ಮರಿಯಮ್ಮನಹಳ್ಳಿ: ಇತ್ತೀಚೆಗೆ ತುಮಕೂರಿನಲ್ಲಿ ನಡೆದ 5ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‍ಷಿಪ್‍ನಲ್ಲಿ ಮರಿಯಮ್ಮನಹಳ್ಳಿಯ ಶೋಟೊಕನ್ ಕರಾಟೆ ಪಟುಗಳು ವಿಜೇತರಾಗಿದ್ದು 3 ಪ್ರಥಮ, 2 ದ್ವಿತಿಯ ಹಾಗೂ 12 ತೃತೀಯ ಸ್ಥಾನ ಪಡೆಯುವ ಮೂಲಕ ಕೀರ್ತಿತಂದಿದ್ದಾರೆ ಎಂದು ಮರಿಯಮ್ಮನಹಳ್ಳಿಯ ಹಿರಿಯ ಕರಾಟೆ ತರಬೇತಿದಾರರಾದ ಗೌಳೇರ ನಾಗರಾಜ್ ತಿಳಿಸಿದ್ದಾರೆ.

ವೈಟ್ ಬೆಲ್ಟ್‍ನ ಕರಾಟೆ ಪಟುಗಳಾದ ಜಶ್ವಂತ್ ಫೈಟಿಂಗ್ ವಿಭಾಗದಲ್ಲಿ ಪ್ರಥಮ, ಕಟಾ ತೃತೀಯ ಸ್ಥಾನ, ನೀರಜ್ ಫೈಟಿಂಗ್‍ನಲ್ಲಿ ದ್ವಿತಿಯಾ, ಕಟಾದಲ್ಲಿ ತೃತೀಯ ಸ್ಥಾನ, ನವಾಜ್ ಫೈಟಿಂಗ್‍ನಲ್ಲಿ ದ್ವಿತಿಯಾ, ಕಟಾದಲ್ಲಿ ಪ್ರಥಮ ಸ್ಥಾನ. ಯೆಲ್ಲೋ ಬೆಲ್ಟ್‍ನ ಸಲ್ಮಾ ಫೈಟಿಂಗ್‍ನಲ್ಲಿ ತೃತೀಯ, ಕಟಾದಲ್ಲಿ ಪ್ರಥಮ ಸ್ಥಾನ. ಸೃಜನ್ ಫೈಟಿಂಗ್ ಮತ್ತು ಕಟಾದಲ್ಲಿ ತೃತೀಯ ಸ್ಥಾನ. ಆರೆಂಜ್ ಬೆಲ್ಟ್‍ನ ಪ್ರೀತಂ ಮತ್ತು ಶ್ರೀಕಾಂತ ಫೈಟಿಂಗ್ ಮತ್ತು ಕಟಾದಲ್ಲಿ ತೃತೀಯ ಸ್ಥಾನ. ಬ್ಲೂ ಬೆಲ್ಟ್‍ನ ಆದರ್ಶ ಬಾಕಳೆ ಫೈಟಿಂಗ್ ಮತ್ತು ಕಟಾದಲ್ಲಿ ತೃತೀಯ ಸ್ಥಾನ ಹಾಗೂ ಬ್ಲಾಕ್ ಬೆಲ್ಟ್ ವಿಭಾಗದಲ್ಲಿ ಕೆ.ಸಿ.ಕೊಟ್ರೇಶ ಫೈಟಿಂಗ್ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ವಿಜೇತರಿಗೆ ಮೆಡಲ್, ಟ್ರೋಫಿ ಮತ್ತು ಪ್ರಮಾಣ ಪತ್ರಗಳನ್ನು ನೀಡಿರುವುದಾಗಿ ತಿಳಿಸಿದ್ದಾರೆ.