LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
State News

ಮೇ ರಂದು 20 ಹೊಸಪೇಟೆಯ ಸಾಧನಾ ಸಮಾವೇಶದ ಸಿದ್ಧತೆಯನ್ನು ಡಿಸಿಎಂ ಪರಿಶೀಲನೆ

ವಿಜಯನಗರ: ಶಾಸಕ ಕೊತ್ತೂರು ಮಂಜುನಾಥ ಏನು ಮಾತಾಡಿದ್ದಾರೆ ಗೊತ್ತಿಲ್ಲ, ಅದರ ಬಗ್ಗೆ ನಾನು ಪ್ರತಿಕ್ರಿಯಿಸಲ್ಲ. ಏನೆಂದು ತಿಳಿದುಕೊಂಡು ಮಾತನಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಹೊಸಪೇಟೆಯಲ್ಲಿ ಮೇ.20 ರಂದು ನಡೆಯುವ ಸರಕಾರದ ಎರಡು ವರ್ಷದ ಸಾಧನೆ ಸಂಭ್ರಮದ ಪೂರ್ವ ಸಿದ್ದತೆ ಪರಿಶೀಲನೆ ನಡೆಸಿ ಸುದ್ದಿಗೋಷ್ಟೀಯಲ್ಲಿ ಮಾತನಾಡಿ 2023 ಮೇ 13ರಂದು ಒಂದು ದೊಡ್ಡ ಸಂದೇಶ ಕೊಟ್ಟಿದ್ರು. ಕಾಂಗ್ರೆಸ್ ಮೇಲೆ ವಿಶ್ವಾಸ ನಂಬಿಕೆ ಇಟ್ಟು 136 ಸೀಟ್ ಗೆಲ್ಲಿಸಿ ಅಧಿಕಾರಕ್ಕೆ ತಂದ್ರು. ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ರೂ ಡಬಲ್ ಇಂಜಿನ್ ಸರ್ಕಾರಕ್ಕೆ ಅವಕಾಶ ಕೊಡದೇ ಕಾಂಗ್ರೆಸ್ ಗೆಲ್ಲಿಸಿದ್ರು, ಎರಡು ವರ್ಷದ ಸಂಭ್ರಮ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ. ಅದಕ್ಕಾಗಿ ವಿಜಯನಗರ ಆಯ್ಕೆ ಮಾಡಿಕೊಂಡು, ಹೆಚ್ಚಿಗೆ ಶಕ್ತಿ ಕೊಡಲು ಇಲ್ಲಿಂದ ಕಾರ್ಯಕ್ರಮ ಆರಂಭ ಮಾಡಿದ್ದೇವೆ, ಈ ಸಂಭ್ರಮವನ್ನ ವಿಜಯನಗರದಿಂದ ಮಾಡಲು ತೀರ್ಮಾನ ಮಾಡಿದ್ದೇವೆ. ಅದಕ್ಕಾಗಿ 20ರಂದು ಕಾರ್ಯಕ್ರಮ ಮಾಡುತ್ತಿದ್ದೇವೆ. ತಾಂಡಾ, ಹಟ್ಟಿ, ದೊಡ್ಡಿಗಳು ಸೇರಿದಂತೆ ಕೆಲವರಿಗೆ ಪಟ್ಟ ಸಿಕ್ಕಿಲ್ಲ. ಬಿಜೆಪಿ ಸರ್ಕಾರ ಎಲ್ಲರಿಗು ಕೊಡಲು ವಿಫಲವಾಗಿತ್ತು. ಹೀಗಾಗಿ ಒಂದು ಲಕ್ಷ ಪಟ್ಟ ಕೊಡಲು ಸಿದ್ದತೆ ಮಾಡಿಕೊಂಡಿದ್ದೇವೆ. 50 ಸಾವಿರ ಫಲಾನುಭವಿಗಳನ್ನ ಕರೆಸ್ತಿದ್ದೇವೆ. ಉಳಿದಂತೆ ನಮ್ಮ ಕಾರ್ಯಕರ್ತರು ಬರಲಿದ್ದಾರೆ. ಸಿಎಂ ಕೂಡಾ ಇಂದು ಬಂದು ವೀಕ್ಷಣೆ ಮಾಡಲಿದ್ದಾರೆ ಎಂದರು.

ಪಕ್ಷ ಹಾಗೂ ಸರ್ಕಾರ ಒಟ್ಟಿಗೆ ಸೇರಿ ಕಾರ್ಯಕ್ರಮ ಮಾಡುತ್ತಿದ್ದೇವೆ ಇಲ್ಲಿಂದ ಇಡೀ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಸಂದೇಶ ಕೊಡುತ್ತೇವೆ, ಒಂದು ಲಕ್ಷ ಜನರಿಗೆ ಪಟ್ಟಾ ಕೊಡೋದು ತೀರ್ಮಾನ ಮಾಡಿದ್ದೇವೆ. ನವಿಲೆ ಡ್ಯಾಂ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾವನೆ ಮಾಡಿದ್ದೇವೆ. ಈಗಾಗಲೇ ನಮ್ಮ ಟೆಕ್ನಿಕಲ್ ಟೀಂ ಒಂದು ಪ್ರಸ್ತಾವನೆ ಕೊಟ್ಟಿದ್ದಾರೆ. ಆಂದ್ರ, ತೆಲಂಗಾಣ ಸಿಎಂಗೆ ಈಗಾಗಲೇ ನಾನು ಮಾತಾಡಿದ್ದೇನೆ. ಹೂಳು ಎತ್ತಲು ಪ್ರೋತ್ಸಹ ಕೊಡುತ್ತಿಲ್ಲ. ಅದಕ್ಕಾಗಿ ನವಲಿ ಅಥವಾ ಇನ್ನೊಂದು ಮಾಡೋದಕ್ಕೆ ಪ್ಲಾನ್ ಮಾಡ್ತಿದ್ದೇವೆ ಎಂದ ಡಿಕೆಶಿ ಹೇಳಿದರು. ಗ್ರೆಟರ್ ಬೆಂಗಳೂರು ಅಥಾರಟಿ ಮಾಡಿದ್ದೇವೆ. ಬೆಂಗಳೂರು ಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ