LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News | State News

ಹಂಪಿ ಬಳಿ ಐದು ದಶಕಗಳ ಬಳಿಕ ಹುಲಿ ಪ್ರತ್ಯಕ್ಷ!

ಐತಿಹಾಸಿಕ ಹಂಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗ ಹುಲಿಯ ಹೆಜ್ಜೆ ಗುರುತು!

ಹೊಸಪೇಟೆ : ಐತಿಹಾಸಿಕ ಹಂಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈಗ ಹುಲಿಯ ಹೆಜ್ಜೆ ಗುರುತು! ಬರೋಬ್ಬರಿ ಐದು ದಶಕಗಳ ಬಳಿಕ ಕಿಷ್ಕಿಂಧಾ ಬೆಟ್ಟಗಳ ಅರಣ್ಯ ಪ್ರದೇಶದಲ್ಲಿ ಹುಲಿ ಕಾಣಿಸಿಕೊಂಡಿರುವುದು ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಕುತೂಹಲದ ಜೊತೆಗೆ ಆತಂಕವನ್ನೂ ಮೂಡಿಸಿದೆ.

ಕಳೆದ ಮೂರು ತಿಂಗಳಿನಿಂದ ಯಲಗೂಡ ಸುತ್ತಮುತ್ತ ಹುಲಿ ಓಡಾಡುತ್ತಿದೆ ಎಂಬ ಮಾಹಿತಿ ಸ್ಥಳೀಯರಿಂದ ಅರಣ್ಯ ಇಲಾಖೆಗೆ ಬರುತ್ತಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬೆಟ್ಟ ಪ್ರದೇಶದಲ್ಲಿ ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಿ ನಿರಂತರ ನಿಗಾ ವಹಿಸಿತ್ತು. ಇದೀಗ ಭಾನುವಾರ ಟೆಂಬಾ ಪ್ರದೇಶದಲ್ಲಿ ಅಳವಡಿಸಿದ್ದ ಕ್ಯಾಮೆರಾದಲ್ಲಿ ಹುಲಿಯ ಸ್ಪಷ್ಟ ಚಿತ್ರ ಸೆರೆಯಾಗಿದ್ದು, ಕಿಷ್ಕಿಂಧಾ ಬೆಟ್ಟಗಳಲ್ಲಿ ಹುಲಿ ಇರುವಿಕೆ ಅಧಿಕೃತವಾಗಿ ದೃಢಪಟ್ಟಿದೆ.

ಐದು ದಶಕಗಳ ಬಳಿಕ ಮತ್ತೆ ಹುಲಿಯ ಹೆಜ್ಜೆ!

news_1787551928_0_578.webp

 

ಕಿಷ್ಕಿಂಧಾ ಬೆಟ್ಟಗಳ ಅರಣ್ಯ ಪ್ರದೇಶದಲ್ಲಿ ಕೊನೆಯ ಬಾರಿ ಹುಲಿ ಕಾಣಿಸಿಕೊಂಡಿರುವ ದಾಖಲೆ 1970ರ ದಶಕದ್ದು ಎನ್ನಲಾಗಿದೆ. ಅಂದಿನಿಂದ ಇಂದಿನವರೆಗೆ ಹುಲಿ ಕಾಣಿಸಿಕೊಳ್ಳದಿದ್ದ ಈ ಪ್ರದೇಶದಲ್ಲಿ ಮತ್ತೆ ಹುಲಿ ಪತ್ತೆಯಾಗಿರುವುದು ವನ್ಯಜೀವಿ ಪ್ರಿಯರಲ್ಲಿ ವಿಶೇಷ ಆಸಕ್ತಿ ಮೂಡಿಸಿದೆ.

ಅರಣ್ಯ ತಜ್ಞರ ಪ್ರಕಾರ, ಹುಲಿ ಕಳೆದ ಕೆಲವು ತಿಂಗಳುಗಳಿಂದಲೇ ಈ ಭಾಗದಲ್ಲಿ ಸಂಚರಿಸುತ್ತಿರುವ ಸಾಧ್ಯತೆಯಿದೆ. ಆಂಧ್ರಪ್ರದೇಶದ ಶ್ರೀಶೈಲಂ ಅರಣ್ಯ ಪ್ರದೇಶದಿಂದ ವನ್ಯಜೀವಿ ಕಾರಿಡಾರ್ ಮೂಲಕ ಹುಲಿ ಕಿಷ್ಕಿಂಧಾ ಬೆಟ್ಟಗಳಿಗೆ ಬಂದಿರುವ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಹಂಪಿ ಸುತ್ತಮುತ್ತ ಹೈ ಅಲರ್ಟ್

ಹುಲಿ ಇರುವಿಕೆ ಖಚಿತವಾಗುತ್ತಿದ್ದಂತೆ ಹಂಪಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ. ಸಾಣಾಪುರ, ಬಸಾಪುರ, ಜಬ್ಬಲಗುಡ್ಡ, ಬೆಣಕಲ್, ಅಗೋಲಿ, ವೆಂಕಟಗಿ, ಹನುಮನಹಳ್ಳಿ ಹಾಗೂ ಜಂಗ್ಲಿರಂಗಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೈರನ್ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ವಿಶೇಷವಾಗಿ ರಾತ್ರಿ ವೇಳೆ ಮನೆಯ ಹೊರಗೆ ಮಲಗದಂತೆ ಗ್ರಾಮಸ್ಥರಿಗೆ ಸೂಚಿಸಲಾಗಿದೆ. ಕುರಿಗಾಹಿಗಳು ಮತ್ತು ಜಾನುವಾರು ಸಾಕಣೆದಾರರು ರಾತ್ರಿ ಸಮಯದಲ್ಲಿ ಅರಣ್ಯ ಪ್ರದೇಶದತ್ತ ತೆರಳದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಪ್ರವಾಸಿಗರಿಗೂ ಎಚ್ಚರಿಕೆ

ಹಂಪಿ ಹಾಗೂ ಕಿಷ್ಕಿಂಧಾ ಬೆಟ್ಟಗಳಿಗೆ ಆಗಮಿಸುವ ಪ್ರವಾಸಿಗರು ಅರಣ್ಯ ಪ್ರದೇಶದ ಒಳಭಾಗಕ್ಕೆ ತೆರಳದಂತೆ ಹಾಗೂ ಒಂಟಿಯಾಗಿ ಸಂಚರಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಹುಲಿ ಕಾಣಿಸಿಕೊಂಡರೆ ಅದರ ಸಮೀಪ ಹೋಗಲು ಅಥವಾ ಫೋಟೋ, ವಿಡಿಯೋ ತೆಗೆಯಲು ಪ್ರಯತ್ನಿಸದೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

ಹುಲಿಯ ಹೆಜ್ಜೆ ಹುಡುಕಲು ಹೆಚ್ಚುವರಿ ತಂಡ

ಹುಲಿಯ ಚಲನವಲನ ಕಂಡುಬಂದ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ಹೆಚ್ಚುವರಿ ಅರಣ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹುಲಿ ಯಾವ ದಿಕ್ಕಿನಲ್ಲಿ ಸಂಚರಿಸುತ್ತಿದೆ, ಅದರ ವಾಸಸ್ಥಳ ಯಾವುದು ಹಾಗೂ ಅದು ಬೇರೆ ಅರಣ್ಯ ಪ್ರದೇಶದಿಂದ ಬಂದಿದೆಯೇ ಎಂಬುದನ್ನು ಪತ್ತೆಹಚ್ಚಲು ಮತ್ತಷ್ಟು ಕ್ಯಾಮೆರಾ ಟ್ರ್ಯಾಪ್‌ಗಳನ್ನು ಅಳವಡಿಸಲಾಗಿದೆ.

ಐತಿಹಾಸಿಕ ಹಂಪಿಯ ನೆಲದಲ್ಲಿ ಐದು ದಶಕಗಳ ಬಳಿಕ ಮತ್ತೆ ಹುಲಿಯ ಹೆಜ್ಜೆ ಮೂಡಿರುವುದು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾದರೂ, ಸದ್ಯಕ್ಕೆ ಪ್ರವಾಸಿಗರು ಹಾಗೂ ಸ್ಥಳೀಯರು ಎಚ್ಚರಿಕೆಯಿಂದಿರುವುದು ಅತ್ಯಗತ್ಯ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಹಂಪಿ ಬಳಿ ಐದು ದಶಕಗಳ ಬಳಿಕ ಹುಲಿ ಪ್ರತ್ಯಕ್ಷ!43.80 ಲಕ್ಷ ಮತದಾರರಿಗೆ ಶೀಘ್ರದಲ್ಲೇ ಚುನಾವಣಾ ಆಯೋಗದ ನೋಟಿಸ್! ಅರ್ಧದಷ್ಟು ಭರ್ತಿಯಾದ ತುಂಗಭದ್ರಾ ಜಲಾಶಯ! 1 ಲಕ್ಷ ಕ್ಯುಸೆಕ್‌ಗೂ ಅಧಿಕ ಒಳಹರಿವುತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರ