ಮಸ್ಕಿ,ಫೆ,23 : ಪಾಮನಕಲ್ಲೂರು ಶಾಖಾ ಕಾಲುವೆ ಎನ್ ಆರ್ ಬಿಸಿ 5ಎ ಕಾಲುವೆ ಯೋಜನೆ ಜಾರಿಗೊಳಿಸಲು ಪ್ರಸಕ್ತ ರಾಜ್ಯ ಬಜೆಟ್ ನಲ್ಲಿ ಐದು ನೂರು ಕೋಟಿ ರೂಪಾಯಿ ಅನುದಾನ ನೀಡುವಂತೆ ಮತ್ತು ರೈತರ ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಮತ್ತು ಅವೈಜ್ಞಾನಿಕವಾಗಿ, ವಟಗಲ್ ಬಸವೇಶ್ವರ ಏತ ನೀರಾವರಿ ಯೋಜನೆ ಜಾರಿಗೆ ರಾಜ್ಯ ಸರಕಾರ ಮುಂದಾಗಿದ್ದು ಕೂಡಲೇ ಈ ಯೋಜನೆ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಪಟ್ಟಣದ ಬಸವೇಶ್ವರ ವೃತ್ತದ ಬಳಿ ಕರ್ನಾಟಕ ನೀರಾವರಿ ಸಂಘ(ರಿ) ಎನ್ ಆರ್ ಬಿ ಸಿ5 ಎ ಕಾಲುವೆ ಹೋರಾಟ ಸಮಿತಿ ವತಿಯಿಂದ ಸಾಂಕೇತಿಕ ಧರಣಿ ಹಮ್ಮಿಕೊಳ್ಳಲಾಗಿತ್ತು.

ನಂತರ ಪ್ರಧಾನ ಕಾರ್ಯದರ್ಶಿಯಾದ ನಾಗರೆಡ್ಡಪ್ಪ ದೇವರಮನಿ ಮಾತನಾಡಿ ಕಳೆದ 13 ವರ್ಷಗಳಿಂದ 5ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ ಜಾರಿಗೆ ಒತ್ತಾಯಿಸಿ ರೈತರು ನಿರಂತರ ಹೋರಾಟ ನಡೆಸುತ್ತಾ ಬಂದಿದ್ದು ಇಲ್ಲಿವರೆಗೆ ವಿವಿಧ ಪಕ್ಷಗಳ ರಾಜಕೀಯ ಪ್ರತಿನಿಧಿಗಳು ಸುಳ್ಳು ಭರವಸೆ ನೀಡಿದ್ದಾರೆ ಹೊರತು ರೈತರ ಹಿತಾಸಕ್ತಿ ಕಾಪಾಡಿ ಇಲ್ಲ, ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಬಂದಾಗ ಮಾತ್ರ ಈ ಭಾಗದ ರೈತರ ನೆನಪಾಗುತ್ತಾರೆ ಮತ್ತು ಮೂರು ಪಕ್ಷದ ರಾಜಕಾರಣಿಗಳು ಬಣ್ಣದ ಮಾತುಗಳಿಂದ ಹಾಗೂ ಸುಳ್ಳು ಭರವಸೆಗಳನ್ನು ಈ ಭಾಗದ ರೈತರು ರೋಸಿ ಹೋಗಿದ್ದಾರೆ ಆದರೆ ಯೋಜನೆ ಜಾರಿಗೆ ಇಂದಿಗೂ ಮೀನ ಮೇಷ ಮಾಡಲಾಗುತ್ತದೆ, ಮತ್ತು ವಿವಿಧ ಪಕ್ಷದ ಮುಖಂಡರು ರಾಜಕಾರಣಿಗಳು ಸುಳ್ಳು ಬರವಸೆ ಆಸೆ ಆಮಿಷಗಳು ಈಗ ನಡೆಯುವುದಿಲ್ಲ ಏನೇ ಇದ್ದರೂ ಯೋಜನೆ ಜಾರಿಯಾಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ,

ರಾಜ್ಯ ಸರ್ಕಾರ ಇಂದಿನ ಅವೈಜ್ಞಾನಿಕ ತೀರ್ಮಾನವನ್ನು ಕೈಬಿಟ್ಟು ಎನ್ ಆರ್ ಬಿಸಿ 5 ಎ ಪಾಮನಕಲ್ಲೂರು ಶಾಖಾ ಕಾಲುವೆ ಯೋಜನೆ ಜಾರಿಗೊಳಿಸಿ, ಪ್ರಸಕ್ತ ರಾಜ್ಯ ಬಜೆಟಿನಲ್ಲಿ ಐದು ನೂರು ಕೋಟಿ ರೂಪಾಯಿಗಳು ಅನುದಾನವನ್ನುಒದಗಿಸಿಕೊಡಬೇಕು,ಮತ್ತು ರೈತರ ಮತ್ತು ಜನರ ಅಭಿಪ್ರಾಯಕ್ಕೆ ವಿರುದ್ಧವಾಗಿ ಮತ್ತು ಅವೈಜ್ಞಾನಿಕವಾಗಿ, ವಟಗಲ್ ಬಸವೇಶ್ವರ ಏತ ನೀರವರಿಯೋಜನೆ ಜಾರಿಗೆರಾಜ್ಯ ಸರ್ಕಾರ ಮುಂದಾಗಿದ್ದು ಅದನ್ನು ಕೂಡಲೇ ಯೋಜನೆ ರದ್ದುಗೊಳಿಸಬೇಕೆಂದು
ತಹಸಿಲ್ದಾರ್ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡುವ ಮೂಲಕ ಒತ್ತಾಯಿಸಲಾಯಿತು.