ಡೈನಮಿಕ್ಸ್ ತಂಡಕ್ಕೆ ಮೊದಲ ಬಹುಮಾನ

ದೇವನಹಳ್ಳಿ,ಮಾ,2 : ಇಂದಿನ ಯುವ ಪೀಳಿಗೆ ಅಂತರ್ಜಾಲದ ಮೂಲಕ ಮೊಬೈಲ್ ಗಳಲ್ಲಿ ಆಟವಾಡುತ್ತಾರೆ ಅದನ್ನು ಬಿಟ್ಟು ಮೈದಾನದಲ್ಲಿ ಆಡಿದಾಗ ಮಾತ್ರ ದೇಹ ಸಧೃಡವಾಗಿ ಆರೋಗ್ಯವಂತರಾಗಿರಲು ಸಾಧ್ಯ ದಿನದಲ್ಲಿ ಒಂದು ತಾಸಾದರು ಕ್ರೀಡೆಗೆ ಒತ್ತು ನೀಡಬೇಕೆಂದು ಅಕ್ಷತ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ದೇವರಾಜ್ ತಿಳಿಸಿದರು. ದೇವನಹಳ್ಳಿ ತಾಲ್ಲೂಕು ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜು ಆಟದ ಮೈದಾನದಲ್ಲಿ ವಿಜಯಮಾರುತಿ ಕ್ರಿಕೆಟ್ ತಂಡ, ಎಸ್ ಆರ್ ಎಸ್ ಬಾಯ್ಸ್ ಹಾಗೂ ಅಕ್ಷತಾ ಚಾರಿಟಬಲ್ ಟ್ರಸ್ಟ್ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಜಯಪುರ ಪ್ರೀಮಿಯರ್‌ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿ ಯುವಕರು ಕ್ರೀಡೆಗಳಿಂದ ಹೆಚ್ಚು ಸ್ನೇಹಿತರನ್ನು ಗಳಿಸಬಹುದು, ಯಾವುದೇ ಕೆಟ್ಟು ಚಟಗಳಿಗೆ ದಾಸರಾಗದೇ ಮತ್ತು ಬೆಟ್ಟಿಂಗ್ ಧಂಗೆಗೆ ಬೀಳದೇ ಕ್ರೀಡೆಯನ್ನು ಕ್ರೀಡೆಯಾಗಿಯೇ ಮುಂದುವರಿಸಬೇಕು. ಸೋಲು ಗೆಲುವು ನಾಣ್ಯದ ಎರಡು ಮುಖವಿದ್ದಂತೆ ಎರಡನ್ನು ಸಮನಾಗಿ ಸ್ವೀಕರಿಸಿ ಇಂದು ಸೋತವರು ಶ್ರಮ ಪಟ್ಟರೆ ಮುಂದೆ ಜಯ ನಿಮ್ಮದಾಗುತ್ತದೆ, ಯುವಕರು ಕ್ರಿಕೆಟ್ ಪಂದ್ಯಕ್ಕೆ ಸೀಮಿತಗೊಳಿಸದೇ ದೇಸೀಯ ಕ್ರೀಡೆಗಳಲ್ಲು ಭಾಗವಹಿಸಬೇಕೆಂದು ಕ್ರೀಡಾಪಟುಗಳಿಗೆ ಸಲಹೆ ನೀಡಿದರು.

ವಿಜಯಪುರ ಪ್ರೀಮಿಯರ್ ಲೀಗ್ ನಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು ಫೈನಲ್ ಪಂದ್ಯದಲ್ಲಿ ಅಫ್ಸರ್ ಮಾಲೀಕತ್ವದ ವಿಜಯಪುರ ಡೈನಮಿಕ್ಸ್ ತಂಡ ಮತ್ತು ಕಿಶೋರ್ ಮಾಲೀಕತ್ವದ ವಿಜಯಪುರ ಟೈಟಾನ್ಸ್ ತಂಡ ಸೆಣೆಸಾಟದಲ್ಲಿ ಮೊದಲ ಬಹುಮಾನ ವಿಜಯಪುರ ಡೈನಮಿಕ್ಸ್ ತಂಡ ಪಡೆದರೆ ರನ್ನರ್ ಅಪ್ ಆಗಿ ವಿಜಯಪುರ ಟೈಟಾನ್ಸ್ ತಂಡ ತನ್ನದಾಗಿಸಿಕೊಂಡಿತು.

Leave a Comment

Your email address will not be published. Required fields are marked *

Translate »
Scroll to Top