LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

ಕೈ ಕಾಲು ಅಂಗಗಳ ಜೋಡಣೆಯ ಶಿಬಿರ ಯಶಸ್ವಿ

ಬಳ್ಳಾರಿ: ಸ್ಥಳೀಯ ಸನ್ಮಾರ್ಗ ಗೆಳೆಯರ ಬಳಗದ ವತಿಯಿಂದ ನಾರಾಯಣ ಸೇವಾ ಸಂಸ್ಥಾನದ ಸಹಯೋಗದೊಂದಿಗೆ ನಗರದ ಸಿರುಗುಪ್ಪ ರಸ್ತೆಯ, ಹವಂಬಾವಿ ಪ್ರದೇಶದಲ್ಲಿರುವ ಕ್ಲಾಸಿಕ್ ಫಂಕ್ಷನ್ ಹಾಲ್ನಲ್ಲಿ ಇಂದು ಹಮ್ಮಿಕೊಂಡಿದ್ದ, ಉಚಿತ ಮಾಡ್ಯುಲರ್ ಕೃತಕ ಕೈ, ಕಾಲುಗಳ ಅಂಗಗಳ ವಿತರಣೆ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ಕಂಡು ಬಂದಿದ್ದು, ಶಿಬಿರವು ಯಶಸ್ವಿಯಾಗಿ ಜರುಗಿತು. ಕೃತಕ ಕೈ ಕಾಲುಗಳ ಜೋಡಣೆಯ ಉಚಿತ ಶಿಬಿರದಲ್ಲಿ 700ಕ್ಕೂ ಅಧಿಕ ಜನರು ಭಾಗಿಯಾಗಿದ್ದು, ಶಿಬಿರವು ಯಶಸ್ವಿಯಾಗಿ ನಡೆದು ಸಾರ್ಥಕ ಪಡೆದುಕೊಂಡಿತು ಎಂದು ಸಂಘಟಕರು ಹೇಳಿದ್ದಾರೆ. ಮಾಜಿ ಸಚಿವ ಬಿ.ಶ್ರೀರಾಮುಲು, ಮಾಜಿ ಶಾಸಕ ಜಿ.ಸೋಮಶೇಖರರೆಡ್ಡಿ, ಬಳ್ಳಾರಿ ಮೇಯರ್ ಪಿ.ಗಾದೆಪ್ಪ, ಮುಖಂಡರುಗಳಾದ ಎನ್.ಪ್ರತಾಪ್ರೆಡ್ಡಿ, ಕಾರ್ಪೋರೇಟರ್ಗಳಾದ ಎನ್.ಗೋವಿಂದರಾಜುಲು, ಗುಡಿಗಂಟಿ ಹನುಮಂತು, ಹನುಮಂತಪ್ಪ ಸೇರಿದಂತೆ ಇತರೆ ಪ್ರಮುಖರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸನ್ಮಾರ್ಗ ಗೆಳೆಯರ ಬಳಗದ ಸದಸ್ಯರು, ಪದಾಧಿಕಾರಿಗಳು, ಅಧಿಕಾರಿಗಳು, ಉದ್ಯಮಿಗಳು, ನಾರಾಯಣ ಸೇವಾ ಸಂಸ್ಥಾನದ ಪ್ರತಿನಿಧಿಗಳು ಆಗಮಿಸಿದ್ದರು. ಉಚಿತ ಮಾಡ್ಯೂಲರ್ ಕೃತಕ ಕೈ ಮತ್ತು ಕಾಲುಗಳ ಅಂಗಗಳ (ಮಾಡ್ಯುಲರ್ ಆರ್ಟಿಫಿಷಿಯಲ್ ಲಿಮ್ಸ್) ವಿತರಣೆಗೆ ನಿರೀಕ್ಷೆಗೂ ಮೀರಿ ಪ್ರತಿಕ್ರಿಯೆ ಕಂಡುಬಂದಿದ್ದು, ಏಳುನೂರು ಜನರು ಬಂದಿದ್ದಾರೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸುದ್ದಿಗಾರರಿಗೆ ತಿಳಿಸಲಾಯಿತು. ವಿಶೇಷ ಚೇತನ ಬಡವರಿಗೆ ಉಚಿತ ತಪಾಸಣೆ, ಕೃತಕ ಕೈಕಾಲುಗಳ ವಿತರಣೆ ಹಮ್ಮಿಕೊಂಡಿದ್ದು ಸನ್ಮಾರ್ಗ ಗೆಳೆಯರ ಬಳಗದ ಮಾನವೀಯ ಸೇವೆಯನ್ನು ಅನೇಕರು ಅಭಿನಂದಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ||ಸುಮನ್ ಡಿ ಪನ್ನೇಕರ್, ತೋರಣಗಲ್ಲು ಡಿಎಸ್ಪಿ ಪ್ರಸಾದ್ ಗೋಖಲೆ, ವಾಣಿಜ್ಯ ತೆರಿಗೆ ಅಧಿಕಾರಿ ವೆಂಕಟೇಶ್ ಮೂರ್ತಿ ಸೇರಿದಂತೆ ಇತರೆ ಪ್ರಮುಖರು ಕೂಡ ಶಿಬಿರ ನಡೆಯುವ ಸ್ಥಳಕ್ಕೆ ಆಗಮಿಸಿ ವೀಕ್ಷಿಸಿ ಕೃತಕ ಕೈ-ಕಾಲು ಜೋಡಣೆ ಕಾರ್ಯವನ್ನು ಅಭಿನಂದಿಸಿದರು. ಸನ್ಮಾರ್ಗ ಗೆಳೆಯ ಬಳಗದ ಎಚ್.ಲಕ್ಷಿ್ಮೀಕಾಂತರೆಡ್ಡಿ, ಬಿ.ಚಂದ್ರಶೇಖರ್ ಆಚಾರಿ, ಎಂ.ಜಗದೀಶ್ ಗೌಡ, ಎಸ್. ಹನುಮಂತರೆಡ್ಡಿ, ಉದ್ಯಮಿಗಳಾದ ರಾಮಿರೆಡ್ಡಿ, ಹರೀಶ್ಶೆಟ್ಟಿ ಒಳಗೊಂಡಂತೆ ಇತರೆ ಪ್ರಮುಖರು ಉಪಸ್ಥಿತರಿದ್ದರು. ಬೆಳಿಗ್ಗೆ 10 ಗಂಟೆಗೆ ಆರಂಭವಾದ ಶಿಬಿರವು ಸಂಜೆ 4 ಗಂಟೆವರೆಗೆ ನಡೆಯಿತು.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
‘ಪ್ರೈಡ್ ಆಫ್ ಕರ್ನಾಟಕ’ ಟೂರ್: ಗೋಲ್ಡನ್ ಚಾರಿಯಟ್ ಐಷಾರಾಮಿ ಪ್ರವಾಸಿ ರೈಲಿಗೆ ಮರು ಚಾಲನೆ; ಏನಿದರ ವಿಶೇಷತೆ?ಕೈ ಕಾಲು ಅಂಗಗಳ ಜೋಡಣೆಯ ಶಿಬಿರ ಯಶಸ್ವಿದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಿಎಂ ಡಿಕೆಶಿ ಹುನ್ನಾರ: ಹೆಚ್‌ಡಿಕೆ ಆರೋಪಯುನೆಸ್ಕೋ ತಂಡದಿಂದ ವಿಶ್ವ ಪಾರಂಪರಿಕ ಸ್ಮಾರಕಗಳ ಪರಿಶೀಲನೆಬಳ್ಳಾರಿಯಲ್ಲಿ ಆರ್‌ಎಸ್‌ಎಸ್ ಆಕರ್ಷಕ ಪಥ ಸಂಚಲನಭಾರತದ ರಾಜ್ಯಗಳಲ್ಲಿ ಆಚರಿಸಲಾಗುವ ವಿಭಿನ್ನ ರೀತಿಯ ದಸರಾ ಸಂಭ್ರಮದ ವಿಶೇಷತೆ ಹೇಗಿರುತ್ತೆ?ಮುರಿದು ಬಿದ್ದ ತಡೆಗೋಡೆ, ಹಾನಿಗೊಳಗಾದ ಕಬ್ಬಿಣದ ರೇಲಿಂಗ್‍ಗಳುನೂತನ ರಾಜ್ಯಪಾಲರಾಗಿ ಸುಧಾ ಯಾದವ್‌ ಅಧಿಕಾರ ಸ್ವೀಕಾರಪ್ರತಿ ಕುಟುಂಬಕ್ಕೆ ಒಂದೊಂದು ಸರ್ಕಾರಿ ಉದ್ಯೋಗ; ಹೆಚ್.ಡಿ.ಕುಮಾರಸ್ವಾಮಿ ಹೊಸ ಆಲೋಚನೆಬಳ್ಳಾರಿ: ಕುಡಿಯುವ ನೀರಿನ ಅಭಾವ ತಡೆಗೆ ಜಿಲ್ಲಾಡಳಿತ ಸನ್ನದ್ಧ; ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ