kannadnadunews

ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ

ಬೆಂಗಳೂರು,ಮಾ,3 : ಪಾದಯಾತ್ರೆಯ ಮಾರ್ಗ ಮಧ್ಯೆ ಸ್ಯಾಂಕಿ ಕೆರೆ ವೃತ್ತದಲ್ಲಿ ಶಿವಾಜಿ ಮಹಾರಾಜರ ಪ್ರತಿಮೆಗೆ ಸಿದ್ದರಾಮಯ್ಯ ಅವರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ಕೆಪಿಸಿಸಿ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವ ಆರ್.ವಿ. ದೇಶಪಾಂಡೆ, ಶಾಸಕರಾದ ಭೀಮಾ ನಾಯಕ, ಅಂಜಲಿ ನಿಂಬಾಳ್ಕರ್, ಯುವ ಕಾಂಗ್ರೆಸ್ ನ ರಕ್ಷಾ ರಾಮಯ್ಯ ಮತ್ತಿತರರು ಜೊತೆಗಿದ್ದರು.

ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಪರಿಷತ್ ಆಗ್ರಹ

ಕೊಪ್ಪಳ,ಮಾ,3 : ಈ ಸಾಲಿನ ಬಜೆಟ್ಟಿನಲ್ಲಿ ಬೌದ್ಧ ಅಭಿವೃದ್ಧಿ ಪ್ರಾಧಿಕಾರವನ್ನು ಸ್ಥಾಪಿಸಿ ಪ್ರಾಧಿಕಾರಕ್ಕೆ ಕನಿಷ್ಠ 200 ಕೋಟಿ ಹಣವನ್ನು ಮೀಸಲಿಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಕೊಪ್ಪಳ ಜಿಲ್ಲಾ ದಲಿತ ವಿದ್ಯಾರ್ಥಿ ಪರಿಷತ್ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಲಾಯಿತು. ಗುರುವಾರ ಜಿಲ್ಲಾಧಿಕಾರಿಗಳ ಮೂಲಕ ದಲಿತ ವಿದ್ಯಾರ್ಥಿ ಪರಿಷತ್ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ಬಗ್ಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಪರಿಷತ್ತಿನ ಜಿಲ್ಲಾ ಸಂಚಾಲಕರಾದ ಗೌತಮ್ ಬಳಗಾನೂರ, …

ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಪರಿಷತ್ ಆಗ್ರಹ Read More »

ಡೈನಮಿಕ್ಸ್ ತಂಡಕ್ಕೆ ಮೊದಲ ಬಹುಮಾನ

ದೇವನಹಳ್ಳಿ,ಮಾ,2 : ಇಂದಿನ ಯುವ ಪೀಳಿಗೆ ಅಂತರ್ಜಾಲದ ಮೂಲಕ ಮೊಬೈಲ್ ಗಳಲ್ಲಿ ಆಟವಾಡುತ್ತಾರೆ ಅದನ್ನು ಬಿಟ್ಟು ಮೈದಾನದಲ್ಲಿ ಆಡಿದಾಗ ಮಾತ್ರ ದೇಹ ಸಧೃಡವಾಗಿ ಆರೋಗ್ಯವಂತರಾಗಿರಲು ಸಾಧ್ಯ ದಿನದಲ್ಲಿ ಒಂದು ತಾಸಾದರು ಕ್ರೀಡೆಗೆ ಒತ್ತು ನೀಡಬೇಕೆಂದು ಅಕ್ಷತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ದೇವರಾಜ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ವಿಜಯಮಾರುತಿ ಕ್ರಿಕೆಟ್ ತಂಡ, ಎಸ್ ಆರ್ ಎಸ್ ಬಾಯ್ಸ್ ಹಾಗೂ ಅಕ್ಷತಾ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಜಯಪುರ ಪ್ರೀಮಿಯರ್‌ …

ಡೈನಮಿಕ್ಸ್ ತಂಡಕ್ಕೆ ಮೊದಲ ಬಹುಮಾನ Read More »

ಸರ್ವರಿಗೂ ಸೂರು ಕಲ್ಪಿಸುವ ಗುರಿಯೊಂದಿಗೆ ರಾಜ್ಯದಲ್ಲಿ ವಸತಿ ಕ್ರಾಂತಿ

ಬಳ್ಳಾರಿ,ಮಾ.02 : ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ಕಂಪ್ಲಿ ಪಟ್ಟಣದಲ್ಲಿ 32.87 ಕೋಟಿ ರೂ.ವೆಚ್ಚದಲ್ಲಿ 500 ಮನೆಗಳ ನಿರ್ಮಾಣಕ್ಕೆ ಸಾರಿಗೆ,ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರು ಬುಧವಾರ ಭೂಮಿಪೂಜೆ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಅವರು  ಗುಣಮಟ್ಟದಲ್ಲಿ ಯಾವುದೇ ರೀತಿಯಲ್ಲಿ ರಾಜಿಯಾಗದೆ ನಿಗದಿತ ಸಮಯದಲ್ಲಿ ಈ ಕೆಲಸ ಮುಗಿಸಿ ಜನರಿಗೆ ಮನೆ ಸಿಗುವಂತೆ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಬಡವರಿಗೆ ಸೂರು ಒದಗಿಸುವುದು ನಮ್ಮ ಸರ್ಕಾರದ ಪ್ರಮುಖ …

ಸರ್ವರಿಗೂ ಸೂರು ಕಲ್ಪಿಸುವ ಗುರಿಯೊಂದಿಗೆ ರಾಜ್ಯದಲ್ಲಿ ವಸತಿ ಕ್ರಾಂತಿ Read More »

11,111 ಮೃತ್ತಿಕೆ ಶಿವಲಿಂಗಗಳ ಪ್ರತಿಷ್ಡಾಪನೆ

ಹರಿಹರ,ಮಾ,2 : ಮಹಾಶಿವರಾತ್ರಿ ನಿಮಿತ್ತ ಹರಿಹರ ಕುರುಹಿನಶೆಟ್ಟಿ ಸಮಾಜ ಪ್ರೌಢ ಸಂಘದ ವತಿಯಿಂದ ಮೆಟ್ಟಿಲು ಹೊಳೆ ರಸ್ತೆಯಲ್ಲಿರುವ ಶ್ರೀ ನೀಲಕಂಟೇಶ್ವರ ಸ್ವಾಮಿಗೆ ಬೆಳಗ್ಗೆಯಿಂದ ರಾತ್ರಿಯವರೆಗು ರುದ್ರಾಭಿಷೇಕ , ಕ್ಷೀರಾಭಿಷೇಕ ಪೂಜಾಕಾರ್ಯಕ್ರಮಗಳು ನಡೆಯಿತು. ಈ ಬಾರಿ ವಿಷೇಶವಾಗಿ ಸಮಾಜದ ಮಹಿಳೆಯರಿಂದ ಲೋಕಕಲ್ಯಾಣಾರ್ಥಕ್ಕಾಗಿ ಮನೋವಾoಛಿತ ಫಲ ಸಿದ್ಧಿಗಾಗಿ 11,111 ಮೃತ್ತಿಕೆಯಿಂದ ಮಾಡಿದ ಭೂಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿ ಅವುಗಳಿಗೆ ಶ್ರೀ ಶಂಭುಲಿಂಗೇಶ್ವರ ಶಾಸ್ತ್ರಿ ಯವರ ನೇತೃತ್ವದಲ್ಲಿ ಭಸ್ಮಾರ್ಚನೆ, ಶಿವ ಬಿಲ್ವಾರ್ಚನೆ, ಶಿವನಾಮವಳಿಯ ಜಪ ಮಾಡಿದರು. ಈ ಕಾರ್ಯಕ್ರಮವು ಭಾರಿ ವಿಜೃಂಭಣೆಯಿಂದ ಜರುಗಿತು. …

11,111 ಮೃತ್ತಿಕೆ ಶಿವಲಿಂಗಗಳ ಪ್ರತಿಷ್ಡಾಪನೆ Read More »

ಜಾತಿ, ಮೀಸಲಾತಿ ಬಗ್ಗೆ ಮಾತನಾಡುವುದು ತರವಲ್ಲ

ಬೆಂಗಳೂರು,ಮಾ,2 : `ಉಕ್ರೇನಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ ಹಾವೇರಿಯ ವಿದ್ಯಾರ್ಥಿ ನವೀನ್ ಅವರು ಶೆಲ್ ದಾಳಿಗೆ ಸಿಲುಕಿ ಸಾವನ್ನಪ್ಪಿರುವುದು ತುಂಬಾ ನೋವಿನ ಸಂಗತಿಯಾಗಿದೆ. ಈ ದುಃಖದ ಸಮಯದಲ್ಲಿ ಸರಕಾರವು ಅವರ ಕುಟುಂಬದೊಂದಿಗೆ ನಿಲ್ಲಲಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬುಧವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, `ನವೀನ್ ಅವರ ಅಕಾಲಿಕ ನಿಧನ ನೋವಿನ ಸಂಗತಿಯಾಗಿದೆ. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ಜಾತಿ ವ್ಯವಸ್ಥೆ ಮತ್ತು ಮೀಸಲಾತಿ ಬಗ್ಗೆಯೆಲ್ಲ ಮಾತನಾಡುವುದು ಅನುಚಿತವಾಗುತ್ತದೆ. ಸರಕಾರವು ಕಡುಬಡವರು, …

ಜಾತಿ, ಮೀಸಲಾತಿ ಬಗ್ಗೆ ಮಾತನಾಡುವುದು ತರವಲ್ಲ Read More »

ಮಾರ್ಚ್ 7ರಿಂದ ಮೂರು ದಿನ `ಬೆಂಗಳೂರು- ಇಂಡಿಯಾ ನ್ಯಾನೋ ಸಮಾವೇಶ’

ಬೆಂಗಳೂರು,ಮಾ,2 : ಸುಸ್ಥಿರ ಅಭಿವೃದ್ಧಿಗಾಗಿ ನ್ಯಾನೋ ತಂತ್ರಜ್ಞಾನ’ ಎನ್ನುವ ಧ್ಯೇಯದೊಂದಿಗೆ 12ನೇ ವರ್ಷದಬೆಂಗಳೂರು-ಇಂಡಿಯಾ ನ್ಯಾನೋ’ ಸಮಾವೇಶವು ಪ್ರಥಮ ಬಾರಿಗೆ ವರ್ಚುಯಲ್ ಮಾದರಿಯಲ್ಲಿ ಮಾರ್ಚ್ 7ರಿಂದ 9ರವರೆಗೆ ನಡೆಯಲಿದೆ ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ. ಬುಧವಾರ ಈ ಸಂಬಂಧ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದು, ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. 12ನೇ ವರ್ಷದ `ಬೆಂಗಳೂರು-ಇಂಡಿಯಾ ನ್ಯಾನೋ ಸಮಾವೇಶ’ಕ್ಕೆ …

ಮಾರ್ಚ್ 7ರಿಂದ ಮೂರು ದಿನ `ಬೆಂಗಳೂರು- ಇಂಡಿಯಾ ನ್ಯಾನೋ ಸಮಾವೇಶ’ Read More »

ಬೇಲೂರು,ಹಳೇಬಿಡು ಸೇರಿ 41 ಸ್ಮಾರಕಗಳನ್ನು ವಿಶ್ವಪರಂಪರೆ ತಾಣಗಳೆಂದು ಪರಿಗಣಿಸಲು ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಕೆ: ಕೇಂದ್ರ ಪ್ರವಾಸೋದ್ಯಮ,ಸಂಸ್ಕøತಿ ಸಚಿವ ಜಿ.ಕಿಶನ್ ರೆಡ್ಡಿ

ದೇವಯಾತನಂ-ಭಾರತೀಯ ದೇವಾಲಯ ವಾಸ್ತುಶಿಲ್ಪ ಅದ್ಭುತ ಮಹಾಕಾವ್ಯ’’ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನಸ್ಮಾರಕಗಳ ಸಂರಕ್ಷಣೆ,ಜೀರ್ಣೋದ್ಧಾರಕ್ಕೆ ದತ್ತು;ವಿಶೇಷ ಒತ್ತು* ಬೇಲೂರು,ಹಳೇಬಿಡು ಸೇರಿ 41 ಸ್ಮಾರಕಗಳನ್ನು ವಿಶ್ವಪರಂಪರೆ ತಾಣಗಳೆಂದು ಪರಿಗಣಿಸಲು ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಕೆ: ಕೇಂದ್ರ ಪ್ರವಾಸೋದ್ಯಮ,ಸಂಸ್ಕøತಿ ಸಚಿವ ಜಿ.ಕಿಶನ್ ರೆಡ್ಡಿ ಹಂಪಿ(ವಿಜಯನಗರ ಜಿಲ್ಲೆ): ಕರ್ನಾಟಕ ರಾಜ್ಯದಲ್ಲಿರುವ ಹೋಯ್ಸಳ ವಾಸ್ತುಶಿಲ್ಪ ಶೈಲಿಯ ಬೇಲೂರು,ಹಳೇಬಿಡು,ಸೋಮನಾಥಪುರ ಸೇರಿದಂತೆ ದೇಶದಲ್ಲಿರುವ 41 ಸ್ಮಾರಕಗಳನ್ನು ವಿಶ್ವಪರಂಪರೆ ತಾಣಗಳೆಂದು ಗುರುತಿಸುವಂತೆ ಕೋರಿ ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ,ಸಂಸ್ಕøತಿ,ಈಶಾನ್ಯ ರಾಜ್ಯಗಳ ಪ್ರದೇಶಾಭಿವೃದ್ಧಿ ಸಚಿವ ಜಿ. ಕಿಶನ್ ರೆಡ್ಡಿ ಅವರು …

ಬೇಲೂರು,ಹಳೇಬಿಡು ಸೇರಿ 41 ಸ್ಮಾರಕಗಳನ್ನು ವಿಶ್ವಪರಂಪರೆ ತಾಣಗಳೆಂದು ಪರಿಗಣಿಸಲು ಯುನೆಸ್ಕೋಗೆ ಪ್ರಸ್ತಾವನೆ ಸಲ್ಲಿಕೆ: ಕೇಂದ್ರ ಪ್ರವಾಸೋದ್ಯಮ,ಸಂಸ್ಕøತಿ ಸಚಿವ ಜಿ.ಕಿಶನ್ ರೆಡ್ಡಿ Read More »

ದಾವಣಗೆರೆಮತ್ತೆ ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ; ನಡೆಯದ ಕಾಂಗ್ರೆಸ್ ಆಟ

ದಾವಣಗೆರೆ: ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿಯ ಮ್ಯಾಜಿಕ್ ವರ್ಕೌಟ್ ಆಗಿದ್ದು, ಮತ್ತೊಮ್ಮೆ ಬಿಜೆಪಿ ದಾವಣಗೆರೆ ಮಹಾನಗರ ಪಾಲಿಕೆ ಅಧಿಕಾರಕ್ಕೇರಿದೆ. ಇನ್ನು ಕಾಂಗ್ರೆಸ್ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ಅಧಿಕಾರಕ್ಕೇರಲು ಸಾಧ್ಯವಾಗಿಲ್ಲ. ದಾವಣಗೆರೆ ಮಹಾ ನಗರಪಾಲಿಕೆ 30ನೇ ವಾರ್ಡ್‌ನ ಪಕ್ಷೇತರ ಅಭ್ಯರ್ಥಿ ಆರ್. ಜಯಮ್ಮ ಗೋಪಿನಾಯ್ಕ ಹಾಗೂ ಉಪಮೇಯರ್ ಆಗಿ 8ನೇ ವಾರ್ಡ್‌ನ ಬಿಜೆಪಿಯ ಗಾಯಿತ್ರಮ್ಮ ಖಂಡೋಜಿರಾವ್ 3ನೇ ಅವಧಿಗೆ ಆಯ್ಕೆಯಾಗಿದ್ದಾರೆ. ಬಿಜೆಪಿಗೆ 18 ಸದಸ್ಯರು, 4 ಪಕ್ಷೇತರರು, ಒರ್ವ ಶಾಸಕ, ಸಂಸದ ಹಾಗೂ 5 ವಿಧಾನ ಪರಿಷತ್ …

ದಾವಣಗೆರೆಮತ್ತೆ ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ; ನಡೆಯದ ಕಾಂಗ್ರೆಸ್ ಆಟ Read More »

ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್ ವುಡ್ ಹಿರಿಯ ನಟ ರಾಜೇಶ್ (೮೭) ಶನಿವಾರ ಕೊನೆಯುಸಿರೆಳೆದಿದ್ದಾರೆ

ಶನಿವಾರ ಮುಂಜಾನೆ ೨.೩೦ರ ಸುಮಾರಿಗೆ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ರಾಜೇಶ್ ಅವರ ಅಳಿಯ ಮತ್ತು ನಟ ಅರ್ಜುನ್ ಸರ್ಜಾ ಮಾಹಿತಿ ನೀಡಿದ್ದಾರೆ.ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಗಣ್ಯರು, ಅಭಿಮಾನಿಗಳು ಮತ್ತು ಆಪ್ತರು ಕಂಬನಿ ಮಿಡಿಯುತ್ತಿದ್ದಾರೆ. ಕನ್ನಡ ಚಿತ್ರರಂಗ ನಟ. ರಾಜ್ ಕುಮಾರ್, ಉದಯ ಕುಮಾರ್, ಕಲ್ಯಾಣ ಕುಮಾರ್ ಅವರ ಸಮಕಾಲೀನರಾಗಿ ಅಂತಹ ಮಹಾನ್ ಪ್ರತಿಭೆಗಳ ಕಾಲದಲ್ಲಿ ಕೂಡಾ ತಮ್ಮದೇ ಆದ ವಿಶಿಷ್ಟ ಛಾಪನ್ನು ಚಿತ್ರಂಗದಲ್ಲಿ ಮೂಡಿಸಿದ್ದವರು. ಕಲಾ ತಪಸ್ವಿ’ ರಾಜೇಶ್ ಅವರು ಏಪ್ರಿಲ್ ೧೫, ೧೯೩೨ …

ಅನಾರೋಗ್ಯದಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಯಾಂಡಲ್ ವುಡ್ ಹಿರಿಯ ನಟ ರಾಜೇಶ್ (೮೭) ಶನಿವಾರ ಕೊನೆಯುಸಿರೆಳೆದಿದ್ದಾರೆ Read More »

Translate »
Scroll to Top