ಟ್ರಾಸ್ಟುಜುಮಾಬ್ ಚಿಕಿತ್ಸೆ(ಔಷಧಿ) ದರ ಕಡಿಮೆ ಮಾಡಿದ ಗ್ಲೆನ್‌ಮಾರ್ಕ್

ಬೆಂಗಳೂರು:  ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್. (ಗ್ಲೆನ್‌ಮಾರ್ಕ್) ಒಂದು ಸಮಗ್ರ, ಸಂಶೋಧನೆ ಆಧರಿತ ಜಾಗತಿಕ ಔಷಧ ತಯಾರಿಕಾ ಕಂಪನಿ, ಇಂದು ಎಚ್ಇಆರ್2-ಪಾಸಿಟಿವ್ ಸ್ತನ ಕ್ಯಾನ್ಸರ್‌ಗಾಗಿ ಇರುವ ಟ್ರಾಸ್ಟುಜುಮಾಬ್ ಔಷಧದ ಬೆಲೆ ಕಡಿತ ಘೋಷಿಸಿದೆ. ಇದನ್ನು ಭಾರತದಲ್ಲಿ ‘ಟ್ರುಮಾಬ್’ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಟ್ರುಮಾಬ್‌ನ 440 ಮಿಲಿ ಗ್ರಾಂ ಬಾಟಲಿಯ ಬೆಲೆ 15,749 ರೂ.ಗೆ ಇಳಿಕೆ ಮಾಡಲಾಗಿದೆ. ಇದು ಪ್ರಸ್ತುತ ದೇಶದಲ್ಲಿ ಅತ್ಯಂತ ಕೈಗೆಟುಕುವ ಬೆಲೆಗೆ ಲಭ್ಯವಿರುವ ಔಷಧ ಆಯ್ಕೆಯಾಗಿದೆ.

ಟ್ರಾಸ್ಟುಜುಮಾಬ್ ಒಂದು ಮೊನೊಕ್ಲೋನಲ್ ಪ್ರತಿಕಾಯ ಔಷಧವಾಗಿದ್ದು, ಇದು ಹಲವು ವರ್ಷಗಳಿಂದ ಎಚ್ಇಆರ್2-ಪಾಸಿಟಿವ್ ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಆಧಾರವಾಗಿದೆ. ಟ್ರಾಸ್ಟುಜುಮಾಬ್ ಔಷಧ ವೆಚ್ಚವು ಭಾರತದಲ್ಲಿ ಅನೇಕ ರೋಗಿಗಳಿಗೆ ಕೈಗೆಟುಕದ ಸರಕಾಗಿದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಟ್ರಾಸ್ಟುಜುಮಾಬ್ ಬ್ರ್ಯಾಂಡ್‌ಗಳು ಪ್ರತಿ 440 ಮಿಲಿ ಗ್ರಾಂ ಬಾಟಲಿ ಬೆಲೆ 40,000-54,000 ರೂ. ನಡುವೆ ಇದೆ. ರೋಗಿಯು ಕನಿಷ್ಠ 18 ಆವರ್ತನಗಳಲ್ಲಿ (12 ತಿಂಗಳು) ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ ಎಂದು ಪರಿಗಣಿಸಿದರೂ, ಆರಂಭಿಕ ಸ್ತನ ಕ್ಯಾನ್ಸರ್‌ ಚಿಕಿತ್ಸೆಯ ಸರಾಸರಿ ವೆಚ್ಚ 4 ಲಕ್ಷದಿಂದ 5 ಲಕ್ಷ ರೂ.ವರೆಗೆ ಇರುತ್ತದೆ. ಮುಂಗಡ/ಮೆಟಾಸ್ಟಾಟಿಕ್‌ಗೆ ಹಂತದ ರೋಗ ಪ್ರಕರಣಗಳಿಗೆ 5 ಲಕ್ಷ ರೂ. ದಾಟಬಹುದು. ಇದು ಅನೇಕ ಸಂದರ್ಭಗಳಲ್ಲಿ ಕುಟುಂಬಗಳಿಗೆ ಹೆಚ್ಚಿನ ಪ್ರಮಾಣದ ಆರ್ಥಿಕ ಹೊರೆಯಾಗಬಹುದು. ವಿಶೇಷವಾಗಿ ಭಾರತದಲ್ಲಿ, ಆರೋಗ್ಯ ರಕ್ಷಣೆಯ ಒಟ್ಟು ವೆಚ್ಚ ಪರಿಗಣಿಸಿದರೆ, ಕ್ಯಾನ್ಸರ್ ಚಿಕಿತ್ಸಾ ವೆಚ್ಚವೇ ಅಂದಾಜು  52% ಆಗುತ್ತಿದೆ.

 

 

ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಭಾರತದ ಫಾರ್ಮುಲೇಶನ್ಸ್‌ ವಿಭಾಗದ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ಅಲೋಕ್ ಮಲಿಕ್ ಪ್ರತಿಕ್ರಿಯೆ ನೀಡಿದ್ದು, “ಪ್ರತಿಯೊಬ್ಬರೂ ತಮ್ಮ ಆರ್ಥಿಕ ಪರಿಸ್ಥಿತಿ ಲೆಕ್ಕಿಸದೆ, ಗ್ಲೆನ್‌ಮಾರ್ಕ್‌ನ ಗುಣಮಟ್ಟದ ಆರೋಗ್ಯ ಸೇವೆಗೆ  ಅರ್ಹರು ಎಂದು ನಾವು ನಂಬುತ್ತೇವೆ. ನಮ್ಮ ಕಂಪನಿಯು ತನ್ನ ಜೀವ ಉಳಿಸುವ ಔಷಧಿ ಟ್ರುಮಾಬ್‌ನ ಬೆಲೆಯನ್ನು ಕಡಿಮೆ ಮಾಡಿರುವ ಕ್ರಮವು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಾಗಿದೆ. ಇದು ಔಷಧ ಲಭ್ಯತೆಯನ್ನು ಹೆಚ್ಚಿಸುವುದಲ್ಲದೆ, ಭಾರತದಲ್ಲಿ ತಾವೇ ಪಾವತಿಸುತ್ತಿರುವ (ಸ್ವಯಂ-ಪಾವತಿ) ಎಚ್ಇಆರ್2-ಪಾಸಿಟಿವ್ ಸ್ತನ ಕ್ಯಾನ್ಸರ್ ರೋಗಿಗಳಲ್ಲಿ 75%ಗಿಂತ ಹೆಚ್ಚಿನ ಭರವಸೆ ತರುತ್ತದೆ ಎಂದರು..

ಎಚ್ಇಆರ್2-ಪಾಸಿಟಿವ್ ಸ್ತನ ಕ್ಯಾನ್ಸರ್:

 

ಎಲ್ಲಾ ಸ್ತನ ಕೋಶಗಳು ಮಾನ ಜಿವಕೋಶದ ಹೊರಪದರ ಬೆಳವಣಿಗೆಯ ಅಂಶ ಗ್ರಾಹಕ 2 ( ಹ್ಯೂಮನ್ ಎಪಿಡರ್ಮಲ್ ಗ್ರೋತ್ ಫ್ಯಾಕ್ಟರ್ ರಿಸೆಪ್ಟರ್) ಅನ್ನು ಹೆಚ್ಚಾಗಿ ಹೊಂದಿವೆ ಮತ್ತು ಅವುಗಳನ್ನು ಪರೀಕ್ಷಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಎಚ್ಇಆರ್2 ಎಂದು ಕರೆಯಲಾಗುತ್ತದೆ. ಎಚ್ಇಆರ್2 ಪ್ರೊಟೀನ್‌ಗಳು ಜೀವಕೋಶಗಳು ಹೇಗೆ ಬೆಳೆಯುತ್ತವೆ ಮತ್ತು ವಿಭಜನೆಯಾಗುತ್ತವೆ ಎಂಬುದನ್ನು ನಿಯಂತ್ರಿಸುವ ಅಂಶ ಗ್ರಾಹಕಗಳಾಗಿವೆ. ಸ್ತನ ಅಂಗಾಂಶವು ಹೆಚ್ಚುವರಿ ಎಚ್ಇಆರ್2 ಗ್ರಾಹಕಗಳನ್ನು ಹೊಂದಿರುವಾಗ (ಅತಿಯಾದ ಒತ್ತಡ), ಸ್ತನ ಕೋಶಗಳನ್ನು ತುಂಬಾ ವೇಗವಾಗಿ ಗುಣಿಸಬಹುದು. ಬೆಳವಣಿಗೆಯು ಅನಿಯಂತ್ರಿತವಾಗಬಹುದು ಮತ್ತು ಗೆಡ್ಡೆಗೆ ಕಾರಣವಾಗಬಹುದು. ಎಚ್ಇಆರ್2-ಪಾಸಿಟಿವ್ ಎಂದು ಗುರುತಿಸಲಾದ ಸ್ತನ ಕ್ಯಾನ್ಸರ್ ವೇಗವಾಗಿ ಬೆಳೆಯುತ್ತದೆ, ಹರಡುತ್ತದೆ (ಮೆಟಾಸ್ಟಾಟಿಕ್ ಸ್ತನ ಕ್ಯಾನ್ಸರ್) ಮತ್ತು ಮರುಕಳಿಸುತ್ತದೆ. ಈ ಪ್ರೋಟೀನ್ ಕ್ಯಾನ್ಸರ್ ಕೋಶಗಳನ್ನು ಬೆಳೆಯಲು ಮತ್ತು ಹರಡಲು ಸಹಾಯ ಮಾಡುತ್ತದೆ. ಟ್ರಾಸ್ಟುಜುಮಾಬ್ ಎಚ್ಇಆರ್2 ಪ್ರೋಟೀನ್‌ಗಳನ್ನು ಬಂಧಿಸುವ ಮೂಲಕ ಮತ್ತು ಅದರ ಚಟುವಟಿಕೆಯನ್ನು ನಿರ್ಬಂಧಿಸುವ ಮೂಲಕ ಕಾರ್ಯ ನಿರ್ವಹಿಸುತ್ತದೆ.

ಭಾರತದಲ್ಲಿ ಎಚ್ಇಆರ್2-ಪಾಸಿಟಿವ್ ಸ್ತನ ಕ್ಯಾನ್ಸರ್ ಹರಡುವಿಕೆ

 

ಗ್ಲೋಬೋಕನ್ 2020 ವರದಿಯ ಪ್ರಕಾರ, ಭಾರತದಲ್ಲಿ ಸ್ತನ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿ ಪತ್ತೆಯಾದ ರೋಗವಾಗಿದೆ. ಇದು ಕ್ಯಾನ್ಸರ್ ನ ಎಲ್ಲಾ ಪ್ರಕರಣಗಳಲ್ಲಿ 13.5% ಪ್ರಮಾಣದಲ್ಲಿದೆ. ಪ್ರತಿ ವರ್ಷ ಅಂದಾಜು 1.78 ಲಕ್ಷ ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ. 5 ವರ್ಷಗಳ ಅವಧಿಯಲ್ಲಿ 4.5 ಲಕ್ಷ ಪ್ರಕರಣಗಳು ಹರಡುವ ಅಂದಾಜಿದೆ ಎಂದು ಗ್ಲೋಬೋಕನ್ 2020 ವರದಿ ಮಾಡಿದೆ. ಭಾರತೀಯ ಜನಸಂಖ್ಯೆಯಲ್ಲಿ ಎಚ್ಇಆರ್2 ಪಾಸಿಟಿವಿಟಿ ಪ್ರಮಾಣವು 26% ಮತ್ತು 50% ನಡುವೆ ಇರುತ್ತದೆ ಎಂದು ಅಂದಾಜಿಸಲಾಗಿದೆ.

Facebook
Twitter
LinkedIn
WhatsApp

Leave a Comment

Your email address will not be published. Required fields are marked *

Translate »
Scroll to Top