LIVE TV LocalCrimeStateNationalInternationalPoliticsBusinessEducationEntertainmentSportsFeatureBeauty
State News

ಐಐಟಿ ಗೆ ಆಯ್ಕೆ : ಸೃಜನ್ ಅಸುಂಡಿಗೆ ಸನ್ಮಾನ

ಹುಬ್ಬಳ್ಳಿ : ನ್ಯೂಸ್ 18 ಕನ್ನಡ ಹಿರಿಯ ವರದಿಗಾರ ಶಿವರಾಮ ಅಸುಂಡಿ ಪುತ್ರ ಸೃಜನ್ ಅಸುಂಡಿ ಐಐಟಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಎಲೆಕ್ಟ್ರಾನಿಕ್ ಮೀಡಿಯಾ ಜರ್ನಲಿಸ್ಟ್ಸ್ ಅಸೋಸಿಯೇಷನ್ ವತಿಯಿಂದ ಸನ್ಮಾನಿಸಲಾಯಿತು. ಐಐಟಿ ಜೋಧಪುರದ ಏರೋಸ್ಪೇಸ್ ವಿಭಾಗಕ್ಕೆ ಸೃಜನ್ ಆಯ್ಕೆಯಾಗಿದ್ದು, ಆತನಿಗೆ ಮತ್ತು ಪೋಷಕರಿಗೆ ಸಂಘದ ಕಚೇರಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ್ ನೂಲ್ವಿ, ಉಪಾಧ್ಯಕ್ಷರಾದ ಗುರುರಾಜ ಹೂಗಾರ, ಕಲ್ಮೇಶ ಮಂಡ್ಯಾಳ, ಕಾರ್ಯದರ್ಶಿಗಳಾದ ಯಲ್ಲಪ್ಪ ಸೋಲಾರಗೊಪ್ಪ, ಸಂತೋಷ ಅರಳಿ ಸನ್ಮಾನಿಸಿದರು.

ಈ ವೇಳೆ ಮಾತನಾಡಿದ ಪ್ರಕಾಶ್ ನೂಲ್ವಿ, ಐಐಟಿ ಅನ್ನೋದು ಅತ್ಯುನ್ನತವಾದ ಸಂಸ್ಥೆ. ಸತತ ಪರಿಶ್ರಮದ ಫಲವಾಗಿ ಸೃಜನ್ ಐಐಟಿ ಗೆ ಆಯ್ಕೆಯಾಗಿದ್ದಾನೆ. ಏರೋಸ್ಪೇಷ್ ಮಾಡಿದವರಿಗೆ ಇಸ್ರೋ ಸೇರಿ ಬಾಹ್ಯಾಕಾಶ ಸಂಸ್ಥೆಗಳಲ್ಲಿ ಮತ್ತು ಖಾಸಿಯಾಗಿಯೂ ವಿಪುಲ ಅವಕಾಶಗಳಿವೆ. ಸೃಜನ್ ದೊಡ್ಡ ಮಟ್ಟದಲ್ಲಿ ಬೆಳೆದು ಕೀರ್ತಿ ತರಲಿ ಎಂದರು. ಇದೇ ವೇಳೆ ಮಾತನಾಡಿದ ಗುರುರಾಜ ಹೂಗಾರ, ಪತ್ರಕರ್ತರ ಮಕ್ಕಳು ಎತ್ತರೆತ್ತರಕ್ಕೆ ಬೆಳೆಯಬೇಕು. ಸೃಜನ್ ತನ್ನ ಪ್ರತಿಭೆ ಮೂಲಕ ಐಐಟಿಗೆ ಆಯ್ಕೆಯಾಗಿದ್ದಾನೆ. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದರು.

ಈ ಸಂದರ್ಭದಲ್ಲಿ ಪತ್ರಕರ್ತರಾದ ಸಂಜಯ್ ಚಿಕ್ಕಮಠ, ಪ್ರಕಾಶ ಹಿರೇಮಠ, ವಿನೋದ ಇಚ್ಛಂಗಿ, ಶಿವಾಜಿ ಲಾತೂರಕರ, ಈಶ್ವರ ಮನಗುಂಡಿ, ಆನಂದ ಪತ್ತಾರ, ಪ್ರಕಾಶ್ ಮುಳ್ಳೋಳ್ಳಿ, ಪಾಂಡುರಂಗ ಉಪ್ಪಾರ ಮತ್ತಿತರರು ಉಪಸ್ಥಿತರಿದ್ದರು.

Author
Kannada Nadu News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳ: ಒಂದೇ ದಿನದಲ್ಲಿ 4 ಟಿಎಂಸಿ ನೀರು ಸೇರ್ಪಡೆರಾಜಕೀಯಕ್ಕಿಂತ ರಾಜ್ಯದ ಹಿತವೇ ಮೊದಲ ಆದ್ಯತೆ: ಕಾವೇರಿ ಹೋರಾಟದಲ್ಲಿ ಒಂದಾದ ಸರ್ವಪಕ್ಷಗಳು, ಡಿಕೆಶಿ ಸಂದೇಶಬಳ್ಳಾರಿಗೆ ಒಲಿದ ಮಂತ್ರಿಗಿರಿ: ಸಂಪುಟ ವಿಸ್ತರಣೆಯಲ್ಲಿ ಬಿ. ನಾಗೇಂದ್ರ ರೀ-ಎಂಟ್ರಿ!ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಶರಣ್ ಸಿಂಗ್‌ಗೆ ರಿಲೀಫ್ಇಂದು ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಮಂತ್ರಿ ಸ್ಥಾನ ಭಾಗ್ಯ ಯಾರಿಗೆ ಉಂಟು.. ಯಾರಿಗೆ ಇಲ್ಲ..!ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿ ಸಾವು: ಎಸ್‌ಪಿ ಜಾಹ್ನವಿ ಭೇಟಿ, ತನಿಖೆ ಆರಂಭಕತ್ತೆಬೆನ್ನೂರು ಬಳಿ ಬೋನಿಗೆ ಬಿದ್ದ ಚಿರತೆ; ದರೋಜಿ ಅರಣ್ಯಕ್ಕೆ ಸ್ಥಳಾಂತರಆಗಸ್ಟ್ 8ಕ್ಕೆ ‘ಟಾಕ್ಸಿಕ್’ ಟ್ರೇಲರ್; ಖಡಕ್ ಪೋಸ್ಟರ್‌ನಿಂದಲೇ ಹೈಪ್ ಹೆಚ್ಚಿಸಿದ ಯಶ್ಎಚ್ಚರ! ವಾಟ್ಸಾಪ್‌ಗೆ ಬರುತ್ತಿದೆ ‘ನಕಲಿ ಇನ್‌ಕಮ್ ಟ್ಯಾಕ್ಸ್ ನೋಟಿಸ್’; ಒಂದೇ ಕ್ಲಿಕ್‌ಗೆ ಖಾತೆ ಖಾಲಿಯಾಗಬಹುದುಇಂದು ಮೋದಿ ಮೈಸೂರಿಗೆ ! ವಿವೇಕ ಸ್ಮಾರಕ ಲೋಕಾರ್ಪಣೆ