LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
Local News

ರಾಬಕೊವಿ ಹಾಲು ಒಕ್ಕೂಟದಲ್ಲಿ 16.5 ಕೋಟಿ ಅಕ್ರಮದ ಆರೋಪ, ದೂರು ದಾಖಲು

ಬಳ್ಳಾರಿ: ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ವಿಜಯನಗರ ಜಿಲ್ಲೆಗಳ ಹಾಲು ಒಕ್ಕೂಟದಲ್ಲಿ (ಕೆಎಂಎಫ್) ಮೃತಪಟ್ಟ ಜಾನುವಾರುಗಳ ವಿಮಾ ಪರಿಹಾರ ಹಾಗೂ ರೈತ ಕಲ್ಯಾಣ ಟ್ರಸ್ಟ್‍ನ ಹಣ ಸೇರಿದಂತೆ ಅಂದಾಜು 16.50 ಕೋಟಿ ರೂ.ಗಳ ಹಣದ ದುರುಪಯೋಗ ನಡೆದಿರುವ ಬಗ್ಗೆ ಸಮಗ್ರ, ಕೂಲಂಕುಷ ತನಿಖೆ ನಡೆಸುವಂತೆ ಒಕ್ಕೂಟದ ಮಾಜಿ ನಾಮ ನಿರ್ದೇಶಿತ ನಿರ್ದೇಶಕ ಎನ್.ಧನುಂಜಯ ಹಮಾಲ್ ಒತ್ತಾಯಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿಂದು ಪೂರ್ವಾಹ್ನ ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಅಧ್ಯಕ್ಷ ಕರೂರು  ಮಾಧವರೆಡ್ಡಿ ಮತ್ತಿತರರೊಂದಿಗೆ ಮಾತನಾಡಿದ ಅವರು,2018ರಿಂದ 2026 ವರೆಗಿನ ಅವಧಿಯಲ್ಲಿ, ಕೆಎಂಎಫ್ ಡೈರಿಗೆ (ಒಕ್ಕೂಟಕ್ಕೆ) ಹಾಲು ಪೂರೈಸುವ ರೈತರ ಜಾನುವಾರುಗಳಿಗೆ, ಖಾಸಗಿ ವಿಮಾ ಕಂಪನಿಗಳ ಮೂಲಕ ವಿಮೆ ಮಾಡಿಸಲಾಗುತ್ತಿತ್ತು. ವಿಮೆಯ ಪ್ರೀಮಿಯಂ ಮೊತ್ತದಲ್ಲಿ ಶೇ.60ರಷ್ಟನ್ನು ಒಕ್ಕೂಟ ಹಾಗೂ ಶೇ.40ರಷ್ಟು ಹಣವನ್ನು ರೈತರು ಪಾವತಿಸುತ್ತಿದ್ದರು. ಒಂದು ವೇಳೆ ಜಾನುವಾರು ಮೃತಪಟ್ಟಲ್ಲಿ, ವಿಮಾ ಕಂಪನಿಯಿಂದ ನೀಡುವ ಪರಿಹಾರದ ಹಣವನ್ನು, ಒಕ್ಕೂಟವು ಸಂಬಂಧಿಸಿದ ಜಾನುವಾರುಗಳ ಮಾಲೀಕರಿಗೆ (ರೈತರಿಗೆ) ನೀಡಬೇಕಾಗಿತ್ತು.ಆದರೆ, ಹಾಗಾಗದೇ ಒಕ್ಕೂಟದ ಕೆಲ ಅಧಿಕಾರಿಗಳು, ನೌಕರರು ಸೇರಿಕೊಂಡು ರೈತರಿಗೆ ಮತ್ತು ಒಕ್ಕೂಟಕ್ಕೆ(ಸರ್ಕಾರಕ್ಕೆ) ಮೋಸ ಮಾಡುವ, ಹಾಗೂ ಅಕ್ರಮವಾಗಿ ಹಣ ಪಡೆಯುವ ಉದ್ದೇಶದಿಂದ 2018ರಿಂದ 2026ರ ಅವಧಿಯಲ್ಲಿ ಸತ್ತ ಜಾನುವಾರುಗಳಿಗೆ, ವಿಮಾ ಕಂಪನಿಗಳು ನೀಡಿದ ಹಣ ಹಾಗೂ ಕೆಎಂಎಫ್ ಬಳ್ಳಾರಿಯ ರೈತ ಕಲ್ಯಾಣ ಟ್ರಸ್ಟ್‍ನ ಹಣ ಸೇರಿದಂತೆ ಅಂದಾಜು 16.5 ಕೋಟಿ ರೂ.ಗಳ ಹಣವನ್ನು ರೈತರಿಗೆ ಪಾವತಿಸದೇ, ಇತರೆ ವ್ಯಕ್ತಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುವ ಅನುಮಾನವಿದೆ ಎಂದು ಆರೋಪಿಸಿದರು.

ಮೊನ್ನೆ ತಾನೇ ಈ ಬಗ್ಗೆ ನಗರದ ಬ್ರೂಸ್‍ಪೇಟೆ ಪೊಲೀಸ್‍ಠಾಣೆಗೆ ದೂರು ನೀಡಿದ್ದೇನೆ. ಒಕ್ಕೂಟದ ನಿವೃತ್ತ ಡಿಪ್ಯೂಟಿ ಮೆನೇಜರ್ ಹೆಚ್.ಮರುಳಸಿದ್ದಪ್ಪ, ವ್ಯವಸ್ಥಾಪಕ ನಿರ್ದೇಶಕ ಎಸ್.ಸುದರ್ಶನ್‍ರೆಡ್ಡಿ, ಉಪವ್ಯವಸ್ಥಾಪಕ ವೆಂಕಟೇಶ್ ಜವಳಿ, ಪಶುವೈದ್ಯಾಧಿಕಾರಿ ಶಂಭುಕುಮಾರ್, ಉಪವ್ಯವಸ್ಥಾಪಕ ಹನುಮಂತಗೌಡ, ಲೆಕ್ಕ ಸಹಾಯಕಿ ಉಮಾಮಹೇಶ್ವರಿ ಅವರ ಪಾತ್ರವಿರುವ ಶಂಕೆ ಇದ್ದು, ಈ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ದೂರು ನೀಡಿರುವುದಾಗಿ ಧನುಂಜಯ ಹಮಾಲ್ ವಿವರಿಸಿದರು.

ಬಳ್ಳಾರಿ ಕೆಎಂಎಫ್‍ನ ಈ ಅಧಿಕಾರಿ, ನೌಕರರು ತಮಗೆ ಪರಿಚಯವಿರುವ,ಅನುಕೂಲವಾಗಿರುವ ಕೆಲವೊಂದು ವ್ಯಕ್ತಿಗಳÀ ಖಾತೆಗಳಿಗೆ ಹಣ ವರ್ಗಾಯಿಸಿದ್ದಾರೆ.ಆನಂತರ ಸದರಿ ಹಣವನ್ನು ತಮ್ಮ ಲಾಭಕ್ಕೆ ಪಡೆದಿರುವ ಶಂಕೆ ಇದ್ದು, ತನ್ಮೂಲಕ ರೈತರಿಗೆ ಹಾಗೂ ಒಕ್ಕೂಟಕ್ಕೆ ನಷ್ಟ ಉಂಟು ಮಾಡಿ, ವಂಚನೆಗೈಯಲಾಗಿದೆ, ಹಣ ದುರುಪಯೋಗ ಮಾಡಲಾಗಿದೆ ಎಂದು ಆರೋಪಿಸಿದರು.

ಆದುದರಿಂದ ಈ ಎಲ್ಲಾ ಆರೋಪಗಳ ಬಗ್ಗೆ, ಮೃತಪಟ್ಟ ಜಾನುವಾರುಗಳ ಸಂಖ್ಯೆ ಹಾಗೂ ವಿಮಾ ಪರಿಹಾರ ವಿತರಣೆಗೆ ಸಂಬಂಧಿಸಿದ ದಾಖಲೆಗಳಲ್ಲಿ ವ್ಯತ್ಯಾಸಗಳಿರುವ ಸಾಧ್ಯತೆಗಳಿವೆ ಎಂದು ಅನುಮಾನ ವ್ಯಕ್ತಪಡಿಸಿದರಲ್ಲದೇ, ಸಮಗ್ರ ತನಿಖೆ ನಡೆಸುವಂತೆ, ದಾಖಲಾತಿಗಳ ಕೂಲಂಕುಷ ಪರಿಶೀಲನೆ,ಲೆಕ್ಕ ಪರಿಶೋಧನೆ ನಡೆಸಬೇಕು ಎಂದು ಧನುಂಜಯ ಹಮಾಲ್ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕರೂರು ಮಾಧವರೆಡ್ಡಿ ಮಾತನಾಡಿ, ಈ ಬಗ್ಗೆ ಕ್ರಮಕೈಗೊಳ್ಳದೇ ಹೋದಲ್ಲಿ ಹಾಲು ಉತ್ಪಾದಕ ರೈತರೊಂದಿಗೆ ಸೇರಿ ಕೆಎಂಎಫ್ ಮುಂದೆ ಧರಣಿ, ಪ್ರತಿಭಟನೆ ನಡೆಸಲಾಗುತ್ತದೆ, ನಾವು ಈ ಆರೋಪದ ವಿರುದ್ಧ ರಾಜ್ಯ ಸರ್ಕಾರ,  ಲೋಕಾಯುಕ್ತ ಅಧಿಕಾರಿಗಳ  ಜೊತೆಗೂ ಮಾತನಾಡುತ್ತೇವೆ.  ಈ ಹಿಂದೆ ಈ ವಿಷಯದ ಬಗ್ಗೆ ಧನುಂಜಯ ಹಮಾಲ್ ಅವರು ಲೋಕಾಯುಕ್ತರ ಗಮನಕ್ಕೆ ತಂದಿದ್ದರೆಂದೂ, ಆದರೂ ಯಾವುದೇ ಕ್ರಮ ಕೈಗೊಳ್ಳದಿರುವುದು ಬೇಸರ ಮೂಡಿಸಿದೆ ಎಂದರು.

ಈ ಸಂದರ್ಭದಲ್ಲಿ ಸದಾಶಿವರೆಡ್ಡಿ, ಬಸವನಗೌಡ, ಉಮಾಪತಿ, ಪ್ರಭಾಕರರೆಡ್ಡಿ, ತಿಮ್ಮಾರೆಡ್ಡಿ, ಬಸವರಾಜ್‍ಸ್ವಾಮಿ, ರಾಮುಗೌಡ ಇನ್ನಿತರರು ಉಪಸ್ಥಿತರಿದ್ದರು.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಕಂಬಳ, ತುಳುನಾಡಿನ ಟ್ಯಾಬ್ಲೋ ಈ ಬಾರಿಯ ಮೈಸೂರು ದಸರಾದ ಭಾಗವಾಗಿವೆ: ಸಿಎಂ ಡಿ ಕೆ ಶಿವಕುಮಾರ್ಸಿದ್ದರಾಮಯ್ಯ ಪದಚ್ಯುತಿಗೆ ಡಿಕೆಶಿ, ರಾಕೇಶ್ ಶೆಟ್ಟಿ ಸ್ಟಿಂಗ್ ಸಂಚು: ಹೆಚ್.ಡಿ. ಕುಮಾರಸ್ವಾಮಿ ಅವರ ಗಂಭೀರ ಆರೋಪರಾಜ್ಯದ 226 ತಾಲ್ಲೂಕುಗಳು ಬರಪೀಡಿತ; ₹60 ಸಾವಿರ ಕೋಟಿಗೂ ಅಧಿಕ ನಷ್ಟದ ಅಂದಾಜು : ಡಾ. ಜಿ. ಪರಮೇಶ್ವರ್ರಾಬಕೊವಿ ಹಾಲು ಒಕ್ಕೂಟದಲ್ಲಿ 16.5 ಕೋಟಿ ಅಕ್ರಮದ ಆರೋಪ, ದೂರು ದಾಖಲುಜಂತರ್ ಮಂತರ್ ಬಳಿ ಹೈಡ್ರಾಮಾ: ಬ್ಯಾರಿಕೇಡ್ ಹಾರಿ ಒಳನುಗ್ಗಿದ ಸಿಜೆಪಿ ನಾಯಕರು ಪೊಲೀಸ್ ವಶಕ್ಕೆಕಬ್ಬಿಗೆ ಎಂಎಸ್‌ಪಿ ಆಗ್ರಹಿಸಿ ರಾಜ್ಯಾದ್ಯಂತ ಹೆದ್ದಾರಿ ತಡೆ ಹೋರಾಟಸ್ಟಿಂಗ್ ಆಪರೇಷನ್ ಬಾಂಬ್, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ11 ಜಿಲ್ಲೆಗಳಲ್ಲಿ 4 ದಿನ ವ್ಯಾಪಕ ಮಳೆ ನಿರೀಕ್ಷೆಶಿವಮೊಗ್ಗ ದಸರಾ ಉತ್ಸವಕ್ಕೆ ನಟ ಶ್ರೀನಾಥ್ ಚಾಲನೆಅದ್ಧೂರಿ ಜನ್ಮದಿನಾಚರಣೆ ಬೇಡ: ಶಾಸಕ ಭರತ್ ರೆಡ್ಡಿ