‘ಇಂಪಾಸಿಬಲ್-ಫಾಲ್ ಔಟ್’ ಉತ್ತರ ಭಾಗ ಮತ್ತು ಮಿಷನ್ ಚಿತ್ರವು 2018ರಲ್ಲಿ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ಈಗ ’ಮಿಷನ್ ಇಂಪಾಸಿಬಲ್-ಡೆಡ್ ರೆಕನಿಂಗ್’ ಚಲನಚಿತ್ರ ಸರಣಿಯಲ್ಲಿನ 7ನೇ ಕಂತು ಪ್ಯಾರಮೌಂಟ್ ಪಿಕ್ಚರ‍್ಸ್ ಬ್ಯಾನರ್ ಅಡಿಯಲ್ಲಿ ವಯಕಾಂ 18 ಸ್ಟುಡಿಯೋ ಅರ್ಪಿಸಿರುವ ಸಿನಿಮಾವು ಜುಲೈ 12ರಂದು ವಿಶ್ವದಾದ್ಯಂತ ತೆರೆಗೆ ಬರಲಿದೆ.
“ಸೆಪ್ಟಂಬರ್ 2020ರಲ್ಲಿ ಶುರುವಾದ ಚಿತ್ರೀಕರಣದಲ್ಲಿ ನಾಯಕ ಟಾಮ್‌ಕ್ರೂಸ್ ಅಪಾಯಕಾರಿ ಸಾಹಸ ದೃಶ್ಯಗಳಲ್ಲಿ ನಟಿಸಿದ್ದರು ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ” ಎಂದು ಎಂಐ 6 ಏಜೆಂಟ್ ಪಾತ್ರ ನಿರ್ವಹಿಸಿರುವ ರೆಬೆಕಾ ಫರ್ಗುಸನ್ ಹೇಳುತ್ತಾರೆ.
“ಅದರಲ್ಲೂ ಮೋಟಾರ್‌ಬೈಕ್ ಬೇಸ್ ಜಂಪಿಂಗ್ ಸಾಹಸಗಳಿಗಾಗಿ ವಿಶೇಷವಾದ ಸಂಯೋಜನೆ ಮಾಡಲಾಗಿತ್ತು. ಟಾಮ್‌ಕ್ರೂಸ್ ಅವರೊಂದಿಗೆ ಸತತ ಹದಿನಾರು ವರ್ಷ ಕೆಲಸ ಮಾಡಿದ್ದು ಖುಷಿ ನೀಡಿದೆ. ನಮ್ಮಿಬ್ಬರ ಮಿಲನ ಒಂದು ಡಜನ್ ಚಿತ್ರಗಳಿಗೆ ಸಮಾನ. ಅವರನ್ನು ಬದಲಾವಣೆಯ ಏಜೆಂಟ್ ಆಗಿ ನೋಡಬಯಸುತ್ತೇನೆ. ಅದರಂತೆ ಎಸೈ ಮೊರೇಲ್ಡ್ ಖಳನಾಗಿ ಕಾಣಿಸಿಕೊಂಡಿದ್ದಾರೆಂದು” ನಿರ್ದೇಶಕ ಕ್ರಿಸ್ಟೋಫರ್ ಮೆಕ್ವಾರಿ ಮಾಹಿತಿ ಹಂಚಿಕೊಳ್ಳುತ್ತಾರೆ. ತಾರಾಗಣದಲ್ಲಿ ಹಲೇಅತ್ವೆಲ್, ವಿಂಗ್ ರಾಂಸ್, ಸಿಮೋನ್‌ಪೆಗ್, ವೆನೆಸ್ಸಾ ಕಿರ್ಬಿ, ಹೆನ್ರಿ ಕೇಜರ್‌ನಿ ಮುಂತಾದವರು ನಟಿಸಿದ್ದಾರೆ. ಸಂಗೀತ ಲೋರ್ನ್ ಬಲ್ಫೆ, ಛಾಯಾಗ್ರಹಣ ಫ್ರೆಸರ್‌ಟೆಗ್ರಾಟ್, ಸಂಕಲನ ಎಡ್ಡಿ ಹೆಮಿಲ್‌ಟನ್.