LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Entertainment News

ಮಡೆನೂರು ಮನು ಹೊಸ ಆಡಿಯೋ ಲೀಕ್ : ಶಿವರಾಜಕುಮಾರ್ ಬಗ್ಗೆ ಏನಂದ್ರು !

ಕಾಮಿಡಿ ಕಿಲಾಡಿಗಳು ಸೀಸನ್ 2  ವಿನ್ನರ್ ಮಡೆನೂರ್ ಮನು ಹೊಸ ಆಡಿಯೋ ರಿಲೀಸ್ !

ಎರಡು ದೋಣಿಯ ಮೇಲೆ ಕಾಲಿಡಲು ಹೋಗಿ ಕೆಳಗೆ ಬಿದ್ದ ಮಡೆನೂರು ಮನು, ಸದ್ಯ ಜೈಲಿಂದ ಹೊರ ಬಂದಿದ್ದಾರೆ. ಹೊರ ಬಂದ ನಂತರ ವೈರಲ್ ಆದ ಆಡಿಯೋ ನನ್ನದಲ್ಲ ಎಂದು ಹೇಳಿದ್ದಾರೆ. ಪಕ್ಕಾ ಪ್ಲಾನ್ ಮಾಡಿ ನನ್ನ ಮುಗಿಸಿದ್ರು ಎಂದು ಹೇಳಿದ್ದಾರೆ. ನಾನು ಜೈಲು ಪಾಲಾಗುವ ಮುನ್ನ ನನಗೆ ಕರೆ ಮಾಡಿದ್ದರು. ನೀನು ಅತ್ಯಾಚಾರದ ಪ್ರಕರಣದಲ್ಲಿ ತಪ್ಪಿಸಿಕೊಂಡು ಹೊರ ಬಂದರೆ..

ನಿನ್ನ ವಿರುದ್ಧ ನಾವು ಇನ್ನೊಂದು ಪ್ಲ್ಯಾನ್ ಮಾಡಿದ್ದೇವೆ ಎಂದರು. 50,000 ಖರ್ಚು ಮಾಡಿ ಆಡಿಯೋ ರೆಡಿ ಮಾಡಿದ್ದೇವೆ ಎಂದು ನನಗೆ ಧಮ್ಕಿ ಹಾಕಿದ್ದಾರೆ ಎಂದು ಹೇಳಿದ್ದಾರೆ. ಶಿವಣ್ಣ, ಧ್ರುವ ಸರ್ಜಾ, ದರ್ಶನ್‌ ಬಳಿ ಹೋಗಿ ಎಲ್ಲವನ್ನು ವಿವರಿಸಿವುದಾಗಿ ಹೇಳಿದ್ದಾರೆ. ಇದರ ನಡುವೆ ಮಡೆನೂರು ಮನು ಅವರದ್ದು ಎನ್ನಲಾದ ಹಳೆ ಆಡಿಯೋದ ಫುಲ್ ವರ್ಷನ್‌ನ ಸಂತ್ರಸ್ತ ಯುವತಿ ಬಹಿರಂಗಗೊಳಿಸಿದ್ದಾರೆ. ಅವನು ದುರಂಹಕಾರಿ ಎಂದು ಹೇಳಿದ್ದಾರೆ.

ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶಿವಣ್ಣ, ದರ್ಶನ್ ಮತ್ತು ಧ್ರುವಾ ಸರ್ಜಾ ಬಗ್ಗೆ ಮಡೆನೂರು ಮನು ಮಾತನಾಡಿರುವ ಸಂಪೂರ್ಣ ಆಡಿಯೋವನ್ನು ಹಂಚಿಕೊಂಡಿರುವ ಸಂತ್ರಸ್ತ ಯುವತಿ, ''ಬರೀ ಸುಳ್ಳು + ನಂಬಿಕೆ ದ್ರೋಹ + ಅಹಂಕಾರ + ದೌರ್ಜನ್ಯ = ಸತ್ಯನ ನಂಬಿರುವವಳಿಗೆ ದೇವರೇ ಕಾವಲು ಅಷ್ಟೇ ಎಂದು ಬರೆದುಕೊಂಡಿದ್ದಾರೆ.

ಮುಂದುವರೆದು ತುಂಬಾ ಜನ ಇವನ ಧ್ವನಿ ಅಲ್ಲ ಅಂತ ಅನ್ಕೊಳ್ತಿರುವವರು ಧ್ವನಿ ಪರೀಕ್ಷೆ ಮಾಡಿಸಿ FSL ಗೆ ಕಳುಹಿಸಿ, ಯಾವ ದಿನ, ಯಾವ ಟೈಮ್, ಎಲ್ಲಿ ಎಂದು ಪರೀಕ್ಷೆಯಾಗಲಿ, ಎಷ್ಟೋ ದಾಖಲೆಗಳನ್ನು ಸೋಷಿಯಲ್ ಮೀಡಿಯಾಗೆ ಬಿಟ್ಟಿಲ್ಲ ಅಂದ್ರೆ ಅದಕ್ಕೆ ಕಾರಣ ಅವನ ಹೊಲಸು ಮಾತುಗಳು. ಬಟ್ ಇದು ಅವನ ಮಾತುಗಳಲ್ಲ ಅನ್ನೋ ಸಂದೇಹ ಬಂದಿರೋದ್ರಿಂದ ಅದರ ಕಂಟಿನ್ಯೂಏಷನ್ ಬಿಟ್ಟಿದ್ದೀನಿ. ಹೆಚ್ಚು ಮಾಹಿತಿ ಇನ್ನೂ ಬೇಕು ಅಂದರೆ ಅದು ಪರೀಕ್ಷೆಯಾಗಲಿ ಗೊತ್ತಾಗುತ್ತೆ ಎಷ್ಟು ನಾಟಕಗಳನ್ನು ಆಡಿ ನನಗೆ ಮೋಸ ಮಾಡಿದ್ದಾನೆ ಎಂದು ಎಂದು ಸಂತ್ರಸ್ತ ಯುವತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.ಫುಲ್ ಆಡಿಯೋದಲ್ಲಿ ಏನಿದೆ.. ?
ಸಂತ್ರಸ್ತೆ ಹಂಚಿಕೊಂಡಿರುವ ಆಡಿಯೋದಲ್ಲಿ ಮಾತನಾಡಿರುವ ಮಡೆನೂರು ಮನು 'ನಾನು ಬೆಳಿಬೇಕು ಅಂತಿದ್ದೀನಿ ಎಂದು ಹೇಳಿದ್ದಾರೆ. ಆಗ ವ್ಯಕ್ತಿಯೊಬ್ಬರು ಬೆಳೀಬೇಕು ಅಂದರೆ ಬೆಳೀಬೇಕು ಯಾಕೆ ಸುಮ್ಮನೆ ಈ ತರ ಎಲ್ಲ ಮಾಡ್ಕೋಬೇಕು ಎನ್ನುತ್ತಾರೆ. ಇದಕ್ಕೆ ಮಡೆನೂರು ಮನು ಶಿವರಾಜ್ ಕುಮಾರ್ ಇವರೆಲ್ಲ ಸಾಯೋ ಅಷ್ಟರಲ್ಲಿ ನಾನು ನಿಂತ್ಕೋಬೇಕು ಎಂದಿದ್ದಾರೆ. ಇದಕ್ಕೆ ಕೆರಳುವ ಸಂತ್ರಸ್ತ ಯುವತಿ ಥೂ ಇನ್ನೊಬ್ಬರ ಸಾವಿನ ಮೇಲೆ ಸಾಧನೆ ಮಾಡಿ ಏನು ಕಟ್ಟಿಕೊಳ್ತೀಯಾ ಎಂದು ಪ್ರಶ್ನೆ ಮಾಡುತ್ತಾರೆ.

ಸಂತ್ರಸ್ತ ಯುವತಿಯ ಮಾತುಗಳಿಗೆ ಮಡೆನೂರು ಮನು ತನ್ನೆದುರು ಕುಳಿತ ವ್ಯಕ್ತಿಗೆ ಅವಳು ದುಡ್ಡಿಗೆ ಆಸೆ ಪಡೋಳಲ್ಲ. ನಾನು ಇಷ್ಟ ಪಟ್ಟರೆ ಕೋಟಿಗಟ್ಟಲೆ ಖರ್ಚು ಮಾಡುವ ವ್ಯಕ್ತಿ ಎನ್ನುತ್ತಾರೆ. ಆ ನಂತರ ಈ ಹಿಂದೆ ವೈರಲ್ ಆಗಿದ್ದ ಆಡಿಯೋದಲ್ಲಿ ಹೇಳಿದ್ದ ಮಾತುಗಳನ್ನು ಹೇಳುತ್ತಾರೆ.

ಶಿವರಾಜ್ ಕುಮಾರ್ ಇನ್ನೊಂದು ಆರು ವರ್ಷ, ಸತ್ತು ಹೋಗ್ತಾರೆ ಅಂತ ನಂಗೆ ಗೊತ್ತು. ಧ್ರುವ ಸರ್ಜಾ ಇನ್ನೊಂದೆಂಟು ವರ್ಷ. ದರ್ಶನ್ ಸತ್ತೋದ. ದರ್ಶನ್ ಸರ್‌ ಇನ್ನೊಂದು ಆರು ವರ್ಷ. ಕ್ರೇಜ್ ಇರುತ್ತೆ, ಸಿನಿಮಾ ಓಡಲ್ಲ. ಅವರು ಮೂರು ಜನರ ಮಧ್ಯೆ ಕಾಂಪಿಟೇಶನ್ ಕೊಡೋಕೆ ಬಂದಿರೋ ಗಂಡುಗಲಿ ನಾನು ಎಂದು ಹೇಳುತ್ತಾರೆ.

ಆ ನಂತರ ತಾನು ಮತ್ತೆ ಕುಡಿಯಲು ಶುರುಮಾಡಿದ್ದೇಕೆ ಎಂದು ಹೇಳುವ ಮಡೆನೂರು ಮನು ನಾನು ಜಿಮ್‌ ಮಾಡಿಕೊಂಡು ಇಷ್ಟೆಲ್ಲಾ ಮಾಡಿ, ನಿನ್ನೆಯಿಂದ ಕುಡಿಯೋಕೆ ಸ್ಟಾರ್ಟ್ ಮಾಡಿದ್ದೀನಿ. ಯಾಕೆ ಅಂತ ಕೇಳ್ತಿದ್ದಾರೆ? ಒಂದು ಹುಡುಗಿಗೆ ಅನ್ಯಾಯ ಮಾಡಿದ್ಧೀನಿ. ಮರೆತು ಬಿಡಬೇಕು, ಆಗ್ತಿಲ್ಲ. ಇನ್ನೂ 2-3 ಸಿನಿಮಾ ಹೀರೋ ಆಗ್ಬೇಕು. 50 ಸಿನಿಮಾಗೆ ಹೀರೋ ಆಗಬೇಕು ಅಂತ ಕನಸಿದೆ ಎಂದು ಹೇಳುತ್ತಾರೆ.

ಮುಂದುವರೆದು ಸಂತ್ರಸ್ತ ಯುವತಿಯ ಕುರಿತು ಮಾತನಾಡುವ ಮಡೆನೂರು ಮನು ಇವಳೇನು ದುಡ್ಡು ಕೇಳಿಲ್ಲ ರೀ. ಒಳ್ಳೆ ಪ್ರಾಣಿ ಇದು ಎಂದು ಹೇಳುತ್ತಾರೆ. ಆಗ ಸಂತ್ರಸ್ತ ಯುವತಿ ಅಣ್ಣಾ ಎದ್ದು ಹೋಗಣ್ಣ ಇವನದ್ದು ಇದ್ದಿದ್ದೇ ಕಥೆ ಎಂದು ಹೇಳುತ್ತಾರೆ.

ಆಗ ಮಡೆನೂರು ಮನು ಸಂತ್ರಸ್ತ ಯುವತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡಿದ್ದಾರೆ. ಸದ್ಯ ಸಂತ್ರಸ್ತೆ ಹಂಚಿಕೊಂಡ ಈ ಆಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮಡೆನೂರು ಮನು ವಿರುದ್ಧ ಮತ್ತೊಮ್ಮೆ ಆಕ್ರೋಶವೂ ವ್ಯಕ್ರವಾಗುತ್ತಿದೆ. ಮಡೆನೂರು ಮನು ಈ ವೈರಲ್ ಆಡಿಯೋಗೆ ಪ್ರತಿಕ್ರಿಯೆ ಕೊಡ್ತಾರಾ ಆ ಆಡಿಯೋ ನನ್ನದಲ್ಲ ಎಂದು ಮತ್ತೊಮ್ಮೆ ಹೇಳ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ