ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹುಟ್ಟು ಹಬ್ಬ: ಕೆಪಿಸಿಸಿ ರಾಜ್ಯ ಸಂಯೋಜಕರು ಪ್ರಚಾರ ಸಮಿತಿ ಯಿಂದ ವಿಶೇಷ ಪೂಜೆ  

ಬಳ್ಳಾರಿ: ವೆಂಕಟೇಶ್ ಹೆಗಡೆ, ವಕೀಲರು ಕೆಪಿಸಿಸಿ ರಾಜ್ಯ ಸಂಯೋಜಕರು ಪ್ರಚಾರ ಸಮಿತಿ ಹಾಗೂ ಕೆಪಿಸಿಸಿ ರಾಜ್ಯ ಮಾಧ್ಯಮ ವಕ್ತಾರರು ರವರ ನೇತೃತ್ವದಲ್ಲಿ ಮಾನ್ಯ ಕೆಪಿಸಿಸಿಯ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ರವರ ಹುಟ್ಟು ಹಬ್ಬವನ್ನು ಬಳ್ಳಾರಿಯ ಆರಾಧ್ಯ ದೈವ ತಾಯಿ ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಮತ್ತು ಕುಂಕುಮಾರ್ಚನೆ ಮಾಡಿಸುವುದರ ಮೂಲಕ ಅವರಿಗೆ ಆರೋಗ್ಯ, ಮತ್ತು ಶಕ್ತಿಯನ್ನು ಕರುಣಿಸಿ ಹಾಗೂ ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿಗಳಾಗಿ ಸೇವೆ ಮಾಡಲಿಕ್ಕೆ ಆಶೀರ್ವಾದವನ್ನು ತಾಯಿ ಕನಕ ದುರ್ಗಮ್ಮ ಮಾಡಲಿ ಎಂದು ಬೇಡಿ ಕೊಂಡರು.

ನಂತರ ದೇವಸ್ಥಾನದ ಆವರಣದಲ್ಲಿ ಕೇಕ್ ಅನ್ನು ಕಟ್ ಮಾಡುವುದರ ಮೂಲಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಸಂಯೋಜಕರಾದ ವೆಂಕಟೇಶ್ ಹೆಗಡೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಜೆ.ಎಸ್.ಆಂಜನೇಯಲು,  ಕೆಪಿಸಿಸಿ ಸದಸ್ಯರಾದ ಕಲ್ಲುಕಂಭ ಪಂಪಾಪತಿ, ಮಹಾನಗರ ಪಾಲಿಕೆ ಪರಾಜಿತ ಅಭ್ಯರ್ಥಿ ವೀರೇಂದ್ರ ಕುಮಾರ್, ಬಳ್ಳಾರಿ ನಗರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷರಾದ ಭೋಯಾಪಾಟಿ ವಿಷ್ಣು, ಎಸ್.ಸಿ ವಿಭಾಗದ ಅಧ್ಯಕ್ಷರಾದ ಎನ್.ವಿ.ಯರಕುಲ ಸ್ವಾಮಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಸ್.ಮಂಜುಳಾ, ಮಾಜಿ ಮೇಯರ್ ರಾಜೇಶ್ವರಿ ಸುಬ್ಬಾರಾಯುಡು, ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಜ್ಯೋತಿ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿಣಿ ಸಮಿತಿಯ ಸದಸ್ಯರಾದ ವೆಂಕಟಲಕ್ಷ್ಮಿ ನಾರಾಯಣ, ಡಿ.ಕೆ.ಶಿವಕುಮಾರ್ ಅಭಿಮಾನ ಬಳಗದ ಜಿಲ್ಲಾಧ್ಯಕ್ಷರಾದ ಸಂತೋಷ್ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಖಾಂಡ್ರ ಸತೀಶ್, ಶಕೀಲ್ ಅಹ್ಮದ್, ಆನಂದ್, ಬಾಬು, ಎರ್ರಿಸ್ವಾಮಿ ಹೆಗಡೆ, ಅನಿಲ್ ಕುಮಾರ್, ಸಿ.ಅತ್ತಾಉಲ್ಲಾ, ರಾಜ, ಪೆನ್ನಯ್ಯ, ಲಿಂಗರಾಜ್, ರಾಬಿನ್, ಪರಶುರಾಮ್, ಶ್ರೀಕಾಂತ್, ಮಲ್ಲಿಕಾರ್ಜುನ, ತಿಮ್ಮಪ್ಪ, ಜುಬೇರ್, ಸಂಜಯ್, ರಾಜ, ಶಬ್ಬೀರ್, ಮಹಿಳಾ ಮುಖಂಡರಾದ ರಿಹಾನ, ರೋಹಿಣಿ, ಮಲ್ಲಮ್ಮ, ಹಸೀನಾ ಹಾಗೂ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಮತ್ತು ಯುವ ಕಾರ್ಯಕರ್ತರು ಉಪಸ್ಥಿತರಿದ್ದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top