ಶ್ರಮ ಸಂಸ್ಕೃತಿಗೆ ಅಂತರಾಷ್ಟ್ರೀಯ ಮನ್ನಣೆ ಗಿನ್ನಿಸ್ ಬುಕ್ ದಾಖಲೆಗೆ ಸೇರಿದ ಲಂಬಾಣಿ ಕಸೂತಿ
ವಿವಿಧ ಬಣ್ಣದ ಹಲವು ಸಣ್ಣ ತುಣುಕುಗಳನ್ನು ದಾರದಿಂದ ಹೊಲಿದು ಜೋಡಿಸಿ, ಅದರ ಮೇಲೆ ಕಸೂತಿ ಮಾಡುವ ಲಂಬಾಣಿ ಮಹಿಳೆಯರ ಕಲೆ, ಶ್ರಮ ಸಂಸ್ಕೃತಿಯ ಪ್ರತೀಕ. ಆದಿ ಕಾಲದ ಮಾನವನ ಸುಪ್ತ ಪ್ರಜ್ಞೆಯಲ್ಲಿ ಅರಳಿದ ಕಲೆಗಳು ಇಂದು ತಂತ್ರಜ್ಞಾನದ ಅತ್ಯುನ್ನತ ಮಟ್ಟ ತಲುಪಿವೆ. ತಾಂತ್ರಿಕ ಕಾಲಘಟ್ಟದಲ್ಲೂ ಲಂಬಾಣಿ ಮಹಿಳೆಯರು ಉಳಿಸಿ ಬೆಳಿಸಿಕೊಂಡು ಬಂದ ಕಸೂತಿ ಕಲೆ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ಸೇರುವ ಕ್ಷಣಕ್ಕೆ ಹಂಪಿಯಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆ ಸಾಕ್ಷಿಯಾಗಿದೆ.