ಶಿಕ್ಷಕರುಗಳಿಗೆ ಬೀಳ್ಕೊಡುವ ಸಮಾರಂಭ

ಚಳಗೇರಾ, ಜನೆವರಿ, 20 : ಸರಕಾರಿ ಪ್ರೌಢಶಾಲೆ ಚಳಗೇರಾದಲ್ಲಿ ವರ್ಗಾವಣೆಗೊಂಡ ಇಬ್ಬರು ಶಿಕ್ಷಕರುಗಳಿಗೆ ಬೀಳ್ಕೊಡುವ ಸಮಾರಂಭ ಜರುಗಿತು.ಇತ್ತೀಚಿಗೆ ನಡೆದ ಪ್ರೌಢಶಾಲಾ ಶಿಕ್ಷಕರುಗಳ ವರ್ಗಾವಣೆಯಲ್ಲಿ ಚಳಗೇರಾ ಪ್ರೌಢಶಾಲಾ ಶಿಕ್ಷಕರುಗಳಾದ ಕರೀಮ್ ಸಾಹೇಬ್ ಇದ್ದಲಗಿ, ಹಾಗೂ ದೈಹಿಕ ಶಿಕ್ಷಕರಾದ ಹೆಚ್, ಡಿ, ನದಾಫ್ ರವರು ಬೇರೆಡೆ ವರ್ಗಾವಣೆ ಪ್ರಯುಕ್ತ. ಪ್ರೌಢಶಾಲಾ ಸಿಬ್ಬಂದಿ ಹಾಗೂ ಹಳೇ ವಿದ್ಯಾರ್ಥಿಗಳು ಸೇರಿ ಅದ್ದೂರಿಯಾಗಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು. ವಿದ್ಯಾರ್ಥಿಗಳು ಇಬ್ಬರ ಶಿಕ್ಷಕರ ಕಾರ್ಯಕ್ಷಮತೆ, ಸಾಧನೆ ಕುರಿತು ಮಾತನಾಡಿ. ಇಬ್ಬರು ಶಿಕ್ಷಕರು ಶಾಲೆಯ ಏಳಿಗೆಗೆ ಶ್ರಮಿಸಿದ್ದಾರೆ..ಕ್ರೀಡಾಕೂಟದಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ವರೆಗೂ ಕ್ರೀಡಾ ಪ್ರತಿಭೆಗಳು ಹೊರಬರಲು ಕಾರಣರಾಗಿದ್ದಕ್ಕೆ, ಸುಮಾರು ಹತ್ತು ಹದಿನೈದು ವರ್ಷದಿಂದ ಕಾಡಿನಂತೆ ಇದ್ದ ಶಾಲಾ ಮೈದಾನವನ್ನು ಸುಂದರವಾದ ಮೈದಾನ ಮಾಡಿದ್ದನ್ನು ಸ್ಮರಿಸಿದರು.

ಇನ್ನೊಬ್ಬ ಶಿಕ್ಷಕರಾದ ಹಿಂದಿ ಭಾಷಾ ಬೋಧಿಸಿದ ಕರೀಮ್ ಸಾಹೇಬ ಇದ್ದಲಗಿ ಅವರ ಸರಳ ಜೀವನ,ಉದಾತ್ತ ವಿಚಾರ, ಸಹಕಾರ ಭಾವನೆ, ಮಕ್ಕಳೊಂದಿಗೆ ಇದ್ದ ಅನೋನ್ಯತೆಯನ್ನು ಕೊಂಡಾಡಿದರು. ಈ ಸಂದರ್ಭದಲ್ಲಿ ಎಸ್, ಡಿ, ಎಂ,ಸಿ, ಅಧ್ಯಕ್ಷರಾದ ಶಿವಲಿಂಗಪ್ಪ ಕುಷ್ಟಗಿ ಮುಖ್ಯ ಅತಿಥಿಗಳಾಗಿದ್ದರು. ಎಲ್ಲಾ ಸದಸ್ಯರು ಹಾಜರಿದ್ದರು.
ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ರಾಯಪ್ಪ ಹೂಗಾರ್ ಅಧ್ಯಕ್ಷತೆ ವಹಿಸಿದ್ದರು.. ಶಿಕ್ಷಕರಾದ ವಿಶಾಲಾಕ್ಷಮ್ಮ, ಅರವಿಂದಕುಮಾರ ದೇಸಾಯಿ, ಶಾಕೀರ್ ಬಾಬಾ, ಶರಣಪ್ಪ ಪರಸಾಪುರ, ಸಿದ್ದನಗೌಡ ಪೊಲೀಸ್ ಪಾಟೀಲ್, ಪ್ರಶಿಕ್ಷಣಾರ್ಥಿಗಳಾದ ಲಾಲ್ ಮಹಮ್ಮದ್ ಅತ್ತಾರ್,ವೀರೇಶ್ ಹಾದಿಮನಿ, ಪೂರ್ಣಿಮಾ ಅರಹುಣಸಿ, ಮಂಜುಳಾ ಗುರುವಿನ್ ಇದ್ದರು.

Leave a Comment

Your email address will not be published. Required fields are marked *

Translate »
Scroll to Top