ಮರಿಯಮ್ಮನಹಳ್ಳಿ: ಪಟ್ಟಣ ಸಮೀಪದ ಡಣಾಯಕನಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಇಂದಿರಾಗಾಂಧಿ ನಗರದಲ್ಲಿ ಬಹುದಿನಗಳಿಂದ ಸ್ವಚ್ಛತೆ ಕಾಣದೇ ಇದ್ದ ಚರಂಡಿಯನ್ನು ಗ್ರಾಮ ಪಂಚಾಯತಿ ಸದಸ್ಯ ಗುಂಡಾ ಸೋಮಣ್ಣ ಸ್ವತಃ ಚರಂಡಿ ಸ್ವಚ್ಛತೆಗೊಳಿಸಿದರು. ಮನುಷ್ಯನಿಗೆ ಸಣ್ಣಮಟ್ಟದ ಅಧಿಕಾರ ಸಿಕ್ಕರೆ ಸಾಕು, ಆತನ ಖದರೆ ಬದಲಾಗುತ್ತದೆ.ಆದರೆ ಇಲ್ಲೊಬ್ಬರು ಗ್ರಾ.ಪಂ.ಸದಸ್ಯರಾದರು ಯಾವುದೇ ಎಗ್ಗಿಲ್ಲದೆ ಯಾವುದೇ ಕೆಲಸ ಮಾಡಲು ಹಿಂಜರಿಯುವುದಿಲ್ಲ. ಡಣಾಯಕನಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಇಂದಿರಾಗಾಂಧಿ ನಗರದಲ್ಲಿ ಬಹುದಿನಗಳಿಂದ ಗಬ್ಬುನಾರುತ್ತಿದ್ದ ಚರಂಡಿಯನ್ನು ಸ್ವತಃ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಭಾನುವಾರ ಸ್ವಚ್ಛತೆ ಗೊಳಿಸಿದ್ದಾರೆ. ಬಳಕೆ ನೀರು ಕೂಡ ಸರಾಗವಾಗಿ ಚರಂಡಿಯಲ್ಲಿ ಹರಿಯದ ಕಾರಣ ನಗರದಲ್ಲಿ ಕಲುಷಿತವಾತವರಣ ನಿರ್ಮಾಣವಾಗಿತ್ತು. ನಿವಾಸಿಗಳು ದೂರು ನೀಡಿದರೂ ಪ್ರಯೋಜವಾಗದ ಹಿನ್ನೆಲೆಯಲ್ಲಿ ಗ್ರಾಮದ ಗ್ರಾಪಂ ಸದಸ್ಯ ಗುಂಡಾ ಸೋಮಣ್ಣ(ಸೋಮಪ್ಪ) ಅವರೆ ಚರಂಡಿ ನೀರು ಸರಾಗವಾಗಿ ಹೋಗುವಂತೆ ಮಾಡಿದರು. ಪಿಡಿಒ ಜಿಲಾನ್ ಕೂಡ ಜತೆ ಇದ್ದರು. ಗುಂಡಾಸ್ವಾಮಿ ಯೆಂದೆ ಹೆಸರು ವಾಸಿಯಾದ ಇವರು ಅನೇಕ ಸಾಮಾಜಿಕ ಸೇವೆಗಳಿಂದ ಗುರುತಿಸಿ ಕೊಂಡಿದ್ದಾರೆ.

ಇಲ್ಲಿನ ಅನೇಕ ನಿವಾಸಿಗಳು ಗುಂಡಾ ಸೋಮಣ್ಣ ಅವರನ್ನು ನೋಡಿ ತಾವೇ ಸ್ವಚ್ಛತೆಗೊಳಿಸಿ ಕೊಳ್ಳುವುದಾಗಿ ತಿಳಿಸಿದ್ದರು, ಆದರೆ ಸ್ವಚ್ಛತೆಗೊಳಿಸದ ಕಾರಣ,ತಾವೇ ಮುಂದೆ ನಿಂತು ವಾರ್ಡಿನ ಸದಸ್ಯ ಸೋಮಣ್ಣ ಚರಂಡಿ ಸ್ವಚ್ಛತೆಗೊಳಿಸಿದರು. ಸ್ವಚ್ಛತೆಗೆ ಮುಂದಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಪ್ರಶಂಸೆ ವ್ಯಕ್ತವಾಗಿದೆ.
