ಬಳ್ಳಾರಿ

ಶಿಕ್ಷಣದ ಸ್ಥಿತಿ ಅದೋಗತಿಗೆ ತಲುಪಿದೆ  ಸರ್ಕಾರದ ವಿರುದ್ಧ ಎನ್ ರವಿಕುಮಾರ್ ಗುಡುಗು

ಬಳ್ಳಾರಿ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ನ್ಯಾಯಪೈಸೆಯಷ್ಟು ಕಾಳಜಿ ಇಲ್ಲವಾಗಿದೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಕಳೆದ ಬಾರಿಗೆ ಹೋಲಿಸಿದರೆ ಶೇಕಡ 33% ರಷ್ಟು ಕುಸಿತ ಕಂಡಿದೆ ಪ್ರಶ್ನೆ ಪತ್ರಿಕೆಯಲ್ಲಿ ಶೇಕಡ 50ರಷ್ಟು ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನೇ ನೀಡಲಾಗಿದೆ ಶಿಕ್ಷಣದ ಬಗ್ಗೆ ಯಾವುದೇ ಕಳಕಳಿ ಕಾಳಜಿಗಳಿಲ್ಲದ ಅತ್ಯಂತ ಜೋಬದ್ರಗೆಡಿ ಸರ್ಕಾರ ಇದಾಗಿದೆ ಎಂದು ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಟಿಕೆಸಿದ್ದಾರೆ.

ಪರಿಷತ್ ಚುನಾವಣೆ ಬಿಜೆಪಿ ಪ್ರಚಾರ ಕಚೇರಿ ಉದ್ಘಾಟನೆ

ಬಳ್ಳಾರಿ : ಬಳ್ಳಾರಿ ಜಿಲ್ಲಾ ಬಿಜೆಪಿ ಕಾರ್ಯಲಯದಲ್ಲಿ ಬೆಳಿಗ್ಗೆ ಈಶಾನ್ಯ ಪದವೀಧರ ಮತಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಬಿಜೆಪಿ ಪ್ರಚಾರ ಕಚೇರಿಯನ್ನು ಪ್ರಾರಂಭಿಸಲಾಯಿತು.

“ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು”- ಡಾ. ಶಶಿಕಾಂತ್ ಹೆಚ್ ಮಜಿಗೆ

ಬಳ್ಳಾರಿ: ಮಾನವ ತನ್ನ ಸ್ವಾರ್ಥವನ್ನು ಬಿಟ್ಟು ಮಾನವೀಯತೆಯ ಗುಣಗಳನ್ನು ಸ್ವರ್ಥಿ ಸೇವಾ ಮನೋಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ ಬಹಳ ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದು ವಿ ಎಸ್ ಕೆ ವಿಶ್ವವಿದ್ಯಾಲಯದ ಶುದ್ಧ ವಿಜ್ಞಾನ ನಿಕಾಯದ ಪ್ರಾಧ್ಯಾಪಕರು ಹಾಗೂ ಡೀನರಾದ ಡಾ. ಶಶಿಕಾಂತ್ ಹೆಚ್ ಮಜಿಗಿರವರು ತಿಳಿಸಿದರು.

ಮಹಿಳೆಯರಿಗೆ ಶೂನ್ಯ ಸುರಕ್ಷತೆ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ: ಜ್ಯೋತಿ ಪ್ರಕಾಶ್

ಬಳ್ಳಾರಿ: ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಶೂನ್ಯ ಸುರಕ್ಷತೆ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ಸುವ್ಯವಸ್ಥೆ ಕಾನೂನು ಪಾಲನೆ ಮಾಡುವಲ್ಲಿ ವಿಫಲವಾದ ಬಗ್ಗೆ ಕ್ರಮಕ್ಕಾಗಿ ಒತ್ತಾಯಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ನಗರ ಭಾರತೀಯ ಜನತಾ ಪಾರ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಹಾಗೂ ಮಹಿಳೆಯರು ಸೇರಿ ಮನವಿ ಮಾಡಿದರು.

ಜಿಂದಾಲ್ ಕೈಗಾರಿಕ ಅಪಘಾತಗಳನ್ನು ತಡೆಯಲು (ಸುರಕ್ಷತೆಗಾಗಿ) ಮತ್ತು ಮೃತ ಕಾರ್ಮಿಕ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಆಗ್ರಹಿಸಿ ಪ್ರತಿಭಟನೆ

ಬಳ್ಳಾರಿ: ಜಿಂದಾಲ್ ಕೈಗಾರಿಕ ಅಪಘಾತಗಳನ್ನು ತಡೆಯಲು (ಸುರಕ್ಷತೆಗಾಗಿ) ಮತ್ತು ಮೃತ ಕಾರ್ಮಿಕ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಕೈಗಾರಿಕ ಅಪಘಾತದ ಕಾರ್ಮಿಕ ಸಾವುಗಳನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ CITU ಬಳ್ಳಾರಿ ಜಿಲ್ಲಾ ಸಮಿತಿ, ರೈತ, ಮಹಿಳಾ, ದಲಿತ, ಯುವಜನ, ವಿಧ್ಯಾರ್ಥಿಗಳ ಸಂಘಟನೆ ಜಂಟಿ ಸಮಿತಿಯಿಂದ ಜಿಂದಾಲ್ ಕಾರ್ಖಾನೆ ಹಳೆ ಗೇಟಿನ ಮುಂದೆ ಪ್ರತಿಘಟನೆ.

ಅಕ್ರಮ ಪಡಿತರ ಅಕ್ಕಿ ದಾಸ್ತಾನು ವಶ

ಬಳ್ಳಾರಿ: ನಗರದ ಹೊರವಲಯದಲ್ಲಿನ ಗುಗ್ಗರಹಟ್ಟಿಯ ನ್ಯಾಯಬೆಲೆ ಅಂಗಡಿ 115 ರ ಬದಿಯಲ್ಲಿ ಅಕ್ರಮವಾಗಿ ದಾಸ್ತಾನಿರಿಸಿದ್ದ ಸುಮಾರು 750 ಚೀಲ ಪಡಿತರ ಅಕ್ಕಿಯನ್ನು ಅಹಾರ ಇಲಾಖೆಯು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ವಶಪಡಿಸಿಕೊಂಡು ಮುಂದಿನ ಅಗತ್ಯ ಕ್ರಮ ವಹಿಸಿದೆ.

ಮಾನವ ಪ್ರಾಣಿ ಸಂಘರ್ಷ ತಗ್ಗಿಸಿದ ನೀರಿನ ತೊಟ್ಟಿಗಳು: ಸಂದೀಪ್ ಸೂರ್ಯವಂಶಿ

ಬಳ್ಳಾರಿ: ಈ ವರ್ಷ ಸುದೀರ್ಘ ಬೇಸಿಗೆಯ ಅವಧಿಯಲ್ಲಿ ಸಂಡೂರು ತಾಲೂಕಿನ ಎರಡೂ ವಲಯಗಳಲ್ಲಿ ನೀರಿನ ಕೊರತೆ ನೀಗಿಸಲು ಅರಣ್ಯ ಇಲಾಖೆಯು ಇಡೀ ತಾಲೂಕಿನ ಎಲ್ಲಾ ಕಾಡುಗಳ ಆಯಕಟ್ಟಿನ ಸ್ಥಳಗಳಲ್ಲಿ ವಿಶಾಲವಾದ ನೀರು ತೊಟ್ಟಿಗಳನ್ನು ನಿರ್ಮಿಸಿ ಕಾಲಕಾಲಕ್ಕೆ ನೀರು ತುಂಬಿಸಿದ್ದರಿಂದ ಮೊದಲ ಬಾರಿಗೆ ತಾಲೂಕಿನಲ್ಲಿ ಮಾನವ ಮತ್ತು ವನ್ಯ ಪ್ರಾಣಿಗಳ ನಡುವಿನ ಸಂಘರ್ಷವನ್ನು ತಪ್ಪಿಸಲಾಗಿದೆ ಎಂದು ಬಳ್ಳಾರಿ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ ಅವರು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹುಟ್ಟು ಹಬ್ಬ: ಕೆಪಿಸಿಸಿ ರಾಜ್ಯ ಸಂಯೋಜಕರು ಪ್ರಚಾರ ಸಮಿತಿ ಯಿಂದ ವಿಶೇಷ ಪೂಜೆ  

ಬಳ್ಳಾರಿ: ವೆಂಕಟೇಶ್ ಹೆಗಡೆ, ವಕೀಲರು ಕೆಪಿಸಿಸಿ ರಾಜ್ಯ ಸಂಯೋಜಕರು ಪ್ರಚಾರ ಸಮಿತಿ ಹಾಗೂ ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ರವರ ನೇತೃತ್ವದಲ್ಲಿ ಮಾನ್ಯ ಕೆಪಿಸಿಸಿಯ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರ ಹುಟ್ಟು ಹಬ್ಬವನ್ನು ಬಳ್ಳಾರಿಯ ಆರಾಧ್ಯ ದೈವ ತಾಯಿ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಮತ್ತು ಕುಂಕುಮಾರ್ಚನೆ ಮಾಡಿಸುವುದರ ಮೂಲಕ ಅವರಿಗೆ ಆರೋಗ್ಯ, ಮತ್ತು ಶಕ್ತಿಯನ್ನು ಕರುಣಿಸಿ ಹಾಗೂ ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಮಾಡಲಿಕ್ಕೆ ಆಶೀರ್ವಾದವನ್ನು ತಾಯಿ ಕನಕ ದುರ್ಗಮ್ಮ ಮಾಡಲಿ ಎಂದು ಬೇಡಿ ಕೊಂಡರು.

ನವಜಾತ ಶಿಶುವಿಗೆ ಆರು ತಿಂಗಳ ವಯಸ್ಸಿನವರೆಗೆ ತಾಯಿಯ ಎದೆ ಹಾಲು ಹೊರತುಪಡಿಸಿ ಬೇರೆ ಏನನ್ನು ಕೊಡಬೇಡಿ: ಡಾ ವೈ ರಮೇಶ ಬಾಬು

ಬಳ್ಳಾರಿ: ಹೆರಿಗೆ ನಂತರದಲ್ಲಿ ನವಜಾತ ಶಿಶುವಿಗೆ ಆರು ತಿಂಗಳು ವಯಸ್ಸು ತುಂಬುವವರೆಗೂ ಬಾಲ್ಯದಲ್ಲಿ ಮಗುವಿನ ಸದೃಡ ಆರೋಗ್ಯಕ್ಕೆ ಕಾರಣವಾದ ತಾಯಿಯ ಎದೆ ಹಾಲು ಹೊರತುಪಡಿಸಿ ಬೇರೆ ಏನನ್ನು ಮಕ್ಕಳಿಗೆ ಕೊಡಬೇಡಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ವೈ ರಮೇಶ್ ಬಾಬು ಮನವಿ ಮಾಡಿದರು.

Translate »
Scroll to Top