mariyammanahalli

ರಾಷ್ಟ್ರಮಟ್ಟದ ಕರಾಟೆಯಲ್ಲಿ ಮರಿಯಮ್ಮನಹಳ್ಳಿ ಗೆ ಪ್ರಥಮ ಸ್ಥಾನ

ಮರಿಯಮ್ಮನಹಳ್ಳಿ: ಇತ್ತೀಚೆಗೆ ತುಮಕೂರಿನಲ್ಲಿ ನಡೆದ 5ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಷಿಪ್‍ನಲ್ಲಿ ಮರಿಯಮ್ಮನಹಳ್ಳಿಯ ಶೋಟೊಕನ್ ಕರಾಟೆ ಪಟುಗಳು ವಿಜೇತರಾಗಿದ್ದು 3 ಪ್ರಥಮ, 2 ದ್ವಿತಿಯ ಹಾಗೂ 12 ತೃತೀಯ ಸ್ಥಾನ ಪಡೆಯುವ ಮೂಲಕ  ಕೀರ್ತಿತಂದಿದ್ದಾರೆ ಎಂದು ಮರಿಯಮ್ಮನಹಳ್ಳಿಯ ಹಿರಿಯ ಕರಾಟೆ ತರಬೇತಿದಾರರಾದ ಗೌಳೇರ ನಾಗರಾಜ್ ತಿಳಿಸಿದ್ದಾರೆ. ವೈಟ್ ಬೆಲ್ಟ್‍ನ  ಕರಾಟೆ ಪಟುಗಳಾದ ಜಶ್ವಂತ್ ಫೈಟಿಂಗ್ ವಿಭಾಗದಲ್ಲಿ ಪ್ರಥಮ, ಕಟಾ ತೃತೀಯ ಸ್ಥಾನ, ನೀರಜ್ ಫೈಟಿಂಗ್‍ನಲ್ಲಿ ದ್ವಿತಿಯಾ, ಕಟಾದಲ್ಲಿ ತೃತೀಯ ಸ್ಥಾನ, ನವಾಜ್ ಫೈಟಿಂಗ್‍ನಲ್ಲಿ ದ್ವಿತಿಯಾ, ಕಟಾದಲ್ಲಿ ಪ್ರಥಮ ಸ್ಥಾನ. …

ರಾಷ್ಟ್ರಮಟ್ಟದ ಕರಾಟೆಯಲ್ಲಿ ಮರಿಯಮ್ಮನಹಳ್ಳಿ ಗೆ ಪ್ರಥಮ ಸ್ಥಾನ Read More »

ಶ್ರೀ ಹನುಮನಂತೆ ಭಕ್ತಿ, ಶ್ರದ್ಧೆ, ನಿಷ್ಠೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಿಎ.ಗಾಳೆಪ್ಪ

ಮರಿಯಮ್ಮನಹಳ್ಳಿ: ಶ್ರೀ ರಾಮ ಭಕ್ತ ಶ್ರೀ ಹನುಮನಂತೆ ಭಕ್ತಿ, ಶ್ರದ್ಧೆ, ನಿಷ್ಠೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತೃಭೂಮಿ ಸ್ವರ್ಗ ಸುಖ ವಾಗುವುದು ಎಂದು ಮಾಜಿ ಗ್ರಾಮಪಂಚಾಯತಿ ಅಧ್ಯಕ್ಷ ಸಿಎ.ಗಾಳೆಪ್ಪ ಹೇಳಿದರು.  ಅವರು ಶನಿವಾರ ಸಂಜೆ ಪಟ್ಟಣ ಸಮೀಪದ ಗಾಳೆಮ್ಮನ ಗುಡಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ  ಕಾರ್ತಿಕ ದೀಪೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಹನುಮನಿಗೆ ದೀಪ ಬೆಳಗಿಸಿ ಮಾತನಾಡಿದರು.  ದೇವಾಲಯಗಳು ಸಮಸ್ತ ಹಿಂದೂಗಳ ಶಕ್ತಿಯಲ್ಲದೆ ಅಲ್ಲಿ ನಾವು ಧ್ಯಾನ, ಮೌನ, ಪ್ರಾರ್ಥನೆಗಳನ್ನು ಸಲ್ಲಿಸುವದರಿಂದ ಮಹಾ ಮಾನವತೆ ಗುಣಗಳನ್ನು ಸಂಪಾದಿಸಿ ಸಂಸ್ಕಾರವಂತರಾಗುತ್ತೇವೆ …

ಶ್ರೀ ಹನುಮನಂತೆ ಭಕ್ತಿ, ಶ್ರದ್ಧೆ, ನಿಷ್ಠೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಸಿಎ.ಗಾಳೆಪ್ಪ Read More »

ಪಟ್ಟಣದಲ್ಲಿ ಕಸ ಎತ್ತುವ ವಾಹನ ಮನೆ, ಮನೆ ಬಾಗಿಲಿಗೆ

ಮರಿಯಮ್ಮನಹಳ್ಳಿ: ಕಸ ಎತ್ತುವ ವಾಹನಗಳಿಂದ ಮನೆ ಮನೆಗೆ ತೆರಳಿ ತ್ಯಾಜ್ಯ ಸಂಗ್ರಹಿಸಲಾಗುವುದು. ಪಟ್ಟಣವನ್ನು ಸ್ವಚ್ಛವಾಗಿಡುವುದು ಇದರ ಉದ್ದೇಶ ಎಂದು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಸಿ.ಫಕ್ರುದ್ದೀನ್ ಸಾಬ್ ಹೇಳಿದರು. ಅವರು ಕಳೆದ 4 ದಿನಗಳಿಂದ ವಾರ್ಡುಗಳಿನ ನಿವಾಸಿಗಳಿಗೆ ತಮ್ಮ ಸುತ್ತ, ಮುತ್ತಲಿನ ಪ್ರದೇಶವನ್ನು ಸ್ವಚ್ಛತೆಯಿಂದ ಕಾಪಾಡಿಕೊಂಡು ಆರೋಗ್ಯವಾಗಿರಬೇಕೆಂದು ಸಲಹೆ ಮಾಡಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಿದರು.      ಮನೆ–ಮನೆಯಿಂದ ಕಸ ಸಂಗ್ರಹಿಸುವ ಯೋಜನೆಯ ಭಾಗವಾಗಿ ಘನತ್ಯಾಜ್ಯ ವಿಲೇವಾರಿಗಾಗಿ ಪಟ್ಟಣ ಪಂಚಾಯತಿಯಿಂದ ನೂತನ 4 ವಾಹನಗಳಲ್ಲಿ ಪ್ರತಿ ಮನೆ- ಮನೆ ಬಾಗಿಲಿಗೆ ಹಸಿಕಸ – …

ಪಟ್ಟಣದಲ್ಲಿ ಕಸ ಎತ್ತುವ ವಾಹನ ಮನೆ, ಮನೆ ಬಾಗಿಲಿಗೆ Read More »

ಬಡವರಿಗೆ ಮನೆಗಳನ್ನು ನೀಡದ ಸರ್ಕಾರ ಪಾಪದ ಬಿಜೆಪಿ ಸರ್ಕಾರ

ಮರಿಯಮ್ಮನಹಳ್ಳಿ: ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ರವರಿಗೆ ಕಾಂಗ್ರೆಸ್ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮನಾಯ್ಕ ರವರು ಕಿಡಿಕಾರಿದರು. ಅವರು ಪಟ್ಟಣ ಸಮೀಪದ  ಡಣಾಪುರ ಗ್ರಾಮದಲ್ಲಿ, ಡಣಾಪುರ ಗ್ರಾಮಪಂಚಾಯತಿ ಸದಸ್ಯರ ಸಭೆಯಲ್ಲಿ, ವಿಧಾನ ಪರಿಷತ್ ಚುನಾವಣಾ ಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯರವರ ಪರ ಮತ್ತು ಯಾಚನೆ ಮಾಡಿ  ಮಾತನಾಡಿದರು. ಕೆ.ಸಿ.ಕೊಂಡಯ್ಯರವರು ಪಕ್ಷಾತೀತ ವ್ಯಕ್ತಿಯಾಗಿದ್ದಾರೆ. ಅವರನ್ನು ಚುನಾಯಿತ ಸದಸ್ಯರಾದ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿ, ಪುರಸಭೆಯ  ಸದಸ್ಯರು ಕೊಂಡಯ್ಯರವರಿಗೆ ತಮ್ಮ ಮತವನ್ನು ಹಾಕಿ ಜಯಶೀಲರಾಗಿ ಮಾಡಬೇಕು …

ಬಡವರಿಗೆ ಮನೆಗಳನ್ನು ನೀಡದ ಸರ್ಕಾರ ಪಾಪದ ಬಿಜೆಪಿ ಸರ್ಕಾರ Read More »

ಪ್ರತಿಜ್ಞಾವಿಧಿ ಸ್ವೀಕರಿಸಿದ ವಿದ್ಯಾರ್ಥಿಗಳು

ಮರಿಯಮ್ಮನಹಳ್ಳಿ: ಪಟ್ಟಣದ ಪ್ರಿಯದರ್ಶಿನಿ ಸ್ವತಂತ್ರ ಪ.ಪೂ.ಕಾಲೇಜಿನಲ್ಲಿ ಶುಕ್ರವಾರ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಭಾರತ ಸಂವಿಧಾನದ ಕುರಿತು ವಿದ್ಯಾರ್ಥಿಗಳಿಂದ ಭಾಷಣ  ಹಾಗೂ ಸಂವಿಧಾನದ ವಿಷಯಗಳನ್ನಾಧಾರಿತ 4 ಸುತ್ತಿನ ರಸಪ್ರಶ್ನೆಗಳ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ರಾಣಿ ಅಬ್ಬಕ್ಕ ತಂಡ ಪ್ರಥಮ ಸ್ಥಾನ ಗಳಿಸಿ, ಝಾನ್ಸಿರಾಣಿ ಲಕ್ಷ್ಮಿಬಾಯಿ ತಂಡ ದ್ವಿತೀಯ ಸ್ಥಾನ ಪಡೆಯಿತು. ರಸಪ್ರಶ್ನೆ ಕಾರ್ಯಕ್ರಮವನ್ನು ಕನ್ನಡ ಉಪನ್ಯಾಸಕ ಸೋಮಪ್ಪ ಹಾಗೂ ರಾಜ್ಯಶಾಸ್ತ್ರ ಉಪನ್ಯಾಸಕ ಮಲ್ಲಯ್ಯ ನಡೆಸಿಕೊಟ್ಟರು. ಇದಕ್ಕೂ ಮುನ್ನ ಸಂವಿಧಾನದ ಪ್ರಸ್ಥಾವನೆಯ ಪ್ರತಿಜ್ಞಾವಿಧಿಯನ್ನು ಎನ್‌ಎಸ್‌ಎಸ್‌ ಕಾರ್ಯಕ್ರಮಾಧಿಕಾರಿ ಪಿ.ರಾಮಚಂದ್ರ ಬೋಧಿಸಿ …

ಪ್ರತಿಜ್ಞಾವಿಧಿ ಸ್ವೀಕರಿಸಿದ ವಿದ್ಯಾರ್ಥಿಗಳು Read More »

ಎಸ್ಟಿ ಮೀಸಲಾತಿಯಲ್ಲಿ ಮಾತು ತಪ್ಪಿದ ಬಿಜೆಪಿ ಸರ್ಕಾರ

ಮರಿಯಮ್ಮನಹಳ್ಳಿ: ವಾಲ್ಮೀಕಿ ಸಮುದಾಯಕ್ಕೆ 7.5 ಮೀಸಲಾತಿ ಪಡೆಯವುಕ್ಕಾಗಿ ಎಲ್ಲಾರು ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ ಎಂದು  ರಾಜನಹಳ್ಳಿಯ ವಾಲ್ಮೀಕಿಯ ಗುರುಪೀಠದ ಶ್ರೀಪ್ರಸನ್ನಾನಂದ ಸ್ವಾಮಿಜಿ ರವರು ಹೇಳಿದರು.ಅವರು ಗುರುವಾರ ಪಟ್ಟಣದ 9ನೇ ವಾರ್ಡಿನ ವಾಲ್ಮೀಕಿ ಸಮುದಾಯ ಭವನದಲ್ಲಿ ವಾಲ್ಮೀಕಿ ಜಾತ್ರ ಮೋಹತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ಇಡೀ ನಮ್ಮ ರಾಜ್ಯದಲ್ಲಿ ವಾಲ್ಮೀಕಿ ಸಮುದಾಯ 70 ರಿಂದ 80 ಲಕ್ಷ ಸರಿ ಸುಮಾರು ಜನ ಸಂಖ್ಯೆಯನ್ನು ಹೊಂದಿದೆ. ಇಷ್ಟೊಂದು ದೊಡ್ಡ ಮಟ್ಟದ ಸಮುದಾಯವನ್ನು ರಾಜಕಾರಣಿಗಳು ತಮ್ಮ ಓಟ್ ಬ್ಯಾಂಕ್ ರಾಜಕರಾಣಕ್ಕೆ …

ಎಸ್ಟಿ ಮೀಸಲಾತಿಯಲ್ಲಿ ಮಾತು ತಪ್ಪಿದ ಬಿಜೆಪಿ ಸರ್ಕಾರ Read More »

ಕ್ಯಾಂಟರ್ ಗಾಡಿ ಪಲ್ಟಿ

ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಗಾಳೆಮ್ಮನಗುಡಿ ಹತ್ತಿರ ಕ್ಯಾಂಟರ್ ಗಾಡಿ ಪಲ್ಟಿಯಾದ ಘಟನೆ ನಡೆದಿದೆ. ಭಾನುವಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿಯಾಗಿದೆ. ಹೊಸಪೇಟೆ ಕಡೆಯಿಂದ ಹಗರಿಬೊಮ್ಮನಹಳ್ಳಿಯ ಕಡೆಗೆ ಹೊರಟಿತ್ತು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಲಾರಿ ಉರುಳಿ ಬಿದ್ದಿದೆ. ಅದೃಷ್ಟ ವಶ ಯಾರಿಗೂ ಪ್ರಾಣಪಾಯ ಸಂಭವಿಸಿಲ್ಲ, ಲಾರಿ‌ ಚಾಲಕನಿಗೆ ಸಣ್ಣಪುಟ್ಟ‌‌ಗಾಯಗಳಾಗಿವೆ. ಸ್ಥಳಕ್ಕೆ ಪಟ್ಟಣ ಪಿ.ಎಸ್.ಐ.ಹನುಮಂತಪ್ಪ ತಳವಾರ್ ಮತ್ತು ಸಿಬ್ಬಂದಿ ಭೇಟಿ‌ ನೀಡಿ ಪರಿಶೀಲನೆ ನಡೆಸಿದರು.

ಇದ್ದು ಇಲ್ಲದಂತೆ ಇರುವ ನಾಗಲಾಪುರ ಪಶು ಆಸ್ಪತ್ರೆ ,ಚಿಕಿತ್ಸೆಗಾಗಿ ಪರದಾಡುವ ರೈತರು

ಮರಿಯಮ್ಮನಹಳ್ಳಿ : ಪಶು ವೈದ್ಯರು ಇಲ್ಲ. ಚಿಕಿತ್ಸೆಯು ಇಲ್ಲ ಈ ಗ್ರಾಮಗಳ ರೈತರು ಪಶು ಚಿಕಿತ್ಸೆಗಾಗಿ ನಿತ್ಯವು ದನ ಕರುಗಳನ್ನು ಹಿಡಿದುಕೊಂಡು ಓಡಾಡುವ ಸ್ಥಿತಿ ಎದುರಾಗಿದೆ. ಮರಿಯಮ್ಮನಹಳ್ಳಿ ಸಮೀಪದ ನಾಗಲಾಪುರ ಗ್ರಾಮದಲ್ಲಿ ಪಶುಆಸ್ಪತ್ರೆ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಆದರೆ ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಎದ್ದು ಕಾಣುತ್ತದೆ. ನಾಗಲಾಪುರ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗರಗ, ಬ್ಯಾಲಕುಂದಿ, ಗುಂಡಾ, ಗುಂಡಾತಾಂಡ, ನಾಗಲಾಪುರ ತಾಂಡದ ಜನರು ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರೈತರ ಮೂಲ ಆಧಾರ ಎತ್ತು, ಹಸು, ಮೇಕೆ, …

ಇದ್ದು ಇಲ್ಲದಂತೆ ಇರುವ ನಾಗಲಾಪುರ ಪಶು ಆಸ್ಪತ್ರೆ ,ಚಿಕಿತ್ಸೆಗಾಗಿ ಪರದಾಡುವ ರೈತರು Read More »

ಪಟ್ಟಣದ ಎಪಿಎಂಸಿ ಕತ್ತಲಲ್ಲಿ ಮುಳುಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ

ಮರಿಯಮ್ಮನಹಳ್ಳಿ : ರೈತರಿಗೆ ವರದಾನವಾಗಬೇಕಿದ್ದ ಪಟ್ಟಣದ ಎಪಿಎಂಸಿ ಉಪಮಾರುಕಟ್ಟೆ ಇದ್ದು ಇಲ್ಲದಂತಾಗಿದ್ದು, ಇಲ್ಲಿ ಯಾವುದೇ ರೈತಾಪಿ ಚಟುವಟಿಕೆಗಳು ನಡೆಯದ ಪರಿಣಾಮ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಪಟ್ಟಣದ ಹಗರಿಬೊಮ್ಮನಹಳ್ಳಿ ರಸ್ತೆಯಲ್ಲಿ ಬರುವ ಎಪಿಎಂಸಿ ಉಪಮಾರುಕಟ್ಟೆಯಲ್ಲಿ ಲಕ್ಷಾಂತರ ವೆಚ್ಚದಲ್ಲಿ ಕಟ್ಟಡಗಳು ಹಾಗೂ ಆವರಣದ ಸುತ್ತ ತಡೆಗೋಡೆ ನಿರ್ಮಿಸಿದರೂ ಯಾವುದೇ ವಹಿವಾಟು ನಡೆಯುತ್ತಿಲ್ಲ. ಕೇವಲ ಬೆರಳೆಣಿಕೆ ರೈತರು ತಮ್ಮ ಫಸಲು ಒಣಗಿಸಲು ಮಾತ್ರ ಮಾರುಕಟ್ಟೆಯಲ್ಲಿನ ಕಟ್ಟೆಗಳನ್ನು ಅವಲಂಬಿಸಿದ್ದಾರೆ. ಇವರಿಗೆ ಮಳೆ ಬಂದರೆ ತಮ್ಮ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ಮತ್ತು ಅವರು …

ಪಟ್ಟಣದ ಎಪಿಎಂಸಿ ಕತ್ತಲಲ್ಲಿ ಮುಳುಗಿ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ Read More »

ಪಟ್ಟಣದಲ್ಲಿ ಎಕೆ.ಕಾಲೊನಿ ಅಭಿಮಾನಿಗಳಿಂದ ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯಸ್ಮರಣೆ

ಮರಿಯಮ್ಮನಹಳ್ಳಿ: ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 11ನೇ ದಿನದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಂಗಳವಾರ ಸಂಜೆ ಪಟ್ಟಣದ ಪುನೀತ್ ರಾಜ್‍ಕುಮಾರ್ ರವರ ಅಭಿಮಾನಿಗಳು ಎ.ಕೆ.ಕಾಲೋನಿಯಲ್ಲಿ ಹಮ್ಮಿಕೊಂಡು ಅವರ ಭಾವಚಿತ್ರಕ್ಕೆ  ಪೂಜೆ ಸಲ್ಲಿಸಿ. ನಂತರ ಲೈಟ್ಸ್ ಆಫ್ ಮಾಡಿ ನೂರಾರು ಅಭಿಮಾನಿಗಳು ಮೊಂಬತ್ತಿಗಳನ್ನು ಹಿಡಿದು ಮೌನಚಾರಣೆ ಮಾಡಿದರು. ಇದೇ ಸಂದರ್ಭದಲ್ಲಿ  ಮಕ್ಕಳು ಅಪ್ಪು ಹೆಸರಿನ ಆಕಾರದಲ್ಲಿ ಮೊಂಬತ್ತಿಗಳನ್ನು ಹಿಡಿದು ಕುಳಿತಿದ್ದರು. ನಂತರ ಪಿ.ಎಸ್.ಐ.ಹನುಮಂತಪ್ಪ ತಳವಾರ್ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿಯೇ ಬೆಟ್ಟದ ಹೂವು ಚಿತ್ರದ ‘ರಾಮು’ ಪಾತ್ರಕ್ಕೆ ಅತ್ಯುತ್ತಮ ಬಾಲ ಕಲಾವಿದ …

ಪಟ್ಟಣದಲ್ಲಿ ಎಕೆ.ಕಾಲೊನಿ ಅಭಿಮಾನಿಗಳಿಂದ ಪುನೀತ್ ರಾಜ್‍ಕುಮಾರ್ 11ನೇ ದಿನದ ಪುಣ್ಯಸ್ಮರಣೆ Read More »

Translate »
Scroll to Top