ರಾಯಚೂರು

ಎನ್ ಆರ್ ಬಿ ಸಿ 5 ಎ ಯೋಜನೆ ಜಾರಿಗೊಳಿಸಿ

ಮಸ್ಕಿ,ಫೆ,23 : ಪಾಮನಕಲ್ಲೂರು ಶಾಖಾ ಕಾಲುವೆ ಎನ್ ಆರ್ ಬಿಸಿ 5ಎ ಕಾಲುವೆ ಯೋಜನೆ ಜಾರಿಗೊಳಿಸಲು ಪ್ರಸಕ್ತ ರಾಜ್ಯ ಬಜೆಟ್ ನಲ್ಲಿ ಐದು ನೂರು ಕೋಟಿ ರೂಪಾಯಿ ಅನುದಾನ ನೀಡುವಂತೆ ಮತ್ತು ರೈತರ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಮತ್ತು ಅವೈಜ್ಞಾನಿಕವಾಗಿ, ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ರಾಜ್ಯ ಸರಕಾರ ಮುಂದಾಗಿದ್ದು ಕೂಡಲೇ ಈ ಯೋಜನೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕರ್ನಾಟಕ ನೀರಾವರಿ ಸಂಘ(ರಿ) ಎನ್ ಆರ್ ಬಿ ಸಿ5 ಎ …

ಎನ್ ಆರ್ ಬಿ ಸಿ 5 ಎ ಯೋಜನೆ ಜಾರಿಗೊಳಿಸಿ Read More »

ನಿಧನ ವಾರ್ತೆ

ಕವಿತಾಳ ,ಫೆ,20 : ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿ ದುರುಗಮ್ಮ ಮ್ಯಾಗಳಮನಿ ಕವಿತಾಳ ವಯಸ್ಸು – 94 ಇಂದು ಬೆಳಿಗ್ಗಿನ ಜಾವ ಆರು ಘಂಟೆಯ ಸುಮಾರಿಗೆ ವಯೋ ಸಹಜತೆಯಿಂದ ಮೃತ ಪಟ್ಟಿರುತ್ತಾರೆ. ಇವರಿಗೆ ಒಬ್ಬ ತಂಗಿ, ಒಬ್ಬ ಮಗ, ನಾಲ್ಕು ಜನ ಹೆಣ್ಣು ಮಕ್ಕಳು, 30 ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಹೊಂದಿದ್ದರು. ಇವರ ಅಂತ್ಯ ಕ್ರಿಯೆಯೂ ಇಂದು ಸಂಜೆ ಪಟ್ಟಣದ ರುದ್ರ ಭೂಮಿಯಲ್ಲಿ ನಡೆಯಲಿದೆ.

ಬಿಆರ್ಸಿಯಿಂದ ಹಾಗೂ ಬಿಸಿಯೂಟದ ಅಧಿಕಾರಿಗಳಿಂದ ದಿಢೀರ್ ಬೇಟಿ ಪರಿಶೀಲನೆ

ಮಾನ್ವಿ,14 : ತಾಲ್ಲೂಕಿನ ಪೋತ್ನಾಳ್ ವಲಯದಲ್ಲಿ ಬರುವ ಜನತಾ ಕಾಲೋನಿಯ ಶಾಲೆಗೆ ಬಿಆರ್ಸಿಯಿಂದ ಹಾಗೂ ಬಿಸಿಯೂಟದ ತಾಲ್ಲೂಕಿನ ಅಧಿಕಾರಿಗಳಿಂದ ದಿಢೀರ್ ಬೇಟಿ ಕೊಟ್ಟು ಶಾಲೆಯಲ್ಲಿನ ವಸ್ಥು ಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿ ಎಲ್ಲಾ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಶಿಕ್ಷಕರಾದವರು ಕೊಡಬೇಕು, ಹಾಗೂ ಶಾಲೆಗೆ ಎಲ್ಲರೂ ಸರಿಯಾದ ಸಮಯಕ್ಕೆ ಬರಬೇಕು.ಮತ್ತು ಯಾವುದೇ ಕಾರಣಕ್ಕೂ ಮಕ್ಕಳ ಶಿಕ್ಷಣ ಕುಂಠಿತವಾಗಬಾರದು.ಹಾಗೂ ಬಿಸಿಯೂಟದ ದಾಖಲಾತಿಗಳನ್ನು ಕಡ್ಡಾಯವಾಗಿ ಬರೆದಿಡಬೇಕು.ಹಾಗೂ ನೀವುಗಳ ಮಾಡುವ ಕೆಲಸ ಇನ್ನೋಬ್ಬರಿಗೆ ಮಾದರಿಯಾಗಬೇಕು.

ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಗುರು ವಿಶ್ವಕರ್ಮ ನೇಮಕ

ಮಸ್ಕಿ,9 :ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಗುರು ವಿಶ್ವಕರ್ಮ ಮೂರನೇ ಬಾರಿಗೆ ನೇಮಕಗೊಂಡಿದ್ದಾರೆ.   ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಶ್ರೀ ಕಳಿಕಾದೇವಿ ಸಭಾ ಭವನದಲ್ಲಿ ಇತ್ತೀಚೆಗೆ ಶ್ರೀ ಶೈಲಪ್ಪ ತಾತಾನವರು ಹಾಗೂ ಸಮಾಜದ ಬಾಂಧವರ ಸಮ್ಮುಖದಲ್ಲಿ ನಡೆದ‌‌ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಹಿಂದೆ ರಚನೆಗೊಂಡಿದ್ದ ಜಿಲ್ಲಾ ಘಟಕವನ್ನು ರದ್ದುಪಡಿಸಿ, ಹೊಸದಾಗಿ ಜಿಲ್ಲಾ ಘಟಕವನ್ನ ರಚಿಸಲಾಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನ ನೇಮಿಸಲಾಯಿತು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗುರು ವಿಶ್ವಕರ್ಮ ನೇಮಿಸಲಾಯಿತು.    ವೈಜನಾಥ ಪತ್ತಾರ (ಗೌರವಾಧ್ಯಕ್ಷ),  ಸೋಮಣ್ಣ ವಿಶ್ವಕರ್ಮ …

ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಗುರು ವಿಶ್ವಕರ್ಮ ನೇಮಕ Read More »

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ

ಮಸ್ಕಿ,ಜನವರಿ,28 : ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ ಭಾವಚಿತ್ರಕ್ಕೆ ಅಪಮಾನ ಮಾಡಿ, ಸಂವಿಧಾನಕ್ಕೆ ಅಗೌರವ ತೋರಿದ ರಾಯಚೂರಿನ ಜಿಲ್ಲಾ ಮುಖ್ಯ ನ್ಯಾಯಾದೀಶ ಮಲ್ಲಿಕಾರ್ಜುನ ಗೌಡ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಇಲ್ಲಿನ ದಲಿತ ಸಂರಕ್ಷಣೆ ಒಕ್ಕೂಟದ ವತಿಯಿಂದ ಜ.28 ರಂದು ರಾಜ್ಯ ಹೆದ್ದಾರಿ ತಡೆ ಹಿಡಿದು ಪ್ರತಿಭಟನೆ ಮಾಡಲಾಗುವುದು ಎಂದು ಹೋರಾಟಗಾರ ದೊಡ್ಡಪ್ಪ ಮುರಾರಿ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 73ನೇ ಗಣರಾಜ್ಯೋತ್ಸವ …

ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನ: ಜ.28 ರಂದು ಮಸ್ಕಿಯಲ್ಲಿ ಪ್ರತಿಭಟನೆ Read More »

ರಾಷ್ಟ್ರೀಯ ಮತದಾನದ ದಿನಾಚರಣೆ ಆಚರಣೆ

ರಾಯಾಚೂರು,ಜನೆವರಿ, 25- : ಇಂದು ಸರಕಾರಿ ಪ್ರೌಢಶಾಲೆ, ಚಳಗೇರಾದಲ್ಲಿ “ಮತದಾರರ ಸಾಕ್ಷರತಾ ಕ್ಲಬ್” ಆಶ್ರಯದಲ್ಲಿ. ಪ್ರೌಢ ಶಾಲಾ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಮತದಾರರ ಕ್ಲಬ್ ನ ಸಂಚಾಲಕರಾದ “ಶ್ರೀಮತಿ ವಿಶಾಲಾಕ್ಷಮ್ಮ” “ಪ್ರತಿಜ್ಞಾವಿಧಿ” ಬೋಧಿಸಿದರು. ಮತದಾರರ ದಿನಾಚರಣೆ ಬಗ್ಗೆ ಜಿಲ್ಲಾ ಸಂಪನ್ಮೂಲ ವ್ಯಕ್ತಿ “ಅರವಿಂದಕುಮಾರ ದೇಸಾಯಿ” ಪ್ರಸ್ತಾವಿಕವಾಗಿ ಮಾತನಾಡಿದರು.. ಶಿಕ್ಷಕರಾದ ಶಾಕೀರ್ ಬಾಬಾ, ಶರಣಪ್ಪ ಪರಸಾಪುರ, ಬಸವರಾಜ ಪಿ, ಸಿದ್ದನಗೌಡ ಪೊಲೀಸ್ ಪಾಟೀಲ್, ಪ್ರಶಿಕ್ಷಣಾರ್ಥಿಗಳಾದ ಲಾಲ್ ಮಹಮ್ಮದ್ ಅತ್ತಾರ್, ಪೂರ್ಣಿಮಾ ಅರಹುಣಸಿ, ಮಂಜುಳಾ ಗುರುವಿನ ಇದ್ದರು. ಅಧ್ಯಕ್ಷತೆಯನ್ನು …

ರಾಷ್ಟ್ರೀಯ ಮತದಾನದ ದಿನಾಚರಣೆ ಆಚರಣೆ Read More »

ಶಿಕ್ಷಕರುಗಳಿಗೆ ಬೀಳ್ಕೊಡುವ ಸಮಾರಂಭ

ಚಳಗೇರಾ, ಜನೆವರಿ, 20 : ಸರಕಾರಿ ಪ್ರೌಢಶಾಲೆ ಚಳಗೇರಾದಲ್ಲಿ ವರ್ಗಾವಣೆಗೊಂಡ ಇಬ್ಬರು ಶಿಕ್ಷಕರುಗಳಿಗೆ ಬೀಳ್ಕೊಡುವ ಸಮಾರಂಭ ಜರುಗಿತು.ಇತ್ತೀಚಿಗೆ ನಡೆದ ಪ್ರೌಢಶಾಲಾ ಶಿಕ್ಷಕರುಗಳ ವರ್ಗಾವಣೆಯಲ್ಲಿ ಚಳಗೇರಾ ಪ್ರೌಢಶಾಲಾ ಶಿಕ್ಷಕರುಗಳಾದ ಕರೀಮ್ ಸಾಹೇಬ್ ಇದ್ದಲಗಿ, ಹಾಗೂ ದೈಹಿಕ ಶಿಕ್ಷಕರಾದ ಹೆಚ್, ಡಿ, ನದಾಫ್ ರವರು ಬೇರೆಡೆ ವರ್ಗಾವಣೆ ಪ್ರಯುಕ್ತ. ಪ್ರೌಢಶಾಲಾ ಸಿಬ್ಬಂದಿ ಹಾಗೂ ಹಳೇ ವಿದ್ಯಾರ್ಥಿಗಳು ಸೇರಿ ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ವಿದ್ಯಾರ್ಥಿಗಳು ಇಬ್ಬರ ಶಿಕ್ಷಕರ ಕಾರ್ಯಕ್ಷಮತೆ, ಸಾಧನೆ ಕುರಿತು ಮಾತನಾಡಿ. ಇಬ್ಬರು ಶಿಕ್ಷಕರು ಶಾಲೆಯ ಏಳಿಗೆಗೆ ಶ್ರಮಿಸಿದ್ದಾರೆ..ಕ್ರೀಡಾಕೂಟದಲ್ಲಿ …

ಶಿಕ್ಷಕರುಗಳಿಗೆ ಬೀಳ್ಕೊಡುವ ಸಮಾರಂಭ Read More »

ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ :- ಡಾ. ಮೌನೇಶ

ಮಸ್ಕಿ,ಜನವರಿ,14 : ಜಿಲ್ಲಾ ಆಡಳಿತ,ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳು ,ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳು ರಾಯಚೂರು & ಕ್ಷಯರೋಗ ಘಟಕ ಮಸ್ಕಿ ಇವರ ಸಂಯುಕ್ತ ಆಶ್ರಯದಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ “ಟಿಬಿ ಸೋಲಿಸಿ ಮಸ್ಕಿ ಗೆಲ್ಲಿಸಿ”ಅಭಿಯಾನವನ್ನು ದಿನಾಂಕ 3-01-22 ರಿಂದ 15-02-2022 ವರೆಗೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ಇಂದು 14-01-2022 ಮಸ್ಕಿ ಮತ್ತು ಸಂತೇಕಲ್ಲೂರ್ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಮುಖಾಮುಖಿ ಜಾನಪದ ಕಲಾ ತಂಡದವರಿಂದ ಕಾರ್ಯ ಕ್ರಮವನ್ನು …

ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ :- ಡಾ. ಮೌನೇಶ Read More »

ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಣೆ

ಮಾನ್ವಿ: ತಾಲೂಕಿನ ಪೋತ್ನಾಳ್ ಪಟ್ಟಣದಲ್ಲಿ ಇರುವ ಸರಕಾರಿ ಹಿರಿಯ ಪ್ರಾಥಮಿಕ ಶಸಲೆ ಜನತಾ ಕಾಲೋನಿಯಲ್ಲಿ ಇಂದು ಮಕ್ಕಳಿಗೆ ಶಾಲಾ ಸಮವಸ್ತ್ರವನ್ನು ಆ ಶಾಲೆಯ ಮುಖ್ಯ ಗುರುಗಳಾದ ಸಿದ್ದಪ್ಪರವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಗುರುಗಳು ಸಿದ್ದಪ್ಪರವರು ಸರಕಾರವು ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಬಿಸಿ ಊಟ, ಉಚಿತ ಶೂ, ಉಚಿತವಾಗಿ ಪಠ್ಯ ಪುಸ್ತಕ ಹಾಗೂ ಉಚಿತವಾಗಿ ಶಾಲಾ ಸಮವಸ್ತ್ರ ವನ್ನು ಕೊಡುತ್ತಿದೆ. ಅದನ್ನು ನಾವುಗಳು ಬಹಳ ಜಾಗರೂಕತೆಯಿಂದ ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣವನ್ನು ಪಡೆಯುದರ ಕಡೆ …

ಮಕ್ಕಳಿಗೆ ಶಾಲಾ ಸಮವಸ್ತ್ರ ವಿತರಣೆ Read More »

ಟಿ ಬಿ ಸೋಲಿಸಿ, ದೇಶ ಗೆಲ್ಲಿಸಿ -ಅಭಿಯಾನ

ಮಸ್ಕಿ :ಕ್ಷಯರೋಗದ ಬಗ್ಗೆ ಸಾರ್ವಜನಿಕರು ಮುಕ್ತವಾಗಿ ಮಾತನಾಡುವ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ, ಕ್ಷಯ ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕಾದ ಸಮಯ ಇದಾಗಿರುತ್ತದೆ ಎಂದು ತಾಲೂಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಡಾ. ಮೌನೇಶ ಹೇಳಿದರು. ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಸ್ಕಿ ಸರ್ಕಾರಿ ಪದವಿಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಆಜಾದಿ ಕಾ ಅಮೃತ ಮಹೋತ್ಸವ ಅಭಿಯಾನ ಅಂಗವಾಗಿ ವಿಶ್ವ ಕ್ಷಯರೋಗ ಕುರಿತು …

ಟಿ ಬಿ ಸೋಲಿಸಿ, ದೇಶ ಗೆಲ್ಲಿಸಿ -ಅಭಿಯಾನ Read More »

Translate »
Scroll to Top