ಶಿಕ್ಷಣದ ಸ್ಥಿತಿ ಅದೋಗತಿಗೆ ತಲುಪಿದೆ  ಸರ್ಕಾರದ ವಿರುದ್ಧ ಎನ್ ರವಿಕುಮಾರ್ ಗುಡುಗು

ಬಳ್ಳಾರಿ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರವು ಶಿಕ್ಷಣದ ಗುಣಮಟ್ಟ ಸುಧಾರಣೆಗೆ ನ್ಯಾಯಪೈಸೆಯಷ್ಟು ಕಾಳಜಿ ಇಲ್ಲವಾಗಿದೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಫಲಿತಾಂಶ ಕಳೆದ ಬಾರಿಗೆ ಹೋಲಿಸಿದರೆ ಶೇಕಡ 33% ರಷ್ಟು ಕುಸಿತ ಕಂಡಿದೆ ಪ್ರಶ್ನೆ ಪತ್ರಿಕೆಯಲ್ಲಿ ಶೇಕಡ 50ರಷ್ಟು ಔಟ್ ಆಫ್ ಸಿಲಬಸ್ ಪ್ರಶ್ನೆಗಳನ್ನೇ ನೀಡಲಾಗಿದೆ ಶಿಕ್ಷಣದ ಬಗ್ಗೆ ಯಾವುದೇ ಕಳಕಳಿ ಕಾಳಜಿಗಳಿಲ್ಲದ ಅತ್ಯಂತ ಜೋಬದ್ರಗೆಡಿ ಸರ್ಕಾರ ಇದಾಗಿದೆ ಎಂದು ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್ ರವಿಕುಮಾರ್ ಟಿಕೆಸಿದ್ದಾರೆ. 

ಬಳ್ಳಾರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಶಿಕ್ಷಣದ ಸ್ಥಿತಿ ಅದೋಗತಿಗೆ ತಲುಪಿದೆ ಕಳೆದ ಬಾರಿಗಿಂತ ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ 33% ಶಿಕ್ಷಣದ ಗುಣಮಟ್ಟದ ಕುಸಿತಕ್ಕೆ ಸಿಎಂ ಮತ್ತು ಶಿಕ್ಷಣ ಸಚಿವರೆ ಕಾರಣರಾಗಿದ್ದಾರೆ ಮಧು ಬಂಗಾರಪ್ಪನವರಂತವರಿಗೆ ಪ್ರಮುಖ ಶಿಕ್ಷಣ ಖಾತೆಯನ್ನು ಏತಕ್ಕಾಗಿ ನೀಡಿದ್ದಾರೆ ರಾಜ್ಯದಲ್ಲಿ ಇವರ ಕೈಗಳಿಂದ ಶಿಕ್ಷಣವನ್ನು ಆ ದೇವರೇ ಕಾಪಾಡಬೇಕು ಎಂದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ಹೇಳುತ್ತಿರುವುದು ಸುಳ್ಳು ಈ ಭಾಗದಲ್ಲಿ 17796 ಶಿಕ್ಷಕರುಗಳ ಕೊರತೆ ಇದೆ ಅದು ಅಲ್ಲದೆ 6,000 ಶಿಕ್ಷಕರು ವರ್ಗಾವಣೆ ಮಾಡಿಸಿಕೊಂಡು ಹೋಗಿದ್ದಾರೆ ಇದರ ಪರಿಣಾಮ ಮಕ್ಕಳ ಕಲಿಕೆಯ ಮೇಲೆ ವಿದ್ಯಾಭ್ಯಾಸದ ಮೇಲೆ ಬೀಳುತ್ತದೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ಕುಸಿತ ಕಂಡಿದ್ದ ಶಿಕ್ಷಣದ ಅಭಿವೃದ್ಧಿ ಹಾಗೂ ಸುಧಾರಣೆಯ ಬಗ್ಗೆ ನಯಾ ಪೈಸೆ ಎಷ್ಟು ಕಳಕಳಿ ಇಲ್ಲದ ಅತ್ಯಂತ ಬೇಜವಾಬ್ದಾರಿ ಸರ್ಕಾರ ಎಂದು ರವಿಕುಮಾರ್ ವಾಗ್ದಾಳಿ ನಡೆಸಿದರು.

ಎಸ್ ಎಸ್ ಎಲ್ ಸಿ ಗೆ ಈ ಹಿಂದೆ ಎರಡು ಪರೀಕ್ಷೆಗಳಿದ್ದುದನ್ನು ಕಾಂಗ್ರೆಸ್ ಸರ್ಕಾರ ಮೂರು ಪರೀಕ್ಷೆ ಪದ್ಧತಿ ಜಾರಿಗೆ ತಂದಿದೆ ಮೂರು ಪರೀಕ್ಷೆ ಮಾಡುವಂತೆ ಇವರಿಗೆ ಹೇಳಿದವರು ಯಾರು?  ಪರೀಕ್ಷೆಗಳನ್ನು ಹೆಚ್ಚಿಗೆ ನಡೆಸುವುದೇ ಸಾಧನೆಯಲ್ಲ ರಾಜ್ಯದಲ್ಲಿ 45,000ಕ್ಕೂ ಹೆಚ್ಚಿನ ಶಾಲಾ ತರಗತಿಗಳ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿದೆ ಕ್ಲಾಸ್ ರೂಂಗಳ ಸುಸ್ಥಿತಿಗೆ ಈ ಸರ್ಕಾರದ ಗ್ಯಾರಂಟಿ ಏನು? ಪಿಯುಸಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ತಯಾರಿಸಿದವರು ನೀಡಿದ್ದಾರೆ ಇದನ್ನು ಸಿದ್ದಪಡಿಸಿದ್ದಾರೆ ನೋಡಿದವರು ಯಾರು ಕೃಪಾಂಕ 20 ನೀಡುವ ನಿರ್ಧಾರ ಕೈಗೊಂಡು ಪಾಸ್ ಮಾಡಲಾಗಿದೆ ಶಿಕ್ಷಣದ ಗುಣಮಟ್ಟ ಕುಸಿತಕ್ಕೆ ಸಿಎಂ,ಸಚಿವ ಮಧು ಬಂಗಾರಪ್ಪನವರ ಬೇಜವಾಬ್ದಾರಿಗಳೇ ಕಾರಣ ಎಂದು ಆರೋಪಿಸಿದರು.

ಕನ್ನಡಬಾರದಿದ್ದರೆ ರಾಜೀನಾಮೆ ನೀಡಲಿ:

ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಮಾತನಾಡುತ್ತಾ ತಮಗೆ ಕನ್ನಡ ಮಾತನಾಡಲು ಸರಿಯಾಗಿ ಬರುವುದಿಲ್ಲ ಎಂದು ಹೇಳಿರುವುದು ನಾಚಿಕೆಗೇಡಿನ ಸಂಗತಿ ಕನ್ನಡ ಬರುವುದಿಲ್ಲ ಎಂದಾದರೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ರವಿಕುಮಾರ್ ಅಗ್ರಹಿಸಿದರು.

ಇವರು ಶಿಕ್ಷಣ ಸಚಿವರಾದ ಮೇಲೆ ಪಠ್ಯಅಂಶ ಬದಲಾವಣೆ ಮಾಡಿದ್ದಾರೆ ಪಠ್ಯಂಷ ಬದಲಾವಣೆ ಮಾಡಿದ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ನೀಡಲಿಲ್ಲ ಕೆಲವು ಪುಸ್ತಕಗಳನ್ನು ಶಿಕ್ಷಕರಿಗೆ ಮಾತ್ರ ನೀಡಿ ಪಾಠ ಮಾಡಲು ಹೇಳಿದ್ದಾರೆ ಟೆಕ್ಸ್ಟ್ ಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡಲು ಇವರಿಗೆ ಸಾಧ್ಯವಾಗಲಿಲ್ಲ ಎಂದು ಟೀಕಿಸಿದರು

ಅನುದಾನಿತ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯು ನಡೆಯುತ್ತಿಲ್ಲ ಕಾಯಂ ಸಿಬ್ಬಂದಿಗಳಿಲ್ಲದೆ ಶಿಕ್ಷಣದ ಗುಣಮಟ್ಟ ಈ ಬಗ್ಗೆಯೂ ಸರ್ಕಾರಕ್ಕೆ ಕಾಳಜಿಯ ಇಲ್ಲವಾಗಿದೆ ಎಂದರು.

ರಾಜ್ಯ ಸರ್ಕಾರ ನೌಕರರಿಗೆ ಏಳನೇ ವೇತನ ಆಯೋಗ ಸಮರ್ಪಕವಾಗಿ ಜಾರಿ ಮಾಡಲಾಗಿಲ್ಲ ಶೇಕಡ 27 ರಷ್ಟು ವೇತನ ಹೆಚ್ಚಳ ಮಾಡಬೇಕಾಗಿತ್ತು. ಈ ಹಿಂದಿನ ಬಸವರಾಜ ಬೊಮ್ಮಾಯಿ ಸರ್ಕಾರವು 17ರಷ್ಟು ಸಂಬಳ ನೀಡುತ್ತಾ ಬಂದಿದೆ ಸಿಎಂ ಸಿದ್ದರಾಮಯ್ಯನವರು ತಮ್ಮ ಸರ್ಕಾರದ ಖಜಾನೆ ಖಾಲಿಯಾಗಿಲ್ಲ ಎನ್ನುತ್ತಾರೆ ಹಾಗಾದರೆ ಸರ್ಕಾರಿ ನೌಕರಿಗೆ ಹತ್ತರಷ್ಟು ಹೆಚ್ಚಿನ ಸಂಬಳ ಕೊಡುತ್ತಿಲ್ಲವೇಕೆ ಎಂದು ರವಿಕುಮಾರ್ ಪ್ರಶ್ನಿಸಿದರು.

ಈಶ್ವರಪ್ಪ ಬಿಜೆಪಿ ಸೇರುತ್ತಾರೆ:

ಮಾಜಿ ಡಿಸಿಎಂ, ಹಿರಿಯ ಧುರಿಣ ಕೆಎಸ್ ಈಶ್ವರಪ್ಪನವರು ಮತ್ತೆ ಬಿಜೆಪಿ ಸೇರಿಕೊಳ್ಳುತ್ತಾರೆ ಪುನಃ ಅವರನ್ನು ಪಕ್ಷಕ್ಕೆ ಕರೆತರಲಾಗುತ್ತದೆಯೇ? ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರವಿಕುಮಾರ್ ಅವರು ಈ ಬಗ್ಗೆ ಪಕ್ಷದ ರಾಜ ಪಕ್ಷದ ರಾಜ್ಯ ಕೇಂದ್ರ ನಾಯಕರು ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು. ಮಾಜಿ ಶಾಸಕ ಜಿ ಸೋಮಶೇಖರ ರೆಡ್ಡಿ, ಎಂಎಲ್ಸಿ ಚುನಾವಣೆಯ ಬಿಜೆಪಿ ಅಭ್ಯರ್ಥಿ ಅಮರನಾಥ್ ಪಾಟೀಲ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಅನಿಲ್ ನಾಯ್ಡು, ಹಿರಿಯಧುರೀಣ  ಗುರುಲಿಂಗನಗೌಡ, ಹೆಚ್ ಹನುಮಂತಪ್ಪ ಮತ್ತೆತರರೂ ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top