ಕೊರಿಯಾ ಓಪನ್ ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ ; ಕರ್ನಾಟಕದ 13 ಕರಾಟೆಪಟುಗಳು ಭಾಗಿ

 ಬೆಂಗಳೂರು: ಕೊರಿಯಾದ ಬುಸಾನ್‌ನ ಗಿಜಾಂಗ್ ಜಿಮ್ನಾಷಿಯಂನಲ್ಲಿ ಕೊರಿಯಾ ಕರಾಟೆ ಡೋ ಫೆಡರೇಶನ್ ಮತ್ತು ಬುಸಾನ್ ಕರಾಟೆ ಡೋ ಫೆಡರೇಶನ್ ಸಹಯೋಗದಲ್ಲಿ ಜೂ 29 ರಿಂದ ಜುಲೈ 3 ರ ವರೆಗೆ ನಡೆಯಲಿರುವ ಕೊರಿಯಾ ಓಪನ್ ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್‌ಶಿಪ್‌ ನಲ್ಲಿ ಭಾಗವಹಿಸಲು ಅಖಿಲ ಭಾರತ ಕರಾಟೆ ಡೋ ಫೆಡರೇಶನ್ ನಡಿ ರಾಜ್ಯದ 13 ಮಂದಿಯ ತಂಡ ಭಾಗವಹಿಸುತ್ತಿದೆ ಎಂದು ಭಾರತ ಕರಾಟೆ ಡೋ ಫೆಡರೇಶನ್ ನ ಉಪಾಧ್ಯಕ್ಷ ರೆನ್ಶಿ ಆರ್ ಗಣೇಶ್  ತಿಳಿಸಿದ್ದಾರೆ.

ಕರ್ನಾಟಕದ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನಿಂದ 13 ಮಂದಿ ಸದಸ್ಯರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ. ಎಐಕೆಎಫ್‌ನ 8ನೇ ಡಾನ್ ಬ್ಲಾಕ್ ಬೆಲ್ಟ್‌ನ ಮಾರ್ಗದರ್ಶನದಲ್ಲಿ ರೆನ್‌ಶಿ ರಾಮನ್ ಗಣೇಶ್, ರೆನ್‌ಶಿ ಸುಬ್ರಮಿಯನ್ ಚಂದ್ರಶೇಖರ್, ರೆನ್‌ಶಿ ಇ.ಎನ್.ರಮ್ಯಾ ಅವರು ವೆಟರನ್ಸ್ ವಿಭಾಗದಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದ್ದಾರೆ.

 

ಪೆನ್ನಸಮುದ್ರ ನರೆಂದ್ರ ಸಮೀಕ್ಷಾ, ಗೋಪಣ್ಣ ಅಮಿಝತಿನಿ, ಅಭಿಜಿತ್ ನಿಶಾಂತ್ ಜೈನ್, ಮನ್ಸೂರ್ ರಯ್ಹಾನ್, ಗುಪ್ತೆ ದಿಯಾ ಅರ್ಜುನ್, ಕೋದಂಡರಾಮನ್ ನಿವೇದಿತ, ಸಾಂಗ್ಲಿಕರ್ ಗಾರ್ಗಿ ಅಮಿತ್, ಮೆನನ್ ಅರ್ಜುನ್ ಪ್ರವಿಣ್ ಶರ್ಮಾ ಪ್ರಿಯಾಂಶಿ ಮತ್ತು ಗುಪ್ತೆ ರೋಶ್ನಿ ಅರ್ಜುನ್ ಅವರು ದೇಶವನ್ನು ಪ್ರತಿನಿಧಿಸುತ್ತಿದ್ದಾರೆ.

ಅಖಿಲ ಭಾರತ ಕರಾಟೆ ಡೋ ಫೆಡರೇಶನ್ 35 ವರ್ಷಗಳಿಂದ ಕರಾಟೆ ತರಬೇತಿ ನೀಡುತ್ತಿದೆ. ಕರಾಟೆಯ ಮಾನ್ಯತೆ ಪಡೆದ ಶೈಲಿಗಳನ್ನು ಒಳಗೊಂಡಿರುವ ರಾಷ್ಟ್ರೀಯ ಸಂಸ್ಥೆಯಲ್ಲಿ 32 ಕ್ಕೂ ಹೆಚ್ಚು ರಾಜ್ಯ ಘಟಕಗಳನ್ನು ಹೊಂದಿದ್ದು, ಫೆಡರೇಶನ್ ಕಳೆದ ಹಲವು ವರ್ಷಗಳಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟಿದೆ.

Facebook
Twitter
LinkedIn
WhatsApp
Telegram
Email

Leave a Comment

Your email address will not be published. Required fields are marked *

Translate »
Scroll to Top