ನವಜಾತ ಶಿಶುವಿಗೆ ಆರು ತಿಂಗಳ ವಯಸ್ಸಿನವರೆಗೆ ತಾಯಿಯ ಎದೆ ಹಾಲು ಹೊರತುಪಡಿಸಿ ಬೇರೆ ಏನನ್ನು ಕೊಡಬೇಡಿ: ಡಾ ವೈ ರಮೇಶ ಬಾಬು

ಬಳ್ಳಾರಿ: ಹೆರಿಗೆ ನಂತರದಲ್ಲಿ ನವಜಾತ ಶಿಶುವಿಗೆ ಆರು ತಿಂಗಳು ವಯಸ್ಸು ತುಂಬುವವರೆಗೂ ಬಾಲ್ಯದಲ್ಲಿ ಮಗುವಿನ ಸದೃಡ ಆರೋಗ್ಯಕ್ಕೆ ಕಾರಣವಾದ ತಾಯಿಯ ಎದೆ ಹಾಲು ಹೊರತುಪಡಿಸಿ ಬೇರೆ ಏನನ್ನು ಮಕ್ಕಳಿಗೆ ಕೊಡಬೇಡಿ ಎಂದು   ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ವೈ ರಮೇಶ್ ಬಾಬು ಮನವಿ ಮಾಡಿದರು.

ಸಿರಗುಪ್ಪ ತಾಲೂಕಿನ ತಾಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬೇಟಿ ಹೆರಿಗೆಯಾದ ಬಾಣಂತಿಯ ಆರೋಗ್ಯ ವಿಚಾರಿಸಿ ನವಜಾತ ಶಿಶುವಿಗೆ ದಿನಕ್ಕೆ 10-12 ಬಾರಿ ಅಥವಾ ಅತ್ತಾಗಲೆಲ್ಲಾ ಹಾಲುಣಿಸಬೇಕು,  ಬೆಚ್ಚಗಿಡುವಕ್ಕೆ ಆಧ್ಯತೆ ನೀಡಿ, ಆದರೆ ಪ್ರಸ್ತುತ ಹೆಚ್ಚು ಬಿಸಿಲು ಇರುವದರಿಂದ ಸ್ವಚ್ಚ ತೆಳುವಾದ ಹತ್ತಿ ಬಟ್ಟೆಯನ್ನು ಮಾತ್ರ ಹೊದಿಸಬೇಕು,  ಹೊಕ್ಕಳು ಬಳ್ಳಿಗೆ ಏನನ್ನೂ ಹಚ್ಚದಂತೆ ವಿನಂತಿಸುವ ಜೊತೆಗೆ  ತಾಯಿಯೂ ಹಾಲಿನ ಉತ್ಪತ್ತಿ ಹೆಚ್ಚಾಗಲು ಪೌಷ್ಟಿಕಾಹಾರದ ಜೊತೆಗೆ ಸಾಕಷ್ಟು ನೀರು ಕುಡಿಯುವಂತೆ ಕುಟುಂಬದ ಸದಸ್ಯರು ಸಹಕರಿಸಬೇಕು ಎಂದು ಪಾಲಕರಿಗೆ ವಿನಂತಿಸಿದರು. 

ಅಲ್ಲದೆ ಪಾಲಕರು ಮಗುವಿಗೆ ಬಾಲ್ಯಾವಧಿ ಕಾಡುವ ಮಾರಕ  ರೋಗಗಳನ್ನು ತಡೆಗಟ್ಟಲು ಮುಖ್ಯವಾಗಿ 12 ಮಾರಕ ರೋಗಗಳು ಮತ್ತು ಅವುಗಳ ವಿರುದ್ದ ನೀಡುವ ಲಸಿಕೆಗಳನ್ನು ವಯಸ್ಸಿಗನುಸಾರವಾಗಿ ಹಾಕಿಸಲು ತಿಳಿಸಿದರು,  ಪೋಲಿಯೋ ರೋಗಕ್ಕೆ ಪೋಲಿಯೋ ದ್ರಾವಣ, ಬಾಲಕ್ಷಯಕ್ಕೆ ಬಿಸಿಜಿ ಲಸಿಕೆ, ಕಾಮಾಲೆ ರೋಗಕ್ಕೆ ಹೆಪಟೈಟಿಸ್ ಚುಚ್ಚುಮದ್ದು, ಗಂಟಲು ಮಾರಿ, ನಾಯಿಕೆಮ್ಮು ಧನುರ್ವಾಯು ರೋಟ ವೈರಸ್‌, ಹೆಚ್‌ ಇನ್‌ಪ್ಲ್ಯುಯೆಂಜಾ, ಕಾಮಾಲೆ ಗಾಗಿ ಪೆಂಟಾವೈಲೆಂಟ್‌ ಲಸಿಕೆ,     ರೋಟಾವೈರಸ್‌ ಅತಿಸಾರಬೇದಿ ಗೆ ನಿಮೋಕಾಕಲ್ ಲಸಿಕೆ,  ಮೆದುಳು ಜ್ವರ ರೋಗಕ್ಕೆ ಜಾಪನೀಸ್‌ ಎನ್ಸ್‌ಪಲಿಟಿಸ್‌ ಲಸಿಕೆ, ದಡಾರ 

ರೂಬೇಲ್ಲಾ ರೋಗಕ್ಕೆ ಮಿಸಲ್ಸ್‌ ರೂಬೆಲ್ಲಾ ಲಸಿಕೆ, ಹಾಗೂ ಸಂಜೆಯ ಹೊತ್ತು ಕಂಡುಬರುವ ಇರುಳುಗಣ್ಣು ರೋಗಕ್ಕೆ ವಿಟಾಮಿನ್‌-ಎ ಅನ್ನಾಂಗ ದ್ರಾವಣ, ನೀಡಲಾಗುತ್ತದೆ. ಇವೆಲ್ಲವುಗಳನ್ನು ಮಗುವಿನ ಒಂದು ವರ್ಷದೊಳಗೆ ಹಾಕಲಾಗುವುದು, ಕೆಲವು  ರೋಗಗಳಿಗೆ ಅಂದರೆ ಪೋಲಿಯೋ, ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ದಡಾರ-ರೂಬೆಲ್ಲಾ ಮೆದುಳು ಜ್ವರ, ಕ್ಕೆ 16 ರಿಂದ 23 ತಿಂಗಳು ಒಳಗೆ ಹೆಚ್ಚುವರಿಯಾಗಿ ಬೂಸ್ಟರ್‌ ಡೋಸ್‌ ರೂಪದಲ್ಲಿ  ನೀಡಲಾಗುವುದು. 5 ರಿಂದ 6 ವರ್ಷದಲ್ಲಿ ಪುನಃ ಗಂಟಲುಮಾರಿ, ನಾಯಿ ಕೆಮ್ಮು, ಧನುರ್ವಾಯು, ರೋಗಿಗಳಿಗೆ ಎರಡನೇಯ ಬಾರಿ ಬೂಸ್ಟರ್‌ ಡೋಸ್‌ ನೀಡಲಾಗುವುದು. ಈ ಹಿನ್ನಲೆಯಲ್ಲಿ ದಯವಿಟ್ಟು ಸಾರ್ವಜನಿಕರು ತಮ್ಮ ಮನೆಗಳ ಹತ್ತಿರ ಲಸಿಕೆ ಹಾಕುವ ಅಂಗನವಾಡಿ ಕೇಂದ್ರಗಳಗಳಲ್ಲಿ ತಪ್ಪದೆ ತೆರಳಿ ಲಸಿಕೆ ಹಾಕಿಸಲು ಮನವಿ ಮಾಡಿದರು. 

ಇತ್ತೀಚಿಗೆ ಶಂಕೀತ ದಡಾರ (ಅಮ್ಮ) ಪ್ರಕರಣಗಳು ಕಂಡುಬರುತ್ತಿದ್ದು, ಮಗುವಿಗೆ ಒಂಬತ್ತು ತಿಂಗಳು ತುಂಬಿದ ನಂತರ ಹಾಗೂ ಒಂದುವರೆ ವರ್ಷ ವಯಸ್ಸಿನ ಅವಧಿಯಲ್ಲಿ ದಡಾರ-ರೂಬೆಲ್ಲಾ ಲಸಿಕೆ ಹಾಕಿಸುವ ಮೂಲಕ ರೋಗ ತಡೆಯಲು ಸಾಧ್ಯವೆಂದು ತಿಳಿಸಿದರು. ಈ ಸಂದರ್ಭದಲ್ಲಿ ಶುಶ್ರೂಷಣಾಧಿಕಾರಿ ಬಳ್ಳಾರೆಪ್ಪ ಕೆ, ಆಶಾಲತಾ, ಮಲ್ಲೇಶ್ವರಿ, ಸುಜಾತಾ, ಶಾಂತವ್ವ, ಸೇರಿದಂತೆ ಸಾರ್ವಜನಿಕ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top