LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

ಅದ್ಧೂರಿ ಜನ್ಮದಿನಾಚರಣೆ ಬೇಡ: ಶಾಸಕ ಭರತ್ ರೆಡ್ಡಿ

ಬಳ್ಳಾರಿ: ಪ್ರತಿವರ್ಷ ಜನ್ಮದಿನದಂದು 50ರಿಂದ 60 ಸಾವಿರ ಜನರಿಗೆ ಭೋಜನ ಏರ್ಪಡಿಸಿ ಸಂಭ್ರಮ ಹಂಚಿಕೊಳ್ಳುತ್ತಿದ್ದ ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಅವರು, ಈ ಬಾರಿ ತಮ್ಮ ಹುಟ್ಟುಹಬ್ಬದ ಆಚರಣೆಗೆ ವಿರಾಮ ಘೋಷಿಸಿದ್ದಾರೆ. ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯ ಉದ್ಘಾಟನೆ ಬಾಕಿ ಇರುವ ಹಿನ್ನೆಲೆಯಲ್ಲಿ, ಪ್ರತಿಮೆ ಅನಾವರಣಗೊಳ್ಳುವವರೆಗೆ ತಮ್ಮ ಜನ್ಮದಿನ ಸೇರಿದಂತೆ ಯಾವುದೇ ರೀತಿಯ ಸಂಭ್ರಮಾಚರಣೆ ನಡೆಸದಂತೆ ಮಿತ್ರರು ಹಾಗೂ ಕಾರ್ಯಕರ್ತರಲ್ಲಿ ಮನವಿ ಮಾಡಿದ್ದಾರೆ.ಅಕ್ಟೋಬರ್ 25ರಂದು ತಮ್ಮ ಜನ್ಮದಿನವಿದ್ದು, ಈ ಕುರಿತು ಭಾನುವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಮಹರ್ಷಿ ವಾಲ್ಮೀಕಿ ಅವರ ಪವಿತ್ರ ಪ್ರತಿಮೆ ಉದ್ಘಾಟನೆಯಾಗುವ ಮುನ್ನ ತಮ್ಮ ಹುಟ್ಟುಹಬ್ಬ ಆಚರಿಸುವುದು ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರತಿವರ್ಷ ಜನ್ಮದಿನದ ಅಂಗವಾಗಿ ಸಾವಿರಾರು ಜನರಿಗೆ ಭೋಜನದ ವ್ಯವಸ್ಥೆ ಮಾಡಿ ಸಂತೋಷ ಹಂಚಿಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಭೋಜನಕೂಟ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡುವಂತೆ ಅವರು ಕೋರಿದ್ದಾರೆ. ಪ್ರತಿಮೆ ಉದ್ಘಾಟನೆಯಾಗುವವರೆಗೆ ಶುಭಾಶಯ ಕೋರುವ ಕಾರ್ಯಕ್ರಮಗಳು ಅಥವಾ ತಮ್ಮ ಹೆಸರಿನಲ್ಲಿ ಯಾವುದೇ ಆಚರಣೆಗಳನ್ನು ಆಯೋಜಿಸದಂತೆಯೂ ಮನವಿ ಮಾಡಿದ್ದಾರೆ. ಪ್ರತಿಮೆ ಉದ್ಘಾಟನೆ ಬಳಿಕ ಕಾರ್ಯಕ್ರಮ ಸಾರ್ವಜನಿಕ ಕಾರ್ಯಗಳಿಗೆ ಆದ್ಯತೆ ನೀಡುವುದು ತಮ್ಮ ಆಶಯವಾಗಿದೆ. ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆ ಉದ್ಘಾಟನೆಯ ನಂತರ ಸೂಕ್ತ ಸಮಯದಲ್ಲಿ ಜನ್ಮದಿನದ ಕಾರ್ಯಕ್ರಮಗಳನ್ನು ಆಯೋಜಿಸುವುದು ಉತ್ತಮ ಎಂಬುದು ತಮ್ಮ ನಿಲುವು ಎಂದು ತಿಳಿಸಿದ್ದಾರೆ. ತಮ್ಮ ಮನವಿಯನ್ನು ಮಿತ್ರರು, ಅಭಿಮಾನಿಗಳು ಹಾಗೂ ಕಾರ್ಯಕರ್ತರು ಅರ್ಥಮಾಡಿಕೊಂಡು ಸಹಕರಿಸಬೇಕು ಎಂದು ಶಾಸಕ ನಾರಾ ಭರತ್ ರೆಡ್ಡಿ ಕೋರಿದ್ದಾರೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST