ಬಿಎಸ್ಎಫ್ ಯೋಧ ಸಾವು

ಬಳ್ಳಾರಿ: ಕೊಲ್ಕತ್ತಾದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬಳ್ಳಾರಿಯ ಬಿಎಸ್ಎಫ್ ಯೋಧ  ಕೆ.ರಾಮಕೃಷ್ಣ ಸಾವನ್ನಪ್ಪಿದ್ದಾರೆ.

ಕೊಲ್ಕತ್ತಾದ 145 ಬೆಟಾಲಿಯನ್ ನಲ್ಲಿ ಬಿಎಸ್ ಎಫ್ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ನಿಧನರಾದ ಯೋಧ ಕೆ.ರಾಮಕೃಷ್ಣ ರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಬೆಂಗಳೂರಿನಿಂದ ಬಿಎಸ್ಎಫ್ ವಾಹನದಲ್ಲಿ ಸೈನಿಕನ ಮೃತ ದೇಹ ಬಳ್ಳಾರಿಗೆ ತರಲಾಗಿದ್ದು, ನಗರದ ಎಂಜಿಯಿಂದ ಎಪಿಎಂಸಿ ಸೇರಿದಂತೆ ನಗರದ ಪ್ರಮುಖ ಬೀದಿಯಲ್ಲಿ ಮೃತ ದೇಹದ ಮೆರವಣಿಗೆ ಮಾಡಲಾಯಿತು. ಈ ವೇಳೆ  ಸಾರ್ವಜಿನಿಕರು ಜೈಕಾರ ಕೂಗಿದರು. ಎಪಿಎಂಸಿ ಮಾರ್ಕೆಟ್ ಹತ್ತಿರ ಇರುವ ನಿವಾಸಕ್ಕೆ ಮೃತ ದೇಹವನ್ನ ಕೊಂಡೊಯ್ಯಲಾಗುವುದು ಹಾಗೂ ಬಳ್ಳಾರಿ ನಗರದಲ್ಲಿ ಸರಕಾರಿ ಗೌರವದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುವುದು ಎಂದು ತಿಳಿದುಬಂದಿದೆ.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top