ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಗುರು ವಿಶ್ವಕರ್ಮ ನೇಮಕ

ಮಸ್ಕಿ,9 :ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷರಾಗಿ ಗುರು ವಿಶ್ವಕರ್ಮ ಮೂರನೇ ಬಾರಿಗೆ ನೇಮಕಗೊಂಡಿದ್ದಾರೆ.   ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಶ್ರೀ ಕಳಿಕಾದೇವಿ ಸಭಾ ಭವನದಲ್ಲಿ ಇತ್ತೀಚೆಗೆ ಶ್ರೀ ಶೈಲಪ್ಪ ತಾತಾನವರು ಹಾಗೂ ಸಮಾಜದ ಬಾಂಧವರ ಸಮ್ಮುಖದಲ್ಲಿ ನಡೆದ‌‌ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಈ ಹಿಂದೆ ರಚನೆಗೊಂಡಿದ್ದ ಜಿಲ್ಲಾ ಘಟಕವನ್ನು ರದ್ದುಪಡಿಸಿ, ಹೊಸದಾಗಿ ಜಿಲ್ಲಾ ಘಟಕವನ್ನ ರಚಿಸಲಾಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಹಾಗೂ ಪದಾಧಿಕಾರಿಗಳನ್ನ ನೇಮಿಸಲಾಯಿತು. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗುರು ವಿಶ್ವಕರ್ಮ ನೇಮಿಸಲಾಯಿತು. 

 
 
ವೈಜನಾಥ ಪತ್ತಾರ (ಗೌರವಾಧ್ಯಕ್ಷ),  ಸೋಮಣ್ಣ ವಿಶ್ವಕರ್ಮ ಸುಕಾಲಪೇಟೆ(ಉಪಾಧ್ಯಕ್ಷ),  ಮೌನೇಶ ವಿಶ್ವಕರ್ಮ ಸಾಲವಾಡಗಿ(ಪ್ರಧಾನ ಕಾರ್ಯದರ್ಶಿ), ವಿರೇಶ್ ಬಡಿಗೇರ ಗಿಲ್ಲೆಸೂಗೂರು(ಸಹ ಕಾರ್ಯದರ್ಶಿ),  ಶ್ರೀಧರ ಮುದಗಲ್(ಸಂಘಟನೆ ಕಾರ್ಯದರ್ಶಿ), ಚಿತ್ರಶೇಖರ ವಿಶ್ವಕರ್ಮ ಮಲದಕಲ್(ಖಜಾಂಚಿ) ಹೊಸದಾಗಿ ಪದಾಧಿಕಾರಗಳನ್ನಾಗಿ ನೇಮಿಸಲಾಯಿತು.  

Leave a Comment

Your email address will not be published. Required fields are marked *

Translate »
Scroll to Top