hosapete

ವಿಜಯನಗರ ಜಿಲ್ಲೆಯ ವಿವಿಧ ಹುದ್ದೆಗಳಿಗೆ ನೇಮಕ

ಹೊಸಪೇಟೆ : ಹಂಪಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ವಿಜಯನಗರ ಕ್ಷೇತ್ರದ ಶಾಸಕ HR ಗವಿಯಪ್ಪ ಅವರನ್ನು ನೇಮಕ ಮಾಡಲಾಗಿದೆ. ಅದೇ ರೀತಿ ಹೊಸಪೇಟೆಯ ಹುಡಾ ಅಧ್ಯಕ್ಷರಾಗಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್.ಎನ್.ಎಫ್. ಇಮಾಮ್ ನಿಯಾಜಿ ನೇಮಕ ವಾಗಿದ್ದಾರೆ.

ವಿಜಯನಗರ ಜಿಲ್ಲಾ ಪೊಲೀಸರಿಂದ 10 ಕಿಮಿ ಮ್ಯಾರಾಥಾನ್

ಹೊಸಪೇಟೆ : ಕರ್ನಾಟಕ ರಾಜ್ಯ ಪೊಲೀಸ್ ಸುವರ್ಣ ಮಹೋತ್ಸವದ ಅಂಗವಾಗಿ ಹಂಪಿಯ ವಿಜಯ ವಿಠ್ಠಲ ದೇಗುಲದಿಂದ 10 ಕಿಮೀ ಮ್ಯಾರಾಥಾನ್ ಆಯೋಜಿಸಿದ್ದು, ವಿಜಯನಗರ ಎಸ್ಪಿ ಶ್ರೀಹರಿಬಾಬು ಬಿಎಲ್ ಚಾಲನೆ ನೀಡಿದ್ದು, IRB ಕಮಾಂಡೆಂಟ್ ರಾಮಕೃಷ್ಣ ಸಾಥ್ ನೀಡಿದರು.

ಅಟಲ್‌ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ಗೆ ಬಂದ ಹೊಸ ಜಿರಾಫೆ

ವಿಜಯನಗರ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಅಟಲ್‌ಬಿಹಾರಿ ವಾಜಪೇಯಿ ಜೂಲಾಜಿಕಲ್‌ ಪಾರ್ಕ್‌ಗೆ ಮತ್ತೊಂದು ಜಿರಾಫೆ ಆಗಮನವಾಗಿದೆ. ಕಳೆದ ವರ್ಷ ಹಂಪಿ ಉತ್ಸವದ ವೇಳೆಗೆ ಬಿಹಾರದ ಪಾಟ್ನಾದಿಂದ ಹೆಣ್ಣು ಜಿರಾಫೆ ತರಲಾಗಿತ್ತು. ಈಗ ಮೈಸೂರು ಮೃಗಾಲಯದಿಂದ ಗಂಡು ಜಿರಾಫೆ ಅತಿಥಿಯಾಗಿ ಬಂದಿದೆ.

ಕಲುಷಿತ ನೀರು ಸೇವನೆಯಿಂದ ಮಹಿಳೆ ಸಾವು ಪ್ರಕರಣ : ನಗರ ಸಭೆ ಆಯುಕ್ತ ಸೇರಿ ಮೂವರ ಅಮಾನತು

ಬೆಂಗಳೂರು : ವಿಜಯನಗರ ಜಿಲ್ಲೆ ಹೊಸಪೇಟೆ ನಗರಸಭೆಯ ಕಾರಿಗನೂರಿನ ವಾರ್ಡ್ 22ರಲ್ಲಿ ಕಲುಷಿತ ನೀರು ಸೇವಿಸಿ 35 ಮಂದಿ ಅಸ್ವಸ್ಥಗೊಂಡು ಸೀತಮ್ಮ ಎಂಬುವವರು ಮೃತ ಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಆಯುಕ್ತರಾದ ಬಂಡಿ ವಡ್ಡರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸತೀಶ್ ಹಾಗೂ ಕಿರಿಯ ಅಭಿಯಂತರ ಖಾಜಿ ಅವರನ್ನು ಅಮಾನತುಗೊಳಿಸಲು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸೂಚನೆ ನೀಡಿದ್ದಾರೆ.

ಪೊಲೀಸರಿಂದ ಡ್ರಗ್ಸ್ ವಿರುದ್ಧ ಜಾಗೃತಿ ಜಾಥಾ

ಹೊಸಪೇಟೆ : ಮಾದಕ ದ್ರವ್ಯ ವಿರೋಧಿ ದಿನಾಚರಣೆ ನಿಮಿತ್ತ ಡ್ರಗ್ಸ್ ವಿರುದ್ಧ ಜಾಗೃತಿ ಜಾಥಾ
ನಡೆಸಲಾಗಿದ್ದು, ಸಾವಿರಾರು ವಿದ್ಯಾರ್ಥಿಗಳು, ಪೊಲೀಸರು ಇನ್ನಿತರೆ ಅಧಿಕಾರಿಗಳು ಭಾಘವಹಿಸಿದ್ದರು.

ವಿಜಯನಗರ ಜಿಲ್ಲೆಯಲ್ಲಿ ಗಾಂಜಾ ಪೆಡ್ಲರ್ ಗಳ ಮೇಲೆ ದಾಳಿ

ಹೊಸಪೇಟೆ : ವಿಜಯನಗರ ಜಿಲ್ಲೆಯಾದ್ಯಂತ ಗಾಂಜಾ ರೈಡ್ ಮಾಡಿದ ಪೊಲೀಸರು ಅಕ್ರಮವಾಗಿ ಗಾಂಜಾ ಮಾರಾಟ ಮತ್ತು ಸೇವನೆಗೆ ಸಂಬಂಧಿಸಿದಂತೆ 9 ಪ್ರಕರಣಗಳು ದಾಖಲು ಮಾಡಿದ್ದಾರೆ.

ಬ್ರೇಕ್ ಫೇಲ್ : ಖಾಸಗಿ ಟಿಟಿ ವಾಹನ ಪಲ್ಟಿ

ಹೊಸಪೇಟೆ : ಹಂಪಿ ಪ್ರವಾಸಕ್ಕೆ ಬಂದಿದ್ದ ಖಾಸಗಿ ವಾಹನದ ಬ್ರೇಕ್ ಫೇಲ್ ಆಗಿ ಪಲ್ಟಿ ಹೊಡೆದಿದ್ದು, ವಾಹನದಲ್ಲಿದ್ದವರಲ್ಲಿ ಇಬ್ಬರಿಗೆ ಸಣ್ಣ- ಪುಟ್ಟ ಗಾಯಗಳಾದ ಘಟನೆ ಇಂದು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಹಂಪೆಯಲ್ಲಿ ನಡೆದಿದೆ.

ಹಾಡು ಹಗಲೇ ಕುರಿ ಹೊತ್ತೊಯ್ದ ಚಿರತೆ

ಹೊಸಪೇಟೆ : ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ದೇವಲಾಪುರ ಗ್ರಾಮದಲ್ಲಿ ರೈತ ತಿಪ್ಪಣ್ಣ ಎಂಬುವವರಿಗೆ ಸೇರಿದ ಕುರಿಯನ್ನು ಚಿರತೆಯೊಂದು ಹೊತ್ತೊಯ್ದ ಘಟನೆ ವರದಿಯಾಗಿದೆ.

ಸಚಿವ ಶಿವಾನಂದ ಪಾಟೀಲ್ ವಿರುದ್ಧ ರೈತರ ಪ್ರತಿಭಟನೆ

ವಿಜಯನಗರ : ಸಚಿವ ಶಿವಾನಂದ ಪಾಟೀಲ್ ಭಾವಚಿತ್ರಕ್ಕೆ ಚಪ್ಪಲಿ ಸೇವೆ, ಬಾರುಕೋಲು ಚಾಟಿ ಏಟು ನೀಡುವ ಮೂಲಕ ಶಿವಾನಂದ್ ಪಾಟೀಲ್ ವಿರುದ್ಧ ರೈತರು ಪ್ರತಿಭಟನೆ ನಡೆಸಿದರು.

ವಿಜಯನಗರದಲ್ಲಿ ಇಬ್ಬರಿಗೆ ಕೊರೋನಾ ಪಾಸಿಟಿವ್ ಧೃಡ

ವಿಜಯನಗರ : ಕರ್ನಾಟಕದಲ್ಲಿ ಈಗಾಗಲೇ ಕೊರೋನಾ ಪ್ರಕರಣಗಳ ಸಂಖ್ಯೆ ದಿನೆ ದಿನೇ ಹೆಚ್ಚಳವಾಗುತ್ತಿದ್ದು, ಇದೀಗ ವಿಜಯನಗರ ಜಿಲ್ಲೆಯಲ್ಲಿಯೂ ಎರಡು ಕೊರೋನಾ ಪ್ರಕರಣಗಳು ದೃಢಪಟ್ಟಿವೆ.

Translate »
Scroll to Top