mariyammanahalli

ಹಿಂದಿಗೆ ನಾವು ಗೌರವ ನೀಡುವಂತೆ ಕನ್ನಡ ಭಾಷೆಗೂ ಪ್ರತಿಯೊಬ್ಬರೂ ಗೌರವ ನೀಡಬೇಕು

ಮರಿಯಮ್ಮನಹಳ್ಳಿ:ಹಿಂದಿಗೆ ನಾವು ಗೌರವ ನೀಡುವಂತೆ ಕನ್ನಡ ಭಾಷೆಗೂ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ನಾ.ಗೌ) ಮರಿಯಮ್ಮನಹಳ್ಳಿ ಹೋಬಳಿಘಟಕ ಅಧ್ಯಕ್ಷ ಈಡಿಗರರಮೇಶ ಬ್ಯಾಲಕುಂದಿ ಹೇಳಿದ್ದಾರೆ. ಹಿಂದಿ ನಟ ಅಜಯ್ ದೇವಗನ್ ಟ್ವಿಟ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕನ್ನಡಿಗರು, ನಮಗೆ ನಮ್ಮದೇ ಆದ ಭಾಷೆ, ಸ್ವಾಭಿಮಾನ ಇದೆ. ನಮ್ಮ ಭಾಷೆ, ನೆಲ ಮತ್ತು ಜಲ ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ದೇಶ ಅನೇಕ ಭಾಷೆಗಳ ಗೂಡು, ಅವರವರಿಗೆ ಆಯಾ ಭಾಷೆ ಬಗ್ಗೆ ಸ್ವಾಭಿಮಾನವಿರುತ್ತದೆ. …

ಹಿಂದಿಗೆ ನಾವು ಗೌರವ ನೀಡುವಂತೆ ಕನ್ನಡ ಭಾಷೆಗೂ ಪ್ರತಿಯೊಬ್ಬರೂ ಗೌರವ ನೀಡಬೇಕು Read More »

ಗ್ರಾ.ಪಂ‌.ಸದಸ್ಯ ಗುಂಡಾ ಸೋಮಣ್ಣ ಸ್ವತಃ ಚರಂಡಿ ಸ್ವಚ್ಛತೆಗೊಳಿಸಿದರು

ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ಡಣಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇಂದಿರಾಗಾಂಧಿ ನಗರದಲ್ಲಿ ಬಹುದಿನಗಳಿಂದ ಸ್ವಚ್ಛತೆ ಕಾಣದೇ ಇದ್ದ ಚರಂಡಿಯನ್ನು ಗ್ರಾಮ ಪಂಚಾಯತಿ ಸದಸ್ಯ ಗುಂಡಾ ಸೋಮಣ್ಣ ಸ್ವತಃ ಚರಂಡಿ ಸ್ವಚ್ಛತೆಗೊಳಿಸಿದರು. ಮನುಷ್ಯನಿಗೆ ಸಣ್ಣಮಟ್ಟದ ಅಧಿಕಾರ ಸಿಕ್ಕರೆ ಸಾಕು, ಆತನ ಖದರೆ ಬದಲಾಗುತ್ತದೆ.ಆದರೆ ಇಲ್ಲೊಬ್ಬರು ಗ್ರಾ.ಪಂ.ಸದಸ್ಯರಾದರು ಯಾವುದೇ ಎಗ್ಗಿಲ್ಲದೆ ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಡಣಾಯಕನಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಇಂದಿರಾಗಾಂಧಿ ನಗರದಲ್ಲಿ ಬಹುದಿನಗಳಿಂದ ಗಬ್ಬುನಾರುತ್ತಿದ್ದ ಚರಂಡಿಯನ್ನು ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಭಾನುವಾರ ಸ್ವಚ್ಛತೆ ಗೊಳಿಸಿದ್ದಾರೆ. ಬಳಕೆ ನೀರು ಕೂಡ ಸರಾಗವಾಗಿ …

ಗ್ರಾ.ಪಂ‌.ಸದಸ್ಯ ಗುಂಡಾ ಸೋಮಣ್ಣ ಸ್ವತಃ ಚರಂಡಿ ಸ್ವಚ್ಛತೆಗೊಳಿಸಿದರು Read More »

ವೆಂಕಟಾಪುರ ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

ಮರಿಯಮ್ಮನಹಳ್ಳಿ : ಪಟ್ಟಣ ಸಮೀಪದ 112 ವೆಂಕಟಾಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯನ್ನು ಸಡಗರ ಸಂಭ್ರಮದಿಂದ ಗ್ರಾಮದ ಜನರು ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯ ಮಹೇಶ್, ಹನುಮಂತ, ಮಾರುತಿ, ವಿನೋದ್, ಬೆಳ್ಳಿ ಹನುಮಂತ, ಲಕ್ಷ್ಮಣ, ತಿರುಪತಿ, ಮಂಜುನಾಥ, ಅಂಜಿನಪ್ಪ, ಭೀಮೇಶ್, ಗಣೇಶ್, ದುರುಗಪ್ಪ, ರಮೇಶ್, ವೆಂಕಟೇಶ್ ಇತರರಿದ್ದರು.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮತ್ತು ಎಸಿ ಲೀಕ್ ಆಗಿ ಒಂದೇ ಕುಟುಂಬದಲ್ಲಿ ನಾಲ್ವರ ಸಾವು

ಮರಿಯಮ್ಮನಹಳ್ಳಿ : ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮತ್ತು ಎಸಿ ಲೀಕ್ ಆಗಿ ಬೆಂಕಿ ಹತ್ತಿಕೊಂಡು ಒಂದೇ ಕುಟುಂಬದಲ್ಲಿ ನಾಲ್ವರ ಸಾವು. ಪಟ್ಟಣದ  5ನೇ ವಾರ್ಡಿನಲ್ಲಿರುವ ಡಿ.ರಾಘವೇಂದ್ರ ಶೆಟ್ಟಿ ರವರ ಮನೆಯಲ್ಲಿ ಇದ್ದಕ್ಕಿದ್ದಂತೆ ಮಧ್ಯರಾತ್ರಿ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮತ್ತು ಎ.ಸಿ ಲೀಕ್ ನಿಂದ ಮನೆಗೆ ಬೆಂಕಿ ಹತ್ತಿಕೊಂಡಿದ್ದು ಮನೆಯ ಕೆಳಗಡೆ ಮಲಗಿದ್ದ ರಾಘವೇಂದ್ರ ಶೆಟ್ಟಿ ಮತ್ತು ಅವರ ಹೆಂಡತಿ ರಾಜೇಶ್ವರಿ ರವರು ಮನೆಯಿಂದ ಹೊರಗಡೆ ಓಡಿ ಬಂದಿದ್ದು  ಮನೆಯ ಮೇಲುಗಡೆ ಬೆಡ್ ರೂಂ ನಲ್ಲಿ ಮಲಗಿದ್ದ ರಾಘವೇಂದ್ರ ಶೆಟ್ಟಿ …

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಮತ್ತು ಎಸಿ ಲೀಕ್ ಆಗಿ ಒಂದೇ ಕುಟುಂಬದಲ್ಲಿ ನಾಲ್ವರ ಸಾವು Read More »

ಭಾನುವಾರದಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಆರಂಭ

ಮರಿಯಮ್ಮನಹಳ್ಳಿ: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿ ಇಲಾಖೆಯ, ಪಟ್ಟಣದ ಆರಾಧ್ಯದೈವ ಗಳಾದ ಶ್ರೀಲಕ್ಷ್ಮಿನಾರಾಯಣಸ್ವಾಮಿ ಹಾಗು ಶ್ರೀ ಆಂಜನೇಯಸ್ವಾಮಿಗಳ ಜೋಡಿ ರಥೋತ್ಸವದ ದೇವತಾ ಕಾರ್ಯಗಳು ಯುಗಾದಿ ಪಾಡ್ಯದಂದು, ಕಿನ್ನಾಳದ ಗಂಗೂರ ಮನೆತನದ ಆಗಮದವರ ಪೌರೋಹಿತ್ಯದಲ್ಲಿ ಆರಂಭಗೊಳ್ಳುತ್ತವೆ. ಏಪ್ರಿಲ್ 7ರಂದು ಗುರುವಾರ ಚೈತ್ರ ಶುದ್ದಷಷ್ಟಿ  ಹನುಮಂತೋತ್ಸವ (ನಿಶ್ಚಿತಾರ್ಥ), ಏಪ್ರಿಲ್8ರಂದು ಚೈತ್ರ ಶುದ್ಧ ಸಪ್ತಮಿ ಶುಕ್ರವಾರ ಗರುಡೋತ್ಸವ (ದೇವರಲಗ್ನ),9ರಂದು ಚೈತ್ರ ಶುದ್ಧ ಅಷ್ಟಮಿ ಶನಿವಾರರದಂದು ಬಿಳಿ ಆನೆ ಉತ್ಸವ,10ರಂದು  ಚೈತ್ರ ಶುದ್ಧ ಶನಿವಾರ ನವಮಿಯಂದು ರಥೋತ್ಸವ,ಭಾನುವಾರ ಚೈತ್ರ ಶುದ್ಧ …

ಭಾನುವಾರದಿಂದ ವಿವಿಧ ಪೂಜಾ ಕಾರ್ಯಕ್ರಮಗಳು ಆರಂಭ Read More »

ವ್ಯಾಸನಕೆರೆ ಗ್ರಾಮದಲ್ಲಿ ಶಾಲಾ ಮಕ್ಕಳಿಂದ ಹಳ್ಳಿಜೀವನ ಶೈಲಿ ಚಟುವಟಿಕೆ

ಮರಿಯಮ್ಮನಹಳ್ಳಿ ,ಮಾ,21 : ಪಟ್ಟಣ ಸಮೀಪದ ವ್ಯಾಸನಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರುದಿನಗಳ ಓದುವ ಅಭಿಯಾನ ಕಾರ್ಯಕ್ರಮ ಹಳ್ಳಿಜೀವನ ಶೈಲಿ ಚಟುವಟಿಕೆ ಯನ್ನು ಶಾಲಾ ಮಕ್ಕಳಿಂದ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಶ್ರೀಯುತ ಬಿ.ಹುಲುಗಪ್ಪ ಮತ್ತು ಸಿಬ್ಬಂದಿ ವರ್ಗ ದವರು ಮತ್ತು ಮಾರ್ಗದರ್ಶನ ಶಿಕ್ಷಕಿಯಾದ ಶ್ರೀಮತಿ  ಎಂ.ಹನುಮಕ್ಕ  ಹಾಗೂ S D M C ಅಧ್ಯಕ್ಷರು ಸದಸ್ಯರು ಭಾಗವಹಿಸಿದ್ದರು.

ಪಡಿತರ ಅಕ್ಕಿ ಅಕ್ರಮ ಸಾಗಟವನ್ನು ವಶಕ್ಕೆ ಪಡೆದ ಪಟ್ಟಣದ ಪೊಲೀಸರು

ಮರಿಯಮ್ಮನಹಳ್ಳಿ,,ಮಾ.19 :  ಸರ್ಕಾರ ಬಡವರಿಗೆ ಉಚಿತವಾಗಿ ವಿತರಿಸುವ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 16 ಸಾವಿರದ 800 ನೂರು ರೂ ಮೌಲ್ಯದ 11.20 ಕ್ವಿಂಟಾಲ್ ಪಡಿತರ ಅಕ್ಕಿ ಮತ್ತು ಸಾಗಾಟ ಮಾಡಲು ಬಳಸಿದ ಬುಲೆರೋ ಪಿಕಪ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗುರುವಾರ ಪಟ್ಟಣದ ಹೊರ ವಲಯದ ದೇವಲಾಪುರ ಕ್ರಾಸ್  ಸಮೀಪ ರಾಷ್ಟ್ರೀಯ ಹೆದ್ದಾರಿ 50ರ ರಸ್ತೆಯಲ್ಲಿ  ಪಟ್ಟಣದ ಪಿ.ಎಸ್.ಐ.ಹನುಮಂತಪ್ಪ ತಳವಾರ್ ರವರು ವಾಹನವನ್ನು ವಶಕ್ಕೆ  ಪಡೆದುಕೊಂಡರು. ಅಕ್ರಮವಾಗಿ ಬುಲೆರೋ ಪಿಕಪ್ ನಲ್ಲಿ  ಪಡಿತರ ಅಕ್ಕಿ ಸಾಗಾಟ ಮಾಡುತ್ತಿರುವ ಬಗ್ಗೆ …

ಪಡಿತರ ಅಕ್ಕಿ ಅಕ್ರಮ ಸಾಗಟವನ್ನು ವಶಕ್ಕೆ ಪಡೆದ ಪಟ್ಟಣದ ಪೊಲೀಸರು Read More »

ಯುವಕರು ಜೀವನದಲ್ಲಿ ಅಪ್ಪು ರವರ ಆದರ್ಶಗಳನ್ನು ಅಳವಡಿಸಿಕೊಳ್ಳಿ

ಮರಿಯಮ್ಮನಹಳ್ಳಿ ,ಮಾ,17 : ಪುನೀತ್ ರಾಜ್‍ಕುಮಾರ್ ರವರ ದಾನಧರ್ಮ ಮಾಡಿರುವುದು ಎಲ್ಲಿಯೂ ಪ್ರಚಾರ ಮಾಡದೇ ಎಲೆಮರೆಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದರು. ಇಂದಿನ ಯುವಕರು ಅವರ ಜೀವನದಲ್ಲಿ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಈಡಿಗರ ನಾಗರಾಜಪ್ಪ ಹೇಳಿದರು. ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಗುರುವಾರ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ನಿಮಿತ್ತ   ಪಟ್ಟಣದ ಶ್ರೀಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ಅಪ್ಪುಗೆ ಜೈಕಾರ ಹಾಕಿ ಸಂಭ್ರಮದಿಂದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಈ …

ಯುವಕರು ಜೀವನದಲ್ಲಿ ಅಪ್ಪು ರವರ ಆದರ್ಶಗಳನ್ನು ಅಳವಡಿಸಿಕೊಳ್ಳಿ Read More »

7ನೇ ವಾರ್ಡಿನ ಯುವಕರು ಅಪ್ಪು ಹುಟ್ಟು ಹಬ್ಬ ಸಂಭ್ರಮ ದಿಂದ ಆಚರಣೆ ಮಾಡಿದರು

ಮರಿಯಮ್ಮನಹಳ್ಳಿ ,ಮಾ,17 : ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ನಿಮಿತ್ತ ಮರಿಯಮ್ಮನಹಳ್ಳಿಯ 7ನೇ ವಾರ್ಡಿನ ಮಾರಿಕಾಂಬಾ ದೇವಸ್ಥಾನದ ಹತ್ತಿರದ ಹೊಸೂರಿನ ಯುವಕರು ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ಅಪ್ಪುವಿನ ಹೆಸರಿನಲ್ಲಿ ಕೇಕ್ ತಯಾರಿಸಿದ್ದು, ಪರಸ್ಪರ ಅಭಿಮಾನಿಗಳು ಕೇಕ್  ತಿನ್ನಿಸಿ ಅಪ್ಪುಗೆ ಜೈಕಾರ ಹಾಕಿ ಸಂಭ್ರಮದಿಂದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು.  ಕಾರ್ಯಕ್ರಮಕ್ಕೆ ಬಂದ ಗಣ್ಯರಿಗೆ ಸಸಿ ನೀಡಿದರು. ಮತ್ತು  ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಪೆನ್ ವಿತರಿಸಲಾಯಿತು. ನಂತರ ಅಪ್ಪು ಅಭಿಮಾನಿಗಳು ಅನ್ನಸಂತರ್ಪಣೆಯನ್ನು ಕೈಗೊಂಡರು.  ಈ ಸಂದರ್ಭದಲ್ಲಿ …

7ನೇ ವಾರ್ಡಿನ ಯುವಕರು ಅಪ್ಪು ಹುಟ್ಟು ಹಬ್ಬ ಸಂಭ್ರಮ ದಿಂದ ಆಚರಣೆ ಮಾಡಿದರು Read More »

Translate »
Scroll to Top