ಮಲೇಶಿಯಾನಲ್ಲಿ ಯಶ್ ಅಭಿಮಾನಿಗಳನ್ನ ನೋಡ್ರಿ, ರಾಯಲ್ ಲುಕ್ ನಲ್ಲಿ ಯಶ್.

ಸ್ಯಾಂಡಲ್ವುಡ್ ನಟ ಯಶ್ ಅವರು ಮಲೇಷ್ಯಾದಲ್ಲಿ ಶೋ ರೂಮ್ ಓಪನಿಂಗ್ಗಾಗಿ ಹೋಗಿದ್ದಾರೆ. ನಟ ಮಲೇಷ್ಯಾಗೆ ಪ್ರಯಾಣಿಸಿದ ಭರ್ಜರಿ ಫೋಟೋಸ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈಗ ನಟ ಬ್ಲೂ ಸೂಟ್ ಧರಿಸಿಕೊಂಡು ಕಾಣಿಸಿಕೊಂಡಿದ್ದು, ನಟನ ಹೇರ್ಸ್ಟೈಲ್, ಗಾಗಲ್ಸ್, ಸ್ಟನ್ನಿಂಗ್ ಲುಕ್ ನೋಡಿ ಅವರ ಫ್ಯಾನ್ಸ್ ಫಿದಾ ಆಗಿದ್ದಾರೆ. ನಟನ ಅಭಿಮಾನಿಗಳು ಅವರ ಫೋಟೊಗಳನ್ನು ವ್ಯಾಪಕವಾಗಿ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ನೀಲಿ ಬಣ್ಣದ ಸೂಟ್ನಲ್ಲಿ ಯಶ್ ಡ್ಯಾಶಿಂಗ್ ಆಗಿ ಕಾಣಿಸಿದ್ದಾರೆ. ನಟನ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಅವರ ಫ್ಯಾನ್ ಪೇಜ್ಗಳು ಶೇರ್ ಮಾಡುತ್ತಿದ್ದು ನೆಟ್ಟಿಗರು ಸೂಪರ್ ರಾಕಿ ಭಾಯ್ ಎಂದು ಕಮೆಂಟ್ಗಳನ್ನು ಹಾಕುತ್ತಿದ್ದಾರೆ. ಫೋಟೋಸ್ ವೈರಲ್ ಆಗಿದೆ. ಯಶ್ ಅವರನ್ನು ನೋಡಲು ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿ ಸೇರಿದ್ದರು. ಜನರು ಮೊಬೈಲ್ ಹಿಡಿದು ರಾಕಿ ಭಾಯ್ ಅವರ ಫೋಟೋ, ವಿಡಿಯೋಗಾಗಿ ಮುಗಿಬೀಳುತ್ತಿರುವುದನ್ನು ನಾವು ಈ ಫೋಟೋಗಳಲ್ಲಿ ಕಾಣಬಹುದು. ಅವರ ಹಿಂದೆ ಅಭಿಮಾನಿಗಳ ದೊಡ್ಡ ಬಳಗವಿತ್ತು.

ಯಶ್ ಅವರು ಶಾರ್ಟ್ಸ್ ಹಾಗೂ ಮ್ಯಾಚಿಂಗ್ ಟೀ ಶರ್ಟ್ ಧರಿಸಿ ಬ್ಲ್ಯಾಕ್ ಗಾಗಲ್ಸ್ ಹಾಕಿದ್ದಾರೆ. ನಟನ ಹೇರ್ಸ್ಟೈಲ್ ಕೂಡಾ ಆಕರ್ಷಕವಾಗಿತ್ತು. ನಟ ಶೂ ಧರಿಸಿದ್ದು ವಿಮಾನದಿಂದ ಕೆಳಗಿಳಿಯುವ ಫೋಟೋ ಕೂಡಾ ಸುಂದರವಾಗಿ ಮೂಡಿಬಂದಿದೆ.ಯಶ್ ಅವರು ತಮ್ಮ ಮೀಸೆ ತಿರುವುತ್ತಾ ಭರ್ಜರಿಯಾಗಿ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋದಲ್ಲಿ ನಟನ ವಾಚ್ ಕೂಡಾ ಕಾಣಬಹುದು. ನಟ ಮಲೇಷ್ಯಾಗೆ ವೆಕೇಷನ್ಗಾಗಿ ಹೋಗಿಲ್ಲ ಬದಲಾಗಿ ಶೋ ರೂಮ್ ಉದ್ಘಾಟನೆಗಾಗಿ ಹೋಗಿದ್ದಾರೆ.

ಸೂಪರ್ ಸ್ಟಾರ್ ಯಶ್ ಮಲೇಷ್ಯಾದಲ್ಲಿರೊ ಎಂ.ಜಿ.ಗೋಲ್ಡ್ ಶೋ ರೂಮ್ ಓಪನ್ ಮಾಡುತ್ತಿದ್ದಾರೆ. ಈ ಒಂದು ಕಾರ್ಯಕ್ರಮ ಜುಲೈ -8 ರಂದು ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ರಾಕಿಂಗ್ ಸ್ಟಾರ್ ಯಶ್ ಮಲೇಷ್ಯಾಗೆ ಪಯಣ ಬೆಳೆಸಿದ್ದಾರೆ.ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲವಿದೆ. ಜನರು ಯಶ್19ಗಾಗಿ ಕಾಯುತ್ತಿದ್ದಾರೆ. ನಟನ ಸಿನಿಮಾ ಅನೌನ್ಸ್ಗಾಗಿ ಕನ್ನಡಿಗರು ಮಾತ್ರವಲ್ಲದೆ ದೇಶಾದ್ಯಂತ ಜನರು ಕಾಯುತ್ತಿದ್ದಾರೆ.

Facebook
Twitter
LinkedIn
Telegram
WhatsApp

Leave a Comment

Your email address will not be published. Required fields are marked *

Translate »
Scroll to Top