LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Entertainment News

ಐಎಂಡಿಬಿ ಪಟ್ಟಿಯಲ್ಲಿ ‘ಟಾಕ್ಸಿಕ್’ ನಂ.1: ದೇಶದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಯಶ್ ಚಿತ್ರಕ್ಕೆ ಭರ್ಜರಿ ಮುನ್ನಡೆ!

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗುವ ಮೊದಲುವೇ ದೇಶದಾದ್ಯಂತ ಭಾರೀ ಸಂಚಲನ ಸೃಷ್ಟಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಚರ್ಚೆಗಳು ನಡೆದಿದ್ದರೂ, ಚಿತ್ರದ ಮೇಲಿನ ಅಭಿಮಾನಿಗಳ ನಿರೀಕ್ಷೆ ಮಾತ್ರ ಮತ್ತಷ್ಟು ಹೆಚ್ಚಾಗುತ್ತಿದ್ದು, ಇದೀಗ ಐಎಂಡಿಬಿ (IMDb) ಬಿಡುಗಡೆ ಮಾಡಿರುವ ಭಾರತದ 'Most Anticipated Movies' ಪಟ್ಟಿಯಲ್ಲಿ ‘ಟಾಕ್ಸಿಕ್’ ಅಗ್ರಸ್ಥಾನಕ್ಕೇರಿದೆ.

47% ಜನಪ್ರಿಯತೆಯೊಂದಿಗೆ ಅಗ್ರಸ್ಥಾನ

ಐಎಂಡಿಬಿಯ ರಿಯಲ್-ಟೈಮ್ ಜನಪ್ರಿಯತಾ ಪಟ್ಟಿಯಲ್ಲಿ ‘ಟಾಕ್ಸಿಕ್’ 47% ಮತಗಳನ್ನು ಪಡೆದು ಮೊದಲ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇದು ಉಳಿದ ಎಲ್ಲ ಭಾರತೀಯ ಸಿನಿಮಾಗಳಿಗಿಂತ ಗಮನಾರ್ಹ ಅಂತರದ ಮುನ್ನಡೆಯಾಗಿದೆ.

ಎರಡನೇ ಸ್ಥಾನದಲ್ಲಿರುವ ದಳಪತಿ ವಿಜಯ್ ಅಭಿನಯದ ‘ಜನ ನಾಯಗನ್’ ಚಿತ್ರಕ್ಕೆ ಕೇವಲ 12.7% ಜನಪ್ರಿಯತೆ ಲಭಿಸಿದ್ದು, ಯಶ್ ಚಿತ್ರದ ಕ್ರೇಜ್ ಎಷ್ಟರ ಮಟ್ಟಿಗೆ ಹೆಚ್ಚಿದೆ ಎಂಬುದನ್ನು ಈ ಅಂಕಿಅಂಶಗಳು ತೋರಿಸುತ್ತವೆ.

ಉಳಿದ ಚಿತ್ರಗಳ ಸ್ಥಿತಿ ಹೇಗಿದೆ?

ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ‘ಆವಾರಾಪನ್ 2’ (9.4%), ನಾಲ್ಕನೇ ಸ್ಥಾನದಲ್ಲಿ ‘ಇಂದ್ರಜಾಲ್’ (9.1%) ಹಾಗೂ ನಂತರ ‘ಡಿಸಿ’ (7.4%) ಚಿತ್ರಗಳಿವೆ. ‘ಈಥಾ’, ‘ವಿಶ್ವನಾಥ್ ಅಂಡ್ ಸನ್ಸ್’ ಮತ್ತು ‘ಮಿರ್ಜಾಪುರ್: ದಿ ಮೂವಿ’ ಸೇರಿದಂತೆ ಹಲವು ದೊಡ್ಡ ಚಿತ್ರಗಳು ಮೂರು ಶೇಕಡಾಕ್ಕಿಂತ ಕಡಿಮೆ ಜನಪ್ರಿಯತೆಯೊಂದಿಗೆ ಹಿಂಬಾಲಿಸಿವೆ.

ನೆಗೆಟಿವ್ ಪ್ರಚಾರಕ್ಕೂ ಮಣಿಯದ ‘ಟಾಕ್ಸಿಕ್’ ಕ್ರೇಜ್

ಕಳೆದ ಕೆಲವು ವಾರಗಳಿಂದ ಚಿತ್ರದ ಕುರಿತು ವಿವಿಧ ರೀತಿಯ ಊಹಾಪೋಹಗಳು ಮತ್ತು ನೆಗೆಟಿವ್ ಸುದ್ದಿಗಳು ಹರಿದಾಡುತ್ತಿದ್ದರೂ, ಅವು ಚಿತ್ರದ ಮೇಲಿನ ಅಭಿಮಾನಿಗಳ ನಿರೀಕ್ಷೆಗೆ ಯಾವುದೇ ಧಕ್ಕೆ ತಂದಿಲ್ಲ. ಬದಲಾಗಿ, ಬಿಡುಗಡೆಯ ಮುನ್ನವೇ ‘ಟಾಕ್ಸಿಕ್’ ಕುರಿತು ದೇಶಾದ್ಯಂತ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ಜಾಗತಿಕ ಮಟ್ಟದಲ್ಲಿ ಯಶ್ ಮತ್ತೊಂದು ದಾಖಲೆ ಬರೆಯಲಿದೆಯೇ?

ಗೀತು ಮೋಹನ್‌ದಾಸ್ ನಿರ್ದೇಶನದ ಈ ಆ್ಯಕ್ಷನ್ ಎಂಟರ್‌ಟೈನರ್ ಮೂಲಕ, ಕೆಜಿಎಫ್ ಬಳಿಕ ಯಶ್ ಮತ್ತೊಮ್ಮೆ ಭಾರತೀಯ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸುವ ನಿರೀಕ್ಷೆ ವ್ಯಕ್ತವಾಗಿದೆ. ಪ್ಯಾನ್-ಇಂಡಿಯಾ ಮಟ್ಟದಲ್ಲಷ್ಟೇ ಅಲ್ಲ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ‘ಟಾಕ್ಸಿಕ್’ ಮೇಲೆ ಭಾರೀ ನಿರೀಕ್ಷೆ ನಿರ್ಮಾಣವಾಗಿದ್ದು, ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಬಿಡುಗಡೆಯಾಗುವ ಮೊದಲುವೇ ದೇಶದ ಬಹುನಿರೀಕ್ಷಿತ ಸಿನಿಮಾ ಎಂಬ ಪಟ್ಟವನ್ನು ‘ಟಾಕ್ಸಿಕ್’ ತನ್ನದಾಗಿಸಿಕೊಂಡಿದ್ದು, ಈಗ ಎಲ್ಲರ ಚಿತ್ತ ಚಿತ್ರದ ಟೀಸರ್ ಹಾಗೂ ಬಿಡುಗಡೆ ದಿನಾಂಕದತ್ತ ನೆಟ್ಟಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ರಾಜ್ಯಪಾಲರಾಗಿ ಸುಧಾ ಯಾದವ್‌ ಅಧಿಕಾರ ಸ್ವೀಕಾರಪ್ರತಿ ಕುಟುಂಬಕ್ಕೆ ಒಂದೊಂದು ಸರ್ಕಾರಿ ಉದ್ಯೋಗ; ಹೆಚ್.ಡಿ.ಕುಮಾರಸ್ವಾಮಿ ಹೊಸ ಆಲೋಚನೆಬಳ್ಳಾರಿ: ಕುಡಿಯುವ ನೀರಿನ ಅಭಾವ ತಡೆಗೆ ಜಿಲ್ಲಾಡಳಿತ ಸನ್ನದ್ಧ; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆಜಮೀರ್‌ ವಿಡಿಯೋ ಹರಿಬಿಟ್ಟಿರಬಹುದು? ಸಿದ್ದರಾಮಯ್ಯ ಆಪ್ತರಿಂದಲೇ ವ್ಯವಸ್ಥಿತ ಸಂಚು: ಎಚ್.ಡಿ. ಕುಮಾರ ಸ್ವಾಮಿರಾಜ್ಯದಲ್ಲಿ ಇನ್ನೂ ಬೇಸಿಗೆ ಆರಂಭವಾಗುವ ಮುನ್ನವೇ ವಿದ್ಯುತ್‌ ಕೊರತೆಯ ಆತಂಕಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ: ಸಿಎಂ ಡಿ ಕೆ ಶಿವಕುಮಾರ್ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು: ಹೆಚ್.ಡಿ. ಕುಮಾರಸ್ವಾಮಿ ಅವರ ಗಂಭೀರ ಆರೋಪರಾಜ್ಯದ 226 ತಾಲ್ಲೂಕುಗಳು ಬರಪೀಡಿತ; ₹60 ಸಾವಿರ ಕೋಟಿಗೂ ಅಧಿಕ ನಷ್ಟದ ಅಂದಾಜು : ಡಾ. ಜಿ. ಪರಮೇಶ್ವರ್ರಾಬಕೊವಿ ಹಾಲು ಒಕ್ಕೂಟದಲ್ಲಿ 16.5 ಕೋಟಿ ಅಕ್ರಮದ ಆರೋಪ, ದೂರು ದಾಖಲು