ಟಿಬಿ ಸೋಲಿಸಿ ಕರ್ನಾಟಕ ಗೆಲ್ಲಿಸಿ :- ಡಾ. ಮೌನೇಶ

ಮಸ್ಕಿ,ಜನವರಿ,14 : ಜಿಲ್ಲಾ ಆಡಳಿತ,ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಅಧಿಕಾರಿಗಳು ,ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳು ರಾಯಚೂರು & ಕ್ಷಯರೋಗ ಘಟಕ ಮಸ್ಕಿ ಇವರ ಸಂಯುಕ್ತ ಆಶ್ರಯದಲ್ಲಿ “ಆಜಾದಿ ಕಾ ಅಮೃತ ಮಹೋತ್ಸವ” ಅಂಗವಾಗಿ “ಟಿಬಿ ಸೋಲಿಸಿ ಮಸ್ಕಿ ಗೆಲ್ಲಿಸಿ”ಅಭಿಯಾನವನ್ನು ದಿನಾಂಕ 3-01-22 ರಿಂದ 15-02-2022 ವರೆಗೆ ಹಮ್ಮಿಕೊಂಡಿದೆ. ಇದರ ಅಂಗವಾಗಿ ಇಂದು 14-01-2022 ಮಸ್ಕಿ ಮತ್ತು ಸಂತೇಕಲ್ಲೂರ್ ಕ್ಷಯರೋಗದ ಕುರಿತು ಜಾಗೃತಿ ಮೂಡಿಸುವ ಬೀದಿ ನಾಟಕವನ್ನು ಮುಖಾಮುಖಿ ಜಾನಪದ ಕಲಾ ತಂಡದವರಿಂದ ಕಾರ್ಯ ಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮುಖ್ಯ ಅತಿಥಿಗಳಾಗಿ ತಹಸೀಲ್ದಾರ್ ಕವಿತಾ ಆರ್, ಪುರಸಭೆ ಮುಖ್ಯ ಅಧಿಕಾರಿ ಹನುಮಂತಮ್ಮ ನಾಯಕ ಡಾ.ಮೌನೇಶ ಮಸ್ಕಿ, ಡಾ.ಶಿವನಾಥ ಸಂತೆಕೆಲ್ಲೂರು ಅವರು ಆಗಮಿಸಿ ಚಾಲನೆ ನೀಡಿದರು.


ತಾಲೂಕು ಹಿರಿಯ ಚಿಕಿತ್ಸಾ ಮೇಲ್ವಿಚಾರಕರಾದ ಶ್ರೀ ದೇವರಾಜ್ ಎಸ್ ಟಿ ಎಸ್ ರವರು ಕ್ಷಯರೋಗದ ಕುರಿತು ವಿವರಿಸಿದರು ,ನಮ್ಮ ಮನೆಯಿಂದಲೇ ಈ ಅಭಿಯಾನ ಪ್ರಾರಂಭಿಸಬೇಕೆಂದು ವಿನಂತಿಸಿದರು. ಮುಖಾಮುಖಿ ಜಾನಪದ ಕಲಾ ತಂಡದವರು ಅತ್ಯಂತ ಮನಮುಟ್ಟುವಂತೆ ಬೀದಿ ನಾಟಕ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ತಾಲೂಕ ದಂಡಾಧಿಕಾರಿ ಕವಿತಾ ಆರ್, ಪುರಸಭೆಯ ಮುಖ್ಯ ಅಧಿಕಾರಿ ಹನುಮಂತಮ್ಮ ನಾಯಕ, ತಾಲೂಕ ಆರೋಗ್ಯ ಅಧಿಕಾರಿ ಡಾ. ಮೌನೇಶ, ಡಾ. ಶಿವನಾಥ, ಕ್ಷಯರೋಗದ ಮೇಲ್ವಿಚಾರಕರಾದ ದೇವರಾಜ, ಹಾಗೂ ಆರೋಗ್ಯ ಸಿಬ್ಬಂದಿ ವರ್ಗದವರು ಮತ್ತು ಪುರಸಭೆ ಸಿಬ್ಬಂದಿ ವರ್ಗದವರು ಸಾರ್ವಜನಿಕರು ಭಾಗಿಯಾಗಿದ್ದರು.

Leave a Comment

Your email address will not be published. Required fields are marked *

Translate »
Scroll to Top