ ಅಂಗವಾಗಿ ಸುರಕ್ಷತಾ ವಸ್ತುಪ್ರದರ್ಶನ ಸಹ ಏರ್ಪಡಿಸಲಾಗಿತ್ತು.

Leave a Comment

Your email address will not be published. Required fields are marked *

Translate »
Scroll to Top