ಇದ್ದು ಇಲ್ಲದಂತೆ ಇರುವ ನಾಗಲಾಪುರ ಪಶು ಆಸ್ಪತ್ರೆ ,ಚಿಕಿತ್ಸೆಗಾಗಿ ಪರದಾಡುವ ರೈತರು

ಮರಿಯಮ್ಮನಹಳ್ಳಿ : ಪಶು ವೈದ್ಯರು ಇಲ್ಲ. ಚಿಕಿತ್ಸೆಯು ಇಲ್ಲ ಈ ಗ್ರಾಮಗಳ ರೈತರು ಪಶು ಚಿಕಿತ್ಸೆಗಾಗಿ ನಿತ್ಯವು ದನ ಕರುಗಳನ್ನು ಹಿಡಿದುಕೊಂಡು ಓಡಾಡುವ ಸ್ಥಿತಿ ಎದುರಾಗಿದೆ. ಮರಿಯಮ್ಮನಹಳ್ಳಿ ಸಮೀಪದ ನಾಗಲಾಪುರ ಗ್ರಾಮದಲ್ಲಿ ಪಶುಆಸ್ಪತ್ರೆ ರೈತರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ಆದರೆ ಇಲ್ಲಿ ಅಧಿಕಾರಿಗಳ ನಿರ್ಲಕ್ಷ್ಯವೇ ಎದ್ದು ಕಾಣುತ್ತದೆ. ನಾಗಲಾಪುರ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಗರಗ, ಬ್ಯಾಲಕುಂದಿ, ಗುಂಡಾ, ಗುಂಡಾತಾಂಡ, ನಾಗಲಾಪುರ ತಾಂಡದ ಜನರು ಕೃಷಿಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರೈತರ ಮೂಲ ಆಧಾರ ಎತ್ತು, ಹಸು, ಮೇಕೆ, ಕುರಿ. ಹೈನುಗಾರಿಕೆಯನ್ನು ನಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ.  ಈ  ವ್ಯಾಪ್ತಿಯಲ್ಲಿ 10 ರಿಂದ 12 ಸಾವಿರಾರು ಸಂಖ್ಯೆಯಲ್ಲಿ ದನ, ಕುರಿ, ಮೇಕೆ, ಕೋಳಿ ಹೀಗೆ ಹಲವು ರೀತಿಯ ಪ್ರಾಣಿಗಳಿವೆ. ರೈತರು ಪಶುಗಳಿಗೆ ಚಿಕಿತ್ಸೆಗೆ ಎಂದು ಆಸ್ಪತ್ರೆಗೆ ಬಂದರೆ ಇಲ್ಲಿ ಅಟೆಂಡರ್ ಮಾತ್ರ ಇರುತ್ತಾರೆ. ಡಾಕ್ಟರ್ ಇಲ್ಲ, ಆಗಿದ್ದರೆ ಇಲ್ಲಿ ಪ್ರಾಣಿಗಳ ಕಾಯಿಲೆಗಳನ್ನು ನೋಡುವವರು ಯಾರು? ಕಾಯಿಲೆಯನ್ನು ವಾಸಿಮಾಡುವವರು ಯಾರು? ಎಂದು ತಿಳಿಯುತ್ತಿಲ್ಲ. ಡಾಕ್ಟರ್  ಇಲ್ಲ ಅನ್ನುವ ಸಾಮಾನ್ಯವಾದ ಮಾತು ಕೇಳಿ ಬರುತ್ತದೆ. ಇಷ್ಟೇ ಆದರೆ ಈ ನಾಗಲಾಪುರ ಗ್ರಾಮಪಂಚಾಯತಿ ವ್ಯಾಪ್ತಿಯ ದನ, ಕುರಿ, ಮೇಕೆ ಹೀಗೆ ಹಲವು ರೀತಿಯ ಪ್ರಾಣಿಗಳ ಜೀವವನ್ನು ಕಾಪಾಡುವವರು ಯಾರು? ಪಶುಚಿಕಿತ್ಸಾ ಕೇಂದ್ರ ಮಾತ್ರ ಬಾಗಿಲು ತೆರೆದಿರುತ್ತದೆ. ಹಸುಗಳನ್ನು ಆಸ್ಪತ್ರೆಗೆ ಕರೆ ತಂದರೆ ಯಾರು ಇರುವುದಿಲ್ಲ. ನಾವು ಎಲ್ಲಿ ಹೋಗಿ ಚಿಕಿತ್ಸೆ ಕೊಡಿಸಬೇಕು ಅನ್ನುವುದು ಇಲ್ಲಿನ ರೈತರ ಅಳಲು.

ಪಶು ವೈದ್ಯರಿಲ್ಲ ಮತ್ತು ಸಿಬ್ಬಂದಿ ಇದ್ದರೂ ಉಪಯೋಗವಿಲ್ಲ. ತಾಲೂಕು ಮಟ್ಟದ ವೈದ್ಯಧಿಕಾರಿ ವಾರದಲ್ಲಿ ಒಂದು ಬಾರಿಯಾದರೂ ಇತ್ತಕಡೆ ತಲೆಹಾಕಿ ನೋಡುವುದಿಲ್ಲ. ಹಾಗಾಗಿ ದನ ಕರುಗಳಿಗೆ ಚಿಕಿತ್ಸೆ ಲಭ್ಯವಾಗುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.ಸಿಬ್ಬಂದಿ ಕೊರತೆ; ಈ ಆಸ್ಪತ್ರೆಯಲ್ಲಿ ಯಾರೊನ್ನೋ ಒಬ್ಬ ಅಟೆಂಡರ್‌ ಆಗಿ ನೇಮಿಸಿದ್ದಾರೆ. ಆದರೆ ರೈತರು ಹಸುಗಳನ್ನು ಕರೆ ತಂದಾಗ ಯಾವ ಕಾಯಿಲೆ ಯಾವ ಚಿಕಿತ್ಸೆ ನೀಡಬೇಕು ಅನ್ನುವುದು ಅವರಿಗೆ ಗೊತ್ತಿಲ್ಲದ ಕಾರಣ ಎಷ್ಟೋ ಬಾರಿ ಹಸುಗಳಿಗೆ ಸರಿಯಾದ ಚಿಕಿತ್ಸೆ ನಿಡದೇ ಹಸುಗಳು ಸಾವನ್ನಪ್ಪಿವೆ. ಅನುಕೂಲಕ್ಕಿಂತ ಅನಾಹುತನೇ ಜಾಸ್ತಿಯಾಗಿದೆ. ಮತ್ತು ಅಗತ್ಯ ಔಷಧಿಗಳು ಕೊರತೆ ಎದ್ದು ಕಾಣುತ್ತಿದೆ. ಒಂದು ವ್ಯವಸ್ಥಿತ ಆಸ್ಪತ್ರೆಗೆ ಬೇಕಾದ ಆಧುನಿಕ ಸಲಕರಣೆಗಳು ಮತ್ತು ಔಷಧಗಳನ್ನು ಒದಗಿಸಬೇಕೆಂದು ಇಲ್ಲಿನ ರೈತರ ಒತ್ತಾಯವಾಗಿದೆ.ರೈತರ ನೋವಿನ ಅಳಲು: ನಾವು ಹಸುಗಳನ್ನು ನೆಚ್ಚಿಕೊಂಡು ಜೀವನ ಮಾಡುತ್ತಿದ್ದೇವೆ. ನಮ್ಮ ಹಸುಗಳಿಗೆ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಆಸ್ಪತ್ರೆಗೆ ತೋರಿಸುವುದಕ್ಕೆ ಇದು ಒಂದೇ ಆಸ್ಪತ್ರೆ ಬಿಟ್ಟರೆ ಬೇರಾವುದಿಲ್ಲ. ಹಾಗಾಗಿ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಸರಿಪಡಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಪಟ್ಟಣದ ಆಸ್ಪತ್ರೆಗೆ ತೆರಳುವ ಸ್ಥಿತಿ: ಗ್ರಾಮಗಳ ಜಾನುವಾರುಗಳಿಗೆ ಸಣ್ಣ ಪುಟ್ಟ ಕಾಯಿಲೆ ಬಂದರೆ ವಾಹನಗಳನ್ನು ಬಾಡಿಗೆ ಮಾಡಿಕೊಂಡು ಪಟ್ಟಣದ ಪಶುಆಸ್ಪತ್ರೆಗೆ ಜಾನುವಾರುಗಳನ್ನು ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಬೇಕಾಗಿದೆ. ಎಂದು ರೈತರಾದ ನಾಗರಾಜ, ರಮೇಶ್, ಪವನ್ ಹೇಳಿದರು. ನಾಗಲಾಪುರ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ 6 ಗ್ರಾಮಗಳು ಬರುತ್ತವೆ. ಈ ವ್ಯಾಪ್ತಿಯಲ್ಲಿ ಸುಮಾರು12 ಸಾವಿರಾರು ಸಂಖ್ಯೆಯಲ್ಲಿ ದನ, ಕುರಿ, ಮೇಕೆ, ಕೋಳಿ ಹೀಗೆ ಹಲವು ರೀತಿಯ ಪ್ರಾಣಿಗಳಿವೆ. ಇಲ್ಲಿನ ರೈತರು ಹಸು, ಮೇಕೆ, ಕುರಿ. ಹೈನುಗಾರಿಕೆಯನ್ನು ನಂಬಿ ಬದುಕನ್ನು ಕಟ್ಟಿಕೊಂಡಿದ್ದಾರೆ. ಹಾಗೂ ಬಡ ರೈತರು ಎತ್ತುಗಳನ್ನು ನಂಬಿ ಜೀವನವನ್ನು ಸಾಗಿಸುತ್ತಿದ್ದಾರೆ. ಇಲ್ಲಿನ ಪಶು ಪ್ರಾಥಮಿಕ ಕೇಂದ್ರಕ್ಕೆ ಸುಮಾರು ವರ್ಷಗಳಿಂದ ಯಾವೊಬ್ಬ ಡಾಕ್ಟರ್ ಇಲ್ಲ. ಕೂಡಲೇ ನಾಗಲಾಪುರ ಗ್ರಾಮಪಂಚಾಯತಿ ವ್ಯಾಪ್ತಿಗೆ ಒಬ್ಬ ಪಶು ವೈದ್ಯರನ್ನು ನೇಮಿಸಬೇಕು ಎಂದು ಕರವೇ ಹೋಬಳಿ ಅಧ್ಯಕ್ಷ ಈ.ರಮೇಶ್ ಬ್ಯಾಲಕುಂದಿ ಹೇಳಿದರು. 

ಮಂಜುನಾಥ.ಡಿ

Leave a Comment

Your email address will not be published. Required fields are marked *

Translate »
Scroll to Top