LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Entertainment News

ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅವರ ಐದು ವಿಶೇಷ ಪೋಸ್ಟ್ ಕಾರ್ಡ್ ಬಿಡುಗಡೆ

ಬೆಂಗಳೂರು: ಪವರ್ ಸ್ಟಾರ್ ಡಾ. ಪುನೀತ್ ರಾಜ್‌ಕುಮಾರ್ ಅವರ 50 ನೇ ಜನ್ಮ ದಿನವನ್ನು ಸ್ಮರಣೀಯಗೊಳಿಸುವ ಹಿನ್ನೆಲೆಯಲ್ಲಿ ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ನ ಅಪ್ಪು ಗಂಧದಗುಡಿ ಅಗರಬತ್ತಿ ಸಹಯೋಗದಲ್ಲಿ ಇಂಡಿಯಾ ಪೋಸ್ಟ್ ಪುನಿತ್ ರಾಜ್ ಕುಮಾರ್ ಅವರ ಐದು ವಿಶೇಷ ಪೋಸ್ಟ್ ಪೋಸ್ಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿತು.
ನಗರದ ಜಿಪಿಒ ಸಭಾಂಗಣದಲ್ಲಿ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್ ಅವರು ವಿಶೇಷ ಪೋಸ್ಟ್ ಪೋಸ್ಟ್ ಕಾರ್ಡ್ ಗಳನ್ನು ಲೋಕಾರ್ಪಣೆ ಮಾಡಿದರು. ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಂದ್ರಶೇಖರ್ ಕಾಕಮಾನು, ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ರಘುನಂದನ್, ಅಪ್ಪು ಗಂಧದ ಗುಡಿ ಅಗರಬತ್ತಿ ಸಂಸ್ಥೆಯ ಸಹ ಸಂಸ್ಥಾಪಕರಾದ ಸ್ವಪ್ನಾ ರಾಜೇಶ್ ಉಪಸ್ಥಿತರಿದ್ದರು. ಪವರಸ್ಟಾರ್, ಅಪ್ಪು, ನಗು ಮುಖ ರಾಜಕುಮಾರ, ಕರ್ನಾಟಕ ರತ್ನ, ಅಭಿಮಾನಿಗಳ ದೇವರು ಎಂಬ ಪೋಸ್ಟ್ ಗಳನ್ನು ಅನಾವರಣಗೊಳಿಸಲಾಯಿತು. ಅಶ್ವಿನಿ ಪುನಿತ್ ರಾಜ್ ಕುಮಾರ್ ಅವರು ಸಹ ಅಪ್ಪು ಗಂಧದಗುಡಿ ಅಗರಬತ್ತಿ ಜೊತೆ ಸಹಯೋಗ ಹೊಂದಿದ್ದು, ಎರಡು ಅಗರ ಬತ್ತಿ ಸಣ್ಣ ಪ್ಯಾಕೆಟ್ ಮಾರಾಟವಾದರೆ 1 ರೂಪಾಯಿ ಮೊತ್ತವನ್ನು ಪುನಿತ್ ರಾಜ್ ಕುಮಾರ್ ಪ್ರತಿಷ್ಠಾನಕ್ಕೆ ದೇಣಿಗೆ ನೀಡಲು ತೀರ್ಮಾನಿಸಿದೆ.

ನಂತರ ಮಾತನಾಡಿದ ಚೀಪ್ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರ ಕುಮಾರ್, ಇಂದು ಪುನಿತ್ ರಾಜ್ ಕುಮಾರ್ ಅವರ ವಿಶೇಷ ಪೋಸ್ಟ್ ಕಾರ್ಡ್ ಗಳನ್ನು ಬಿಡುಗಡೆ ಮಾಡಿದ್ದು, ಅಗತ್ಯ ಬಿದ್ದರೆ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲು ಸಿದ್ಧ. ಇದಕ್ಕೆ ಖಾಸಗಿ ವಲಯದಿಂದ ಬೇಡಿಕೆ ಬಂದ ನಂತರ ರಾಷ್ಟ್ರಮಟ್ಟದಲ್ಲಿ ತೀರ್ಮಾನವಾಗಬೇಕು. ಪ್ರಸ್ತಾವನೆ ಸಲ್ಲಿಕೆಯಾದ ನಂತರ ಕನಿಷ್ಟ ಒಂದು ವರ್ಷದ ಅವಧಿ ಅಗತ್ಯವಾಗಿದೆ ಎಂದರು.

ಪ್ರತಿಯೊಂದು ಪೋಸ್ಟ್ ಕಾರ್ಡ್ ಗಳು ಡಾ. ಪುನೀತ್ ರಾಜ್‌ಕುಮಾರ್ ಅವರ ಜೀವನ ಮತ್ತು ಪರಂಪರೆಯನ್ನು ಒಳಗೊಂಡಂತೆ ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ. ಮಾರ್ಚ್ 17 ರಂದು ಡಾ. ಪುನೀತ್ ರಾಜ್‌ಕುಮಾರ್ ಅವರ ಜನ್ಮದಿನವಿದ್ದು, ಅಂದಿನಿಂದ ವಿಶೇಷ ಪೋಸ್ಟ್ ಕಾರ್ಡ್ ಗಳು ಲಭ್ಯವಾಗಲಿದೆ. ಪೋಸ್ಟ್ ಕಾರ್ಡ್ ಗಳ ಸಂಗ್ರಾಹಕರಿಗೆ ಇದು ನಿಜಕ್ಕೂ ಅಪೇಕ್ಷಿತ ವಸ್ತುವಾಗಿದೆ. ಇವು ಜಿಪಿಒ ಕೌಂಟರ್‌ಗಳಲ್ಲಿ ಖರೀದಿಗೆ ಲಭ್ಯವಿರುತ್ತವೆ. ನಾವಾಡುವ ನುಡಿಯೇ ಕನ್ನಡ `ಹಾಡು ಈಗಲೂ ಮೈ ನವಿರೇಳಿಸುತ್ತದೆ. ಅಪ್ಪು ಕೇವಲ ನಟರಷ್ಟೇ ಅಲ್ಲದೇ ಸಮಾಜಕ್ಕೆ ಅವರು ನೀಡಿದ ಕೊಡುಗೆ ಅನನ್ಯ ಎಂದು ಹೇಳಿದರು.

ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಮಾತನಾಡಿ, ಉರ್ವಿ ಫ್ರಾಗ್ರೆನ್ಸಸ್ ಪ್ರೈವೇಟ್ ಲಿಮಿಟೆಡ್, ಪ್ರೀಮಿಯಂ ಧೂಪದ್ರವ್ಯ ಕಡ್ಡಿಗಳು ಮತ್ತು ಸಂಬಂಧಿತ ಉತ್ಪನ್ನಗಳ ಉತ್ಪಾದನೆಯಲ್ಲಿ ಪರಿಣತಿ ಹೊಂದಿದೆ. 1950 ರಲ್ಲಿ ಬಾಲಾಜಿ ಸ್ಟೋರ್ಸ್ ಮತ್ತು ಪಲ್ವರೈಸರ್ಸ್‌ನೊಂದಿಗೆ ಪ್ರಾರಂಭವಾದ ಪರಂಪರೆಯನ್ನು ಆಧರಿಸಿ, ಕಂಪನಿಯು ನಿರಂತರವಾಗಿ ನಾವೀನ್ಯತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಿದೆ. ಇತ್ತೀಚಿನ ಬಿಡುಗಡೆಯಾದ "ಅಪ್ಪುಸ್ ಗಂಧದಗುಡಿ ಅಗರಬತ್ತಿ", ಶ್ರೇಷ್ಠತೆ ಮತ್ತು ಸಾಂಸ್ಕೃತಿಕ ಪರಂಪರೆಯ ಬದ್ಧತೆಗೆ ಸಾಕ್ಷಿಯಾಗಿದೆ. ಅಶ್ವಿನಿ ಪುನಿತ್ ರಾಜ್ ಕುಮಾರ್ ಅವರೊಂದಿಗೆ ಅಪ್ಪು ಗಂಧದಗುಡಿ ಅಗರಬತ್ತಿ ಸಹಯೋಗ ಹೊಂದಿದ್ದು, ಎರಡು ಅಗರ ಬತ್ತಿ ಸಣ್ಣ ಪ್ಯಾಕೆಟ್ ಮಾರಾಟವಾದರೆ 1 ರೂಪಾಯಿ ಮೊತ್ತವನ್ನು ಪುನಿತ್ ರಾಜ್ ಕುಮಾರ್ ಪ್ರತಿಷ್ಠಾನಕ್ಕೆ ಒದಗಿಸಲಾಗುವುದು ಎಂದು ಹೇಳಿದರು.
ಹೆಚ್ಚಿನ ಮಾಹಿತಿಗಾಗಿ ಉರ್ವಿ ಫ್ರೇನ್ಸಸ್ ಪ್ರೈವೇಟ್ ಲಿಮಿಟೆಡ್ ; www.urvifragrances.com

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ