ಮರಿಯಮ್ಮನಹಳ್ಳಿ ,ಮಾ,17 : ಪುನೀತ್ ರಾಜ್‍ಕುಮಾರ್ ರವರ ದಾನಧರ್ಮ ಮಾಡಿರುವುದು ಎಲ್ಲಿಯೂ ಪ್ರಚಾರ ಮಾಡದೇ ಎಲೆಮರೆಕಾಯಿಯಂತೆ ಸಮಾಜ ಸೇವೆ ಮಾಡುತ್ತಿದ್ದರು. ಇಂದಿನ ಯುವಕರು ಅವರ ಜೀವನದಲ್ಲಿ ಮಾದರಿಯಾಗಿ ತೆಗೆದುಕೊಳ್ಳಬೇಕು ಎಂದು ಈಡಿಗರ ನಾಗರಾಜಪ್ಪ ಹೇಳಿದರು.

ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ಗುರುವಾರ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ನಿಮಿತ್ತ ಪಟ್ಟಣದ ಶ್ರೀಲಕ್ಷ್ಮೀ ನಾರಾಯಣ ಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪುನೀತ್ ರಾಜ್‍ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ಅಪ್ಪುಗೆ ಜೈಕಾರ ಹಾಕಿ ಸಂಭ್ರಮದಿಂದ ಹುಟ್ಟು ಹಬ್ಬವನ್ನು ಆಚರಣೆ ಮಾಡಿದರು. ಈ ಸಂದರ್ಭದಲ್ಲಿ ಎನ್.ಸತ್ಯನಾರಾಯಣ, ಬುಡೇನ್ ಸಾಬ್, ವಿಜಯ್ ಕುಮಾರ್, ತಳವಾರ್ ದೊಡ್ಡ ರಾಮಣ್ಣ, ವೆಂಕಟೇಶ, ಷಣ್ಮುಖಪ್ಪ, ಪೂಜಾರ್ ಭೀಮಪ್ಪ, ವೈಷ್ಣವಿ ಜ್ಯುವೇಲರಿ ಸಂತೋಷ, ಮುಕುಂದ, ಬಿವಿ.ಟೈಲರ್ ವೆಂಕಟೇಶ, ಬಿ.ಬಸವರಾಜ, ಮೌನೇಶ್ ಇತರರಿದ್ದರು. ನಂತರ ಈಡಿಗರ ನಾಗರಾಜಪ್ಪ ಕುಟುಂಬದವರಿಂದ ಅನ್ನಸಂತರ್ಪಣೆ ನಡೆಯಿತು.