ಹಿಂದಿಗೆ ನಾವು ಗೌರವ ನೀಡುವಂತೆ ಕನ್ನಡ ಭಾಷೆಗೂ ಪ್ರತಿಯೊಬ್ಬರೂ ಗೌರವ ನೀಡಬೇಕು

ಮರಿಯಮ್ಮನಹಳ್ಳಿ:ಹಿಂದಿಗೆ ನಾವು ಗೌರವ ನೀಡುವಂತೆ ಕನ್ನಡ ಭಾಷೆಗೂ ಪ್ರತಿಯೊಬ್ಬರೂ ಗೌರವ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ(ನಾ.ಗೌ) ಮರಿಯಮ್ಮನಹಳ್ಳಿ ಹೋಬಳಿಘಟಕ ಅಧ್ಯಕ್ಷ ಈಡಿಗರರಮೇಶ ಬ್ಯಾಲಕುಂದಿ ಹೇಳಿದ್ದಾರೆ. ಹಿಂದಿ ನಟ ಅಜಯ್ ದೇವಗನ್ ಟ್ವಿಟ್ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಕನ್ನಡಿಗರು, ನಮಗೆ ನಮ್ಮದೇ ಆದ ಭಾಷೆ, ಸ್ವಾಭಿಮಾನ ಇದೆ. ನಮ್ಮ ಭಾಷೆ, ನೆಲ ಮತ್ತು ಜಲ ರಕ್ಷಣೆ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ನಮ್ಮ ದೇಶ ಅನೇಕ ಭಾಷೆಗಳ ಗೂಡು, ಅವರವರಿಗೆ ಆಯಾ ಭಾಷೆ ಬಗ್ಗೆ ಸ್ವಾಭಿಮಾನವಿರುತ್ತದೆ. ನಾವು ಕನ್ನಡಿಗರು, ಹೀಗಾಗಿ ನಮ್ಮ ಮೊದಲ ಆದ್ಯತೆ ಕನ್ನಡ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ’ ಎಂದರು.

ರಾಜ್ಯದಲ್ಲೇ ಕೊಡಗಿನಲ್ಲಿ ಒಂದು ಭಾಷೆ, ಮಂಗಳೂರಿನಲ್ಲಿ ಮತ್ತೊಂದು ಭಾಷೆ ಇದೆ. ಯಾವ ಭಾಷೆಯನ್ನೂ ತಳ್ಳಿ ಹಾಕಲು ಸಾಧ್ಯವಿಲ್ಲ. ಎಲ್ಲ ಭಾಷೆಗಳನ್ನೂ ಗೌರವಿಸಬೇಕು. ದೇಶದ ನೋಟುಗಳ ಮೇಲೆ ಕನ್ನಡ, ತೆಲುಗು, ತಮಿಳು ಭಾಷೆಯೂ ಇದೆ.ಒಕ್ಕೂಟ ವ್ಯವಸ್ಥೆಯಲ್ಲಿ ನಮ್ಮ ಭಾಷೆಗಳು,ರಾಜ್ಯಗಳ ಗೌರವ ಉಳಿಸ ಬೇಕೆಂದರು.

Leave a Comment

Your email address will not be published. Required fields are marked *

Translate »
Scroll to Top