ಮಹಿಳೆಯರಿಗೆ ಶೂನ್ಯ ಸುರಕ್ಷತೆ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ: ಜ್ಯೋತಿ ಪ್ರಕಾಶ್

ಬಳ್ಳಾರಿ: ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗೆ ಶೂನ್ಯ ಸುರಕ್ಷತೆ ಗ್ಯಾರಂಟಿ ಕೊಟ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ಸುವ್ಯವಸ್ಥೆ ಕಾನೂನು ಪಾಲನೆ ಮಾಡುವಲ್ಲಿ ವಿಫಲವಾದ ಬಗ್ಗೆ ಕ್ರಮಕ್ಕಾಗಿ ಒತ್ತಾಯಿಸಿ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ  ನಗರ ಭಾರತೀಯ ಜನತಾ ಪಾರ್ಟಿ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಜ್ಯೋತಿ ಪ್ರಕಾಶ್ ಹಾಗೂ ಮಹಿಳೆಯರು ಸೇರಿ ಮನವಿ ಮಾಡಿದರು.

ರಾಜ್ಯ ಕಾಂಗ್ರೆಸ್ ಸರ್ಕಾರವು ಮಹಿಳೆಯರಿಗೆ ಶೂನ್ಯ ಸುರಕ್ಷತೆ ಗ್ಯಾರಂಟಿ ಎಂಬ ಹೊಸ ಯೋಜನೆ ಜಾರಿಗೊಳಿಸಿದೆ. ಇದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಮೇಲೆ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಮಹಿಳೆಯರ ನೆಮ್ಮದಿಯಿಂದ ಬದಕಲು ದುಸ್ತರವಾಗಿದೆ. ಏಪ್ರಿಲ್ 18 ರಂದು ಕುಮಾರಿ ನೇಪಾ ಹಿರೇಮಲ್ ಕೊಲೆಯಾಗಿದ್ದು, ಮೇ 15ರಂದು ಕುಮಾರಿ ಅಂಜಲಿ ಕೊಲೆಯಾಗಿದೆ. ಮತ್ತು ಇಂದು ಇನ್ಯಾರೋ ಎನ್ನುವಂತಾಗಿದೆ. ಪೋಲೀಸರ ಭಯವಿಲ್ಲದೇ ದಿನವೂ ಕೊಲೆ, ಸುಲಿಗೆ ಮತ್ತು ಅತ್ಯಾಚಾರ ಮುಂತಾದವು ನಡೆಯುತ್ತಿವೆ. ಕೆಲಸಕ್ಕೆ, ಕಾಲೇಜಿಗೆ ಹೋದಂತಹ ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆಗೆ ಬರುತ್ತಾರೆಂಬ ನಂಬಿಕೆ ಇಲ್ಲದೇ ಪೋಷಕರು ಭಯದಿಂದ ಬದುಕುವಂತಾಗಿದೆ.

2023ರ ಡಿಸೆಂಬರ್ 23 ರಂದು ಬೆಳಗಾವಿಯ ವೆಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣ, ರಾಣೇಬೆನ್ನೂರಿನ ಅರೆಮಲ್ಲಾಪುರದಲ್ಲಿ ಯುವತಿ ಜೋತೆ ಮಗ ಓಡಿ ಹೋಗಿದ್ದಾನೆಂದು 50 ವರ್ಷದ ಮಹಿಳೆಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ವಿವಸ್ತ್ರಗೊಳಿಸಿದ ಪ್ರಕರಣ, ಹಾವೇರಿಯಲ್ಲಿ ಏಳು ಮಂದಿ ಮುಸ್ಲಿಂ ಪುರುಷರಿಂದ ಸಾಮೂಹಿಕ ಅತ್ಯಾಚಾರ,  ಏಪ್ರಿಲ್ 18 ರಂದು ಹುಬ್ಬಳ್ಳಿಯ ಕಾಲೇಜ್ ಕ್ಯಾಂಪಸ್‌ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಮಗಳು ನೇಹಾಳನ್ನು 11 ಬಾರಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವುದು, ಮೇ 09 2024 ಎರಡು ಊಡಗಿನ ಸಾಲಗೊತ್ತಿ ಗ್ರಾಮದಲ್ಲಿ ಮೀನಾಳ ರುಂಡವನ್ನು ಕತ್ತರಿಸಿದ ಪ್ರಕಾಶ್ ಎಂಬ ದುರುಳ, ಮೇ 15 2024 ರಂದು ಹುಬ್ಬಳ್ಳಿಯಲ್ಲಿ 21 ವರ್ಷದ ಕುಮಾರಿ ಅಂಜಲಿ ಅಂಬಿಗೇರ ಎಂಬ ಯುವತಿಯನ್ನು ವಿಶ್ವ ಕೊಲೆ ಮಾಡಿದ್ದಾನೆ. ಹೀಗೆ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಲೆಗಡುಕರ ಸರ್ಕಾರ ಎನ್ನುವಂತಾಗಿದೆ ಹಾಗಾಗಿ ಸ‍ರಕಾರ ಮಹಿಳೆಯರಿಗೆ ಸುರಕ್ಷತೆ ನೀಡುವಂತೆ ಹಾಗೂ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಮನವಿ ಮಾಡಿದರು.

Facebook
Twitter
LinkedIn
Telegram
WhatsApp
Email
Print

Leave a Comment

Your email address will not be published. Required fields are marked *

Translate »
Scroll to Top